For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಿರ್ದೇಶಕಿ ಜೊತೆ ಹೊಂಬಾಳೆ ಹೊಸ ಸಿನಿಮಾ? ಹೀರೋ ಬಗ್ಗೆ ಚರ್ಚೆ

  |

  ಕೆಜಿಎಫ್ ಚಿತ್ರದ ನಂತರ ಪ್ಯಾನ್ ಇಂಡಿಯಾ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ ಫಿಲಂಸ್ ಈಗ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಲೈನ್ ಅಪ್ ಮಾಡುತ್ತಿವೆ. ಕೆಜಿಎಫ್ ಚಾಪ್ಟರ್ 2 ಮುಗಿಸಿರುವ ವಿಜಯ್ ಕಿರಗಂದೂರ್ ಈಗ ಪ್ರಭಾಸ್ ಜೊತೆ 'ಸಲಾರ್' ಸಿನಿಮಾ ಅರಂಭಿಸಿದ್ದಾರೆ.

  'ಸಲಾರ್' ಜೊತೆ ಜೊತೆಯಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಎರಡು ಪ್ರಾಜೆಕ್ಟ್‌ ಸಹಿ ಮಾಡಿದ್ದಾರೆ. ಈ ಚಿತ್ರಗಳಿಗೆ ಸಂತೋಷ್ ಆನಂದ್ ಮತ್ತು ಪವನ್ ಕುಮಾರ್ ನಿರ್ದೇಶಕರು. ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ಸಿನಿಮಾ ಘೋಷಣೆ ಮಾಡಿದ್ದಾರೆ. ಸೌತ್ ಇಂಡಿಯಾದಲ್ಲಿ ಬಹುಬೇಡಿಕೆಯ ಸಂಸ್ಥೆಯಾಗಿ ಬೆಳೆಯುತ್ತಿರುವ ಹೊಂಬಾಳೆ ಈಗ ತಮಿಳಿನ ಯಶಸ್ವಿ ನಿರ್ದೇಶಕಿ ಜೊತೆ ಹೊಸ ಪ್ರಾಜೆಕ್ಟ್ ಶುರು ಮಾಡುವ ತಯಾರಿ ನಡೆಸಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಅದಕ್ಕೆ ಪುಷ್ಠಿ ನೀಡುವಂತೆ ನಿರ್ದೇಶಕಿ ಹುಟ್ಟುಹಬ್ಬಕ್ಕೆ ಹೊಂಬಾಳೆ ಶುಭಕೋರಿದೆ. ಮುಂದೆ ಓದಿ...

  ಸುಧಾ ಕೊಂಗರಾ ಜೊತೆ ಹೊಂಬಾಳೆ ಫಿಲಂ?

  ಸುಧಾ ಕೊಂಗರಾ ಜೊತೆ ಹೊಂಬಾಳೆ ಫಿಲಂ?

  ತಮಿಳು ನಟ ಸೂರ್ಯ ಅಭಿನಯದಲ್ಲಿ ತೆರೆಕಂಡು ಬಹಳ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ 'ಸೂರರೈ ಪೊಟ್ರು' ಸಿನಿಮಾದ ನಿರ್ದೇಶಕಿ ಜೊತೆ ಹೊಂಬಾಳೆ ಫಿಲಂಸ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. ಈ ಸಂಬಂಧ ನಿರ್ದೇಶಕಿ ಸುಧಾ ಕೊಂಗರಾ ಜೊತೆ ಮಾತುಕತೆ ಸಹ ಆಗಿದೆ ಎಂದು ಹೇಳಲಾಗುತ್ತಿದೆ.

  ಯಶ್‌ಗೆ ಬೇಸರ ಮಾಡುವ ಉದ್ದೇಶ ನಮಗಿಲ್ಲ: ನಂದ ಕಿಶೋರ್ಯಶ್‌ಗೆ ಬೇಸರ ಮಾಡುವ ಉದ್ದೇಶ ನಮಗಿಲ್ಲ: ನಂದ ಕಿಶೋರ್

  ಹುಟ್ಟುಹಬ್ಬಕ್ಕೆ ಶುಭಕೋರಿದ ಹೊಂಬಾಳೆ

  ಹುಟ್ಟುಹಬ್ಬಕ್ಕೆ ಶುಭಕೋರಿದ ಹೊಂಬಾಳೆ

  ಇಂದು ಸುಧಾ ಕೊಂಗರಾ ಅವರ ಜನುಮದಿನ. ಈ ವಿಶೇಷ ದಿನಕ್ಕೆ ಹೊಂಬಾಳೆ ಫಿಲಂಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ನಿರ್ದೇಶಕಿಯ ಹುಟ್ಟುಹಬ್ಬಕ್ಕೆ ಶುಭಕೋರಿದೆ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ತಂತ್ರಜ್ಞರ ಹುಟ್ಟುಹಬ್ಬಗಳಿಗೆ ವಿಶ್ ಮಾಡುವ ಹೊಂಬಾಳೆ ಈಗ ಸುಧಾ ಕೊಂಗರಾ ಬರ್ತಡೇಗೆ ಟ್ವೀಟ್ ಮಾಡಿರುವುದು ಸುಳಿವು ಕೊಟ್ಟಂತಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

  ಹೀರೋ ಯಾರೆಂದು ಚರ್ಚೆ

  ಹೀರೋ ಯಾರೆಂದು ಚರ್ಚೆ

  ಒಂದು ವೇಳೆ ಸುಧಾ ಕೊಂಗರಾ ಅವರ ಜೊತೆ ಹೊಂಬಾಳೆ ಫಿಲಂಸ್ ಸಿನಿಮಾ ಮಾಡುವುದೇ ಆದರೆ ಯಾರನ್ನು ಹೀರೋ ಆಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಅಷ್ಟೇ ಕುತೂಹಲ. ಹೊಂಬಾಳೆ ಹಾಕಿರುವ ಬರ್ತಡೇ ಪೋಸ್ಟರ್‌ನಲ್ಲಿ ''ಈ ಸಿನಿಮಾ ಪಕ್ಕಾ ಆದರೆ ಹೀರೋ ಕನ್ನಡದವರೇ ಇರಲಿ'' ಎಂದು ಕಾಮೆಂಟ್ ಮಾಡ್ತಿದ್ದಾರೆ.

  ಲಹರಿ ಪಾಲಾಯ್ತು 'ಕೆಜಿಎಫ್' ಆಡಿಯೋ: ಐದು ಭಾಷೆಗೆ ಸಿಕ್ಕ ಹಣ ಎಷ್ಟು?ಲಹರಿ ಪಾಲಾಯ್ತು 'ಕೆಜಿಎಫ್' ಆಡಿಯೋ: ಐದು ಭಾಷೆಗೆ ಸಿಕ್ಕ ಹಣ ಎಷ್ಟು?

  ಚಿರಂಜೀವಿ ಸರ್ಜಾ ರವರ ಮಿಸ್ ಮಾಡದೆ ನೋಡಲೇಬೇಕಾದ 5 ಚಿತ್ರಗಳು | Top 5 Best Movies of Chirusarja |Filmibeat
  ಯಶ್ ಜೊತೆ ಮಾಡಿ?

  ಯಶ್ ಜೊತೆ ಮಾಡಿ?

  ಸದ್ಯಕ್ಕೆ ಹೊಂಬಾಳೆ ಫಿಲಂಸ್ ಮತ್ತು ಸುಧಾ ಕೊಂಗರಾ ಸಿನಿಮಾ ಖಚಿತವಾಗಿಲ್ಲ. ಆದರೆ, ಈ ಕಾಂಬಿನೇಷನ್ ಮೇಲೆ ಹೆಚ್ಚು ಕುತೂಹಲ ಹೊಂದಿರುವ ಚಿತ್ರರಸಿಕರು, ಯಶ್ ಅವರನ್ನು ನಾಯಕನನ್ನಾಗಿಸಿ, ಯಶ್ ಜೊತೆ ಸಿನಿಮಾ ಮಾಡಿ, ಈ ಚಿತ್ರಕ್ಕೆ ಯಶ್ ಹೀರೋ ಆಗಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ.

  English summary
  Hombale Films has wishes to Sudha Kongara's Birthday. is Sudha doing her Next movie under Hombale Banner?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X