ಖ್ಯಾತ ನಿರ್ದೇಶಕ ಮಣಿರತ್ನಂ ಜೊತೆ ಕೆಲಸ ಮಾಡಲು ನಿರಾಕರಿಸಿದ ನಟ ನಾನಿ ಮತ್ತು ನಾಗಚೈತನ್ಯ
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಮಣಿರತ್ನಂ ಕೂಡ ಒಬ್ಬರು. ವಿಭಿನ್ನ ಸಿನಿಮಾಗಳ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸುತ್ತ ಬಂದಿದ್ದಾರೆ. ಮಣಿರತ್ನಂ ಸಿನಿಮಾದಲ್ಲಿ ತಾವು ಕೂಡ ನಟಿಸಬೇಕು ಎನ್ನವ ಆಸೆ ಪ್ರತಿಯೊಬ್ಬ ಕಲಾವಿದರಿಗೂ ಇದೆ. ಮಣಿರತ್ನಂ ಸಿನಿಮಾ ಜೊತೆಗೀಗ ವೆಬ್ ಸಿರೀಸ್ ನಲ್ಲಿಯೂ ಬ್ಯುಸಿಯಾಗುತ್ತಿದ್ದಾರೆ.
Recommended Video
ಮಣಿರತ್ನಂ 'ನವರಸಂ' ಎನ್ನುವ ಹೆಸರಿನಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಈ ವೆಬ್ ಸೀರಿಸ್ ಗೆ 9 ಜನ ನಿರ್ದೇಶಕರಿರಲಿದ್ದಾರೆ. ಅಂದರೆ 9 ವಿಭಿನ್ನ ಕಥೆಗಳು ಈ ವೆಬ್ ಸೀರಿಸ್ ನಲ್ಲಿ ಇರಲಿದೆ. ಸರಣಿಯ ಒಂದು ಸಂಚಿಕೆಯಲ್ಲಿ ತಮಿಳಿನ ಖ್ಯಾತ ನಟ ಸೂರ್ಯ, ಸಿದ್ಧಾರ್ಥ್ ಮತ್ತು ಅರವಿಂದ್ ಸ್ವಾಮಿ ಸೇರಿದ್ದಂತೆ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಮಣಿರತ್ನಂ ಜೊತೆ ಕೆಲಸ ಮಾಡಲು ತೆಲುಗು ನಟರಾದ ನಾನಿ ಮತ್ತು ನಾಗಚೈತನ್ಯ ಇಬ್ಬರು ನಿರಾಕರಿಸಿದ್ದಾರಂತೆ. ಮುಂದೆ ಓದಿ..

ವೆಬ್ ಸರಣಿ ತಿರಸ್ಕರಿಸಿದ ನಾನಿ ಮತ್ತು ನಾಗಚೈತನ್ಯ
ಈಗಾಗಲೆ ವೆಬ್ ಸರಣಿಯ ಪ್ರಿ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದಂತೆ. ವೆಬ್ ಸೀರಿಸ್ ಗೆ ಮಣಿರತ್ನಂ ಅವರೆ ಬಂಡವಾಳ ಹೂಡುತ್ತಿದ್ದಾರೆ. ತಾವೆ ನಿರ್ಮಿಸುತ್ತಿರುವ ವೆಬ್ ಸರಣಿಗೆ ತೆಲುಗು ನಟ ನಾನಿ ಮತ್ತು ನಾಗಚೈತನ್ಯ ಅವರನ್ನು ವೆಬ್ ಸೀರಿಸ್ ಗೆ ಕರೆತರುವ ಪ್ಲಾನ್ ಮಾಡಿದ್ದರು. ಆದರೆ ನಾನಿ ಮತ್ತು ನಾಗಚೈತನ್ಯ ಮಣಿರತ್ನಂ ವೆಬ್ ಸೀರಿಸ್ ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಮಣಿರತ್ನಂ ಸಿನಿಮಾ ರಿಜೆಕ್ಟ್ ಮಾಡಿದ್ದ ರಾಮ್ ಮತ್ತು ಮಹೇಶ್
ಒಂದುಕಾಲದಲ್ಲಿ ಮಣಿರತ್ನಂ ಸಿನಿಮಾದಲ್ಲಿ ನಟಿಸಲು ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ಆದರೀಗ ಮಣಿರತ್ನಂ ಸಿನಿಮಾಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಅದರಲ್ಲೂ ತೆಲುಗು ಕಲಾವಿದರು ಮಣಿರತ್ನಂ ಜೊತೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆಯೂ ಮಹೇಶ್ ಬಾಬು ಮತ್ತು ರಾಮ್ ಚರಣ್ ಮಣಿರತ್ನಂ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರಂತೆ. ಇದೀಗ ನಾನ್ ಮತ್ತು ನಾನಿ ಸರದಿ.

ನಾನಿ ಮತ್ತು ನಾಗಚೈತನ್ಯ ರಿಜೆಕ್ಟ್ ಮಾಡಲು ಕಾರಣ?
ನಾನಿ ಮತ್ತು ನಾಗಚೈತನ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಸಿನಿಮಾ ರೆಜೆಕ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇವರಿಬ್ಬರು ವೆಬ್ ಸೀರಿಸ್ ಕಡೆ ಹೆಚ್ಚು ಒಲವು ತೋರುತ್ತಿಲ್ಲ ಎನ್ನುವ ಮಾತು ಟಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.

ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಮಣಿರತ್ನಂ
ಮಣಿರತ್ನಂ ಸದ್ಯ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ವಿಕ್ರಮ್, ಕಾರ್ತಿ, ಜಯಂ ರವಿ, ಐಶ್ವರ್ಯ ರೈ, ತ್ರಿಷಾ ಸೇರಿದ್ದಂತೆ ದೊಡ್ಡ ದೊಡ್ಡ ಕಲಾವಿದರಿದ್ದಾರೆ. ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ಕಾದಂಬರಿ ಹೆಸರನ್ನೆ ಸಿನಿಮಾಗೂ ಇಡಲಾಗಿದೆ. ದಕ್ಷಿಣ ಭಾರತದ ಖ್ಯಾತ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕರೆತರುತ್ತಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











