ವೆಟ್ಟೈಯಾನ್ ಸೋಲಿನ ಜವಾಬ್ಧಾರಿ ಹೊತ್ತು ಸಂಭಾವನೆ ವಾಪಸ್ ಕೊಡ್ತಾರಾ ರಜಿನಿಕಾಂತ್..?

ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡು ಆ ಪಾತ್ರದ ಮೂಲಕವೇ ಮ್ಯಾಜಿಕ್ ಮಾಡುವವರು ರಜಿನಿಕಾಂತ್. ತಮ್ಮ ಅಭಿನಯ ಮತ್ತು ಸ್ಟೈಲ್ ನಿಂದ ಅಸಂಖ್ಯಾತ, ಅಗಣಿತ ಅಭಿಮಾನಿಗಳನ್ನು ಸಂಪಾದಿಸಿರುವ ರಜಿನಿ ವಯಸ್ಸು ಹೆಚ್ಚಾದಂತೆ ಧಾವಂತಕ್ಕೆ ಬಿದ್ದವರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರ್ಷಕ್ಕೆ ಎರಡು ಚಿತ್ರವಾದರು ಮಾಡಬೇಕು ಎಂಬ ಹಠದೊಂದಿಗೆ ಒಂದಾದ ಮೇಲೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಆದರೆ, ಹೀಗೆ ರಜಿನಿ ಒಪ್ಪಿಕೊಂಡು ಮಾಡಿದ ಸಿನಿಮಾಗಳನ್ನೆಲ್ಲ ಪ್ರೇಕ್ಷಕರು ಮೊದಲಿನಂತೆ ತಲೆ ಮೇಲೆ ಹೊತ್ತು ಮೆರೆಸುತ್ತಿಲ್ಲ. ರಜಿನಿಗೆ ಬಹುಪರಾಕ್ ಕೂಡ ಹಾಕುತ್ತಿಲ್ಲ. ಈ ಕಾರಣಕ್ಕೆ ರಜಿನಿಗೆ ಈಗ ವಯಸ್ಸಾಯ್ತು, ರಜಿನಿ ಹೆಸರಿಗೆ ಇದ್ದ ಕ್ರೇಜ್ ಕೂಡ ಕಡಿಮೆಯಾಯ್ತು ಎನ್ನುವ ಮಾತು ಚಿತ್ರರಂಗದಲ್ಲಿಯೇ ಕೇಳಿ ಬರುತ್ತಿವೆ. ಇದಕ್ಕೆ ಪೂರಕವಾಗಿ ರಜಿನಿ ಅಭಿನಯದ ವೆಟ್ಟೈಯಾನ್ ಚಿತ್ರದ ಸಾಧನೆ ಅಷ್ಟಕಷ್ಟೇ. ಹೆಚ್ಚು ಕಡಿಮೆ 160 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಇಲ್ಲಿಯವರೆಗೆ ಮೂನ್ನೂರು ಕೋಟಿಯನ್ನು ಕೂಡ ಗಳಿಸಿಲ್ಲ. ಹೇಗೆ ಲೆಕ್ಕಾಚಾರ ಹಾಕಿದರೂ ರಜಿನಿಯ ಖದರ್ ಮತ್ತು ಸ್ಟಾರ್ ಪವರ್‌ಗೆ ವೆಟ್ಟೈಯಾನ್ ಚಿತ್ರದ ಗಳಿಕೆ ತುಂಬಾನೇ ಕಮ್ಮಿ.

Is Rajinikanth Planning to Compensate the Producer for Vettaiyan s Poor Performance Here s What We

ಈ ಕಾರಣಕ್ಕೆ ಅಸಮಾಧಾನಗೊಂಡಿರುವ ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಈಗ ರಜಿನಿ ಮನೆಯ ಬಾಗಿಲನ್ನು ಬಡೆಯುತ್ತಿದೆ. ನೀಡಲಾದ ಸಂಭಾವನೆಯನ್ನು ಮರಳಿ ಕೊಡುವಂತೆ ಕೇಳುತ್ತಿದೆ. ಹೀಗೊಂದು ಸುದ್ದಿ ಸದ್ಯಕ್ಕೆ ಚೆನ್ನೈನಲ್ಲಿ ಪಸರ್ ಆಗಿದೆ.

M9 ನ್ಯೂಸ್ ವರದಿ ಪ್ರಕಾರ ಲೈಕಾ ಸಂಸ್ಥೆ ತಮ್ಮ ಜೊತೆ ಮತ್ತೊಂದು ಚಿತ್ರ ಮಾಡುವಂತೆ ರಜಿನಿಯ ದುಂಬಾಲು ಬಿದ್ದಿದೆ. ಆದರೆ ಈ ಬಾರಿ ಕೇಳಿದಷ್ಟು ಸಂಭಾವನೆಯನ್ನು ನೀಡುವುದಿಲ್ಲ ಎಂದು ಕೂಡ ಲೈಕಾ ಕಡ್ಡಿಮುರಿದಂತೆ ರಜಿನಿಗೆ ಹೇಳಿದೆ. ಇದಕ್ಕೆ ಒಪ್ಪದೇ ಇದ್ದಲ್ಲಿ ವೆಟ್ಟೈಯಾನ್ ಚಿತ್ರಕ್ಕೆ ಪಡೆದ ಸಂಭಾವನೆಯನ್ನು ಮರಳಿ ನೀಡುವಂತೆ ಕೂಡ ಲೈಕಾ ಹೇಳಿದೆ. ಈ ಕುರಿತು ಲೈಕಾ ಸಂಸ್ಥೆಯಿಂದಾಗಲಿ ವೆಟ್ಟೈಯಾನ್ ಚಿತ್ರತಂಡದಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರ ಬೀಳದಿದ್ದರೂ ಇಂತಹದ್ದೊಂದು ಸುದ್ದಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ತಮ್ಮ ಸಂಭಾವನೆಯನ್ನು ರಜಿನಿ ವಾಪಸ್ಸು ಮಾಡುತ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇನ್ನೂ ಈ ಹಿಂದೆ ಕೂಡ ತಮ್ಮ ಸೋತಾಗ ಆ ಸೋಲಿನ ಜವಾಬ್ಧಾರಿಯನ್ನುಹೊತ್ತು ತಮ್ಮ ಸಂಭಾವನೆಯನ್ನು ನಿರ್ಮಾಪಕರು ಮತ್ತು ಹಂಚಿಕೆದಾರರಿಗೆ ನೀಡಿದ ಉದಾಹರಣೆಗಳಿವೆ. ಈ ಕಾರಣಕ್ಕೆ ವೆಟ್ಟೈಯಾನ್ ಕುರಿತು ಹಬ್ಬಿರುವ ಈ ಸುದ್ದಿಯನ್ನು ತಳ್ಳಿ ಹಾಕುವಂತೆ ಇಲ್ಲ.

ಅಂದ್ಹಾಗೇ ಈ ಹಿಂದೆ ಇದೇ ಲೈಕಾ ಸಂಸ್ಥೆ ರಜಿನಿಕಾಂತ್‌ಗೆ ಕಾಲ ಚಿತ್ರವನ್ನು ನಿರ್ಮಾಣ ಮಾಡಿತ್ತು. ಸೋಲಿನ ರುಚಿ ನೋಡಿತ್ತು. ಆ ನಂತರ ಲಾಲ್ ಸಲಾಂ ಮತ್ತು ದರ್ಬಾರ್ ಚಿತ್ರಗಳನ್ನು ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿತ್ತು. ಈಗ ವೆಟ್ಟೈಯಾನ್ ಸರದಿ. ಹೀಗಾಗಿ ಈ ಹಿಂದೆಯೆಲ್ಲ ಲೈಕಾ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ರಜಿನಿಕಾಂತ್ ಈ ಬಾರಿ ಕೂಡ ಮತ್ತೊಂದು ಚಿತ್ರ ಮಾಡಲು ಸಮ್ಮತಿಯನ್ನು ಸೂಚಿಸುತ್ತಾರೆ ಎನ್ನುವ ಮಾತು ಸದ್ಯಕ್ಕೆ ಕೇಳಿ ಬರುತ್ತಿದೆ. ಉಳಿದಂತೆ ವೆಟ್ಟೈಯಾನ್ ಚಿತ್ರದಲ್ಲಿ ರಜಿನಿಕಾಂತ್ ಜೊತೆ ಅಮಿತಾಬ್ ಬಚ್ಚನ್ ಕೂಡ ಇದ್ದಾರೆ. ಮೂರು ದಶಕದ ನಂತರ ಈ ಇಬ್ಬರು ದಿಗ್ಗಜರು ತೆರೆ ಹಂಚಿಕೊಂಡ ಹಿನ್ನೆಲೆ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ವೆಟ್ಟೈಯಾನ್ ಫೇಲಾಗಿದೆ. ಆದರೂ ಕೂಡ ಚಿತ್ರದ ನಿರ್ದೇಶಕ ಜ್ಞಾನವೇಲ್ ಈ ಚಿತ್ರದ ಪ್ರಿಕ್ವೆಲ್ ಮಾಡುವ ಆಲೋಚನೆಯಲ್ಲಿದ್ದಾರೆ. ಪ್ರಿಕ್ವೆಲ್ ಮಾಡಲು ನಾನು ರೆಡಿ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X