ರಜನಿಕಾಂತ್ 'ವೆಟ್ಟೆಯಾನ್' ಚಿತ್ರದಲ್ಲಿ ಆ ಪಾತ್ರ ರಿಜೆಕ್ಟ್ ಮಾಡಿದ್ರಾ ನಟ ನಾನಿ?

ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಫಸ್ಟ್ ವೀಕೆಂಡ್ ಬಳಿಕ ಕಳೆದೆರಡು ದಿನಗಳಿಂದ ಸಿನಿಮಾ ಗಳಿಕೆ ಕಮ್ಮಿ ಆಗಿದೆ. ಆದರೆ ಫಸ್ಟ್ ವೀಕೆಂಡ್‌ನಲ್ಲಿ ವಿಶ್ವದಾದ್ಯಂತ ಚಿತ್ರ 240 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ.

ರಜನಿಕಾಂತ್ ಜೊತೆಗೆ 'ವೆಟ್ಟೆಯಾನ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್ ರೀತಿಯ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಎಲ್ಲರಿಗೂ ಒಳ್ಳೆ ಪಾತ್ರಗಳೇ ಸಿಕ್ಕಿವೆ. ಆದರೂ ಸೂಪರ್ ಸ್ಟಾರ್ ಆರ್ಭಟದ ಎದುರು ಎಲ್ಲರೂ ಸಪ್ಪೆ ಎನಿಸಿಬಿಟ್ಟಿದ್ದಾರೆ. ಒಂದು ಎನ್‌ಕೌಂಟರ್ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ.

Is it true Nani rejected a role in Rajinikanth starrer Vettaiyan

ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ 'ವೆಟ್ಟೆಯಾನ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ದಳಪತಿ ವಿಜಯ್ ಅಭಿಮಾನಿಗಳು ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಹಾಕಿದ್ದರು. ಆದರೂ ಅದನ್ನೆಲ್ಲಾ ಮೀರಿ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಫ್ಯಾಮಿಲಿ ಆಡಿಯನ್ಸ್ ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಈ ಹಿಂದೆ 'ಜೈಭೀಮ್' ರೀತಿ ಕಂಟೆಂಟ್ ಓರಿಯಂಟೆಡ್ ಸಿನಿಮಾ ಮಾಡಿದ್ದ ಜ್ಞಾನವೇಲ್ 'ವೆಟ್ಟೆಯಾನ್' ಚಿತ್ರದಲ್ಲೂ ಅದೇ ಪ್ರಯತ್ನ ಮಾಡಿದ್ದಾರೆ. ಆ ಚಿತ್ರದಲ್ಲಿ ಆರೋಪಿಗಳ ಮೇಲೆ ವಿಚಾರಣೆ ಹೆಸರಿನಲ್ಲಿ ಪೊಲೀಸರ ದೌರ್ಜನ್ಯ ಹಾಗೂ ಎನ್‌ಕೌಂಟರ್ ಬಗ್ಗೆ ಚಿತ್ರದಲ್ಲಿ ಚರ್ಚಿಸಿದ್ದರು. ಈ ಬಾರಿ ರಜನಿಕಾಂತ್ ಅವರನ್ನಿಟ್ಟುಕೊಂಡು ಅದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿದ್ದಾರೆ. ಅದರಲ್ಲಿ ಭಾಗಶಃ ಸಕ್ಸಸ್ ಕಂಡಿದ್ದಾರೆ.

Is it true Nani rejected a role in Rajinikanth starrer Vettaiyan

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ 'ವೆಟ್ಟೆಯಾನ್' ಸಿನಿಮಾ ನಿರ್ಮಿಸಿದೆ. ಕಲಾವಿದರಿಗೆ ಭಾರೀ ಸಂಭಾವನೆಯನ್ನೇ ಕೊಟ್ಟಿದೆ. ರಜನಿಕಾಂತ್ ಸಿನಿಮಾ ಎನ್ನುವ ಕಾರಣಕ್ಕೆ ಸ್ಟಾರ್ ನಟರೆಲ್ಲಾ ತಮ್ಮ ಪಾತ್ರ ಏನು ಎಂದು ಕೂಡ ಕೇಳದೇ ನಟಿಸೋಕೆ ಒಪ್ಪಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದರೆ ತೆಲುಗು ನಟ ನಾನಿ ಕೂಡ ಈ ಚಿತ್ರದಲ್ಲಿ ನಟಿಸಬೇಕಿತ್ತು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

ಚಿತ್ರದಲ್ಲಿ ಎಸ್‌ಪಿ ಅಥಿಯಾನ್ IPS ಪಾತ್ರದಲ್ಲಿ ರಜನಿಕಾಂತ್ ಅಬ್ಬರಿಸಿದ್ದಾರೆ. ವಿಶೇಷ ನ್ಯಾಯಧೀಶ ಸತ್ಯದೇವ್ ಪಾತ್ರದಲ್ಲಿ ಬಿಗ್‌ಬಿ ಮಾಗಿದ ನಟನೆ ನೋಡಬಹುದು. ಇನ್ನು ಅಥಿಯಾನ್ ಪತ್ನಿಯಾಗಿ ಮಂಜು ವಾರಿಯರ್ ಮಿಂಚಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಕನ್ನಡ ನಟ ಕಿಶೋರ್ ಸಹ ಕಾಣಿಸಿಕೊಂಡಿದ್ದಾರೆ. ಇನ್ನು ಕಳ್ಳನಾಗಿ ಬಳಿಕ ಪೊಲೀಸ್ ಇನ್‌ಫಾರ್ಮರ್ ಆಗಿ ಫಹಾಸ್ ಫಾಸಿಲ್ ಮಿಂಚಿದ್ದಾರೆ. ಇನ್ನು NAT ಅಕಾಡೆಮಿ ಸಂಸ್ಥಾಪಕನಾಗಿ ರಾಣಾ ನೆಗೆಟಿವ್ ರೋಲ್‌ನಲ್ಲಿ ಆರ್ಭಟಿಸಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಅಕ್ಕಪಕ್ಕದ ಭಾಷೆಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವುದು ಲೇಟೆಸ್ಟ್ ಟ್ರೆಂಡ್. 'ವೆಟ್ಟೆಯಾನ್' ಚಿತ್ರದಲ್ಲಿ ಕೂಡ ಬಾಲಿವುಡ್‌ನಿಂದ ಬಿಗ್‌ಬಿ, ತೆಲುಗಿನಿಂದ ರಾಣಾ, ಕನ್ನಡದಿಂದ ಕಿಶೋರ್ ಹಾಗೂ ಮಲಯಾಳಂನಿಂದ ಫಹಾದ್ ಹಾಗೂ ಮಂಜು ವಾರಿಯರ್ ಆಯ್ಕೆ ಆಗಿದ್ದರು. ಆಯಾ ಪಾತ್ರಕ್ಕೆ ಸೂಕ್ತರಾದ ಕಲಾವಿದರನ್ನೇ ಆಯ್ಕೆ ಮಾಡಿದ್ದರೂ ಬೇರೆ ಬೇರೆ ಭಾಷೆಗಳಿಂದ ಆರಿಸಿಕೊಳ್ಳಲಾಗಿದೆ.

ಸೈಬರ್ ಪ್ಯಾಟ್ರಿಕ್ ಅಲಿಯಾಸ್ ಬ್ಯಾಟರಿ ಎನ್ನುವ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ಆರಂಭದಿಂದಲೂ ರಜನಿಕಾಂತ್ ಪಾತ್ರದ ಜೊತೆ ಜತೆಗೆ ಸಾಗುವ ಪಾತ್ರ ಇದು. ಈ ಪಾತ್ರವನ್ನು ಬಹಳ ಸೊಗಸಾಗಿ ನಿರ್ದೇಶಕರು ಡಿಸೈನ್ ಮಾಡಿದ್ದು ಅದಕ್ಕೆ ಅಷ್ಟೇ ಸೊಗಸಾಗಿ ಫಹಾದ್ ನ್ಯಾಯ ಒದಗಿಸಿದ್ದಾರೆ. ಸಿನಿಮಾ ನೋಡಿ ಹೊರ ಬಂದಮೇಲೂ ಈ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಇದೇ ಪಾತ್ರಕ್ಕೆ ನಿರ್ದೇಶಕರ ಮೊದಲು ತೆಲುಗು ನಟ ನಾನಿ ಆಗಿದ್ದರಂತೆ. ಇಂತಾದೊಂದು ಊಹಾಪೋಹ ಶುರುವಾಗಿದೆ.

ಮೊದಲಿಗೆ ಪ್ಯಾಟ್ರಿಕ್ ಪಾತ್ರಕ್ಕೆ ನಾನಿ ಅವರನ್ನು ಸಂಪರ್ಕಿಸಲಾಗಿತ್ತು. ಅವರು ಒಪ್ಪಲಿಲ್ಲ. ಬಳಿಕ ಆ ಪಾತ್ರ ಫಹಾದ್ ಪಾಲಾಯಿತು ಎನ್ನುವ ಅಂತೆಕಂತೆ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹೇಳಿ ಕೇಳಿ ನಟ ನಾನಿಗೆ ರಜನಿಕಾಂತ್ ಅಂದರೆ ಬಹಳ ಇಷ್ಟ. ಒಂದು ವೇಳೆ ಇಂತಾದೊಂದು ಅವಕಾಶ ಅವರಿಗೆ ಸಿಕ್ಕಿದ್ದರೆ ಖಂಡಿತ ಬಿಡುತ್ತಿರಲಿಲ್ಲ. ಇದೆಲ್ಲಾ ಬರೀ ಊಹಾಪೋಹ ಎನ್ನುವ ಮಾತುಗಳು ಕೇಳಿಬರ್ತಿದೆ.

More from Filmibeat

English summary
Telugu Nani was in talks for a role in Rajinikanth's Vettaiyan;
Read more about: kollywood rajinikanth nani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X