'ಹುಡುಗರು' ನಟಿ ಅಭಿನಯಾ ರಹಸ್ಯ ನಿಶ್ವಿತಾರ್ಥ; ಹುಡುಗನ ಗುಟ್ಟು.. ವಿಶಾಲ್ ಕಡೆಗೆ ಬೊಟ್ಟು

By ಫಿಲ್ಮಿಬೀಟ್ ಡೆಸ್ಕ್

ದಕ್ಷಿಣ ಭಾರತದ ನಟ ವಿಶಾಲ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ 12 ವರ್ಷಗಳ ಹಳೆಯ ಸಿನಿಮಾ 'ಮದಗಜರಾಜ' ಸಿನಿಮಾ ಬಿಡುಗಡೆ ವೇಳೆ ಇವರ ಕೈ ನಡುಗಿದ ಸಂಗತಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ವಿಶಾಲ್‌ಗೆ ಅನಾರೋಗ್ಯ ಕಾಡುತ್ತಿದೆ. ಮಾದಕ ವಸ್ತುಗಳ ಅತಿಯಾದ ಸೇವನೆಯೇ ಇಷ್ಟಕ್ಕೆಲ್ಲ ಕಾರಣ, ಹೀಗೆ ನೂರೆಂಟು ಆರೋಪಗಳು ಬಂದಿದ್ದವು.

ಈಗ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ನಟಿಸಿದ 'ಹುಡುಗರು' ಸಿನಿಮಾದ ನಟಿಸಿದ್ದ ತಮಿಳು ನಟಿ ಅಭಿನಯಾ ನಿಶ್ವಿತಾರ್ಥ ಮಾಡಿಕೊಂಡಿರುವುದಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ, ಹುಡುಗ ಯಾರು ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಕೇವಲ ಒಂದು ಇಬ್ಬರು ಕೈಗಳ ಫೋಟೊಗಳನ್ನು ಹಂಚಿಕೊಂಡಿದ್ದರು.

Is Hudugaru actress Abhinaya secretly engaged to Vishal here is the fact

ಅಭಿನಯಾ ನಿಶ್ವಿತಾರ್ಥದ ಪೋಸ್ಟ್ ಮಾಡುತ್ತಿದ್ದಂತೆ ವಿಶಾಲ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಅಭಿನಯಾ ಮದುವೆ ಆಗುತ್ತಿರುವ ಹುಡುಗ ವಿಶಾಲ್ ಇರಬಹುದಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. 47 ವರ್ಷ ಆದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದುಕೊಂಡಿರುವ ವಿಶಾಲ್ ಈ ನಟಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಯೇ? 'ಹುಡುಗರು' ನಟಿ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿದ್ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇನ್ನೂ ಮದುವೆ ಆಗದೆ ಇರುವ ಸಾಕಷ್ಟು ಹೀರೋಗಳಿದ್ದಾರೆ. ಪ್ರಭಾಸ್, ಸಿಂಬು, ವಿಶಾಲ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ. ಈಗ ಚರ್ಚೆಯಲ್ಲಿ ಇರೋದು ವಿಶಾಲ್. ಕಾಲಿವುಡ್‌ನ ಈ ಆಕ್ಷನ್ ಹೀರೋ ವಿವಾಹದ ವಿಚಾರದಲ್ಲಿ ಮಾತ್ರ ಹಿಂದುಳಿದು ಬಿಟ್ಟಿದ್ದಾರೆ. ಇವರೊಂದಿಗೆ ಹಲವು ನಟಿಯರ ಹೆಸರುಗಳು ಕೇಳಿ ಬಂದರೂ, ಅದೆಲ್ಲ ಗಾಳಿ ಸುದ್ದಿಗಳಾಗಿಯೇ ಉಳಿದುಕೊಂಡಿವೆ.

ವಿಶಾಲ್ ಜೊತೆ ತಳುಕು ಹಾಕಿಕೊಂಡ ನಟಿಯರ ಸಾಲಿನಲ್ಲಿ ಅಭಿನಯಾ ಹೆಸರು ಕೂಡ ಇತ್ತು. 'ಹುಡುಗರು' ಸಿನಿಮಾದ ಈ ನಟಿಗೆ ಕಿವಿ ಕೇಳಿಸುವುದಿಲ್ಲ. ಮಾತು ಬರುವುದಿಲ್ಲ. ಇಷ್ಟೊಂದು ಸಮಸ್ಯೆಯ ನಡುವೆಯೂ ಸಿನಿಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಆದರೆ, ಕೆಲವು ವರ್ಷಗಳ ಹಿಂದೆ ವಿಶಾಲ್ ಜೊತೆ ನಟಿಸುವಾಗ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ. ವಿಶಾಲ್ ಹಾಗೂ ಅಭಿನಯಾ ಇಬ್ಬರೂ ರಹಸ್ಯವಾಗಿ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈಗ ಅಭಿನಯಾ ತನ್ನ ನಿಶ್ವಿತಾರ್ಥದ ಫೋಟೊವನ್ನು ಶೇರ್ ಮಾಡಿದ್ದರು. ಅದರಲ್ಲಿ ಹುಡುಗನ ಕೈ ಮಾತ್ರ ಕಾಣಿಸುತ್ತಿದೆ. ಹೀಗಾಗಿ ವಿಶಾಲ್ ಇರುಬಹುದಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಅಸಲಿ ಮ್ಯಾಟರ್ ಏನಂದರೆ, ಅಭಿನಯಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇವರಿಬ್ಬರ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿದ್ದರು. "ವಿಶಾಲ್ ಪ್ರಪೋಸ್ ಮಾಡಿ ತನ್ನನ್ನು ಮದುವೆ ಆದ ಅನ್ನೋ ವದಂತಿಗಳು ಹಬ್ಬಿದ್ದವು. ಅದೆಲ್ಲವೂ ಸುಳ್ಳು. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ನಟಿ ಅಭಿನಯಾ ಹೇಳಿಕೊಂಡಿದ್ದರು. ಹಾಗೇ ತನಗೂ ಒಬ್ಬ ಬಾಯ್‌ಫ್ರೆಂಡ್ ಇದ್ದು 15 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ಅಭಿನಯಾ ತಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದರು. ಬಾಲ್ಯದ ಗೆಳೆಯನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಓಪನ್ ಆಗಿ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳಬಹುದು ಎಂದು ಹೇಳಿಕೊಂಡಿದ್ದರು. "ನಾನು ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ. ನನಗೂ ಒಬ್ಬ ಬಾಯ್‌ಫ್ರೆಂಡ್ ಇದ್ದಾನೆ. ನಾವಿಬ್ಬರೂ 15 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ಗೆಳೆಯನೊಂದಿಗೆ ನಾನು ಯಾವುದೇ ವಿಷಯದ ಬಗ್ಗೆ ಓಪನ್‌ ಆಗಿ ಮಾತಾಡಬಲ್ಲೆ. ನಮ್ಮಿಬ್ಬರ ಮಾತುಕತೆಯಲ್ಲಿ ಯಾವುದೇ ಜಡ್ಜ್‌ಮೆಂಟ್ ಇರುವುದಿಲ್ಲ" ಎಂದು ಹೇಳಿಕೊಂಡಿದ್ದರು.

More from Filmibeat

English summary
Is Hudugaru actress Abhinaya secretly engaged to Vishal? here is the fact
Read more about: vishal engagement kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X