ರಜನಿ ನಿಂಗ್ ವಯಸ್ಸಾಯ್ತೋ..!

ಜ್ಞಾನವೇಲ್ ನಿರ್ದೇಶನದ 'ವೆಟ್ಟೆಯಾನ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಬಾಕ್ಸಾಫೀಸ್‌ನಲ್ಲಿ ಸೂಪರ್ ಸ್ಟಾರ್ ಆರ್ಭಟ ಮುಂದುವರೆದಿದೆ. ದಸರಾ ಸಂಭ್ರಮದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ತಿದೆ. ತಲೈವಾ ಸ್ಟೈಲ್, ಸ್ವಾಗ್, ಪರ್ಫಾರ್ಮನ್ಸ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

'ವೆಟ್ಟೆಯಾನ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್ ಸೇರಿದಂತೆ ಅನುಭವಿ ಕಲಾವಿದರು ನಟಿಸಿದ್ದಾರೆ. ನಿರ್ದೇಶಕರು ಮಾಡಿಕೊಂಡ ಕಥೆಗೆ ಎಲ್ಲರೂ ನ್ಯಾಯ ಒದಗಿಸಿದ್ದಾರೆ. ಮನರಂಜನೆ ಜೊತೆಗೆ ಒಳ್ಳೆ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಅದಕ್ಕೆಲ್ಲಾ ತಿಲಕವಿಟ್ಟಂತೆ ಸೂಪರ್ ಸ್ಟಾರ್ ಸ್ಕ್ರೀನ್ ಪ್ರಸೆನ್ಸ್ ಇದೆ.

Is Rajinikanth s age is big minus for action thriller vettaiyan Movie

'ಜೈಲರ್' ಚಿತ್ರದಲ್ಲಿ ನಿವೃತ್ತ ಜೈಲಾಧಿಕಾರಿಯಲ್ಲಿ ರಜನಿಕಾಂತ್ ನಟಿಸಿದ್ದರು. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಕೊಂಚ ಯಂಗ್ ಲುಕ್‌ನಲ್ಲಿ ಖಾಕಿ ಖದರ್ ತೋರಿಸಿದ್ದರು. ಇನ್ನುಳಿದಂತೆ ಇಡೀ ಸಿನಿಮಾ ವಯಸ್ಸಾದ ಪಾತ್ರದಲ್ಲೇ ಮಿಂಚಿದ್ದರು. ಇನ್ನು ರಜನಿಕಾಂತ್ ಫೈಟ್, ಡೈಲಾಗ್ ಡೆಲಿವರಿ, ಸ್ಟೈಲ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸಾಂಗ್ಸ್ ಹಾಗೂ ಶಿವಣ್ಣ, ಮೋಹನ್ ಲಾಲ್ ಗೆಸ್ಟ್ ಅಪ್ಪಿಯರೆನ್ಸ್ ಚಿತ್ರಕ್ಕೆ ಪ್ಲಸ್ ಆಗಿತ್ತು.

ಸದ್ಯ ತೆರೆಗೆ ಬಂದಿರುವ 'ವೆಟ್ಟೆಯಾನ್' ಚಿತ್ರದಲ್ಲಿ ಎಸ್‌ಪಿ ಅಥಿಯಾನ್ IPS ಅವತಾರದಲ್ಲಿ ದರ್ಶನ್ ಕೊಟ್ಟಿದ್ದಾರೆ. ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ಕೊಲೆ ಪ್ರಕರಣದ ಬೇಧಿಸುವ ತನಿಖಾಧಿಕಾರಿಯಾಗಿ ಖಡಕ್ ಪಾತ್ರದಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಆದರೆ ಅವರ ವಯಸ್ಸು ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ತೊಡಕಾಗಿದೆ. ವಯಸ್ಸು 70 ದಾಟಿದರೂ ತಲೈವಾ ಸ್ಟೈಲ್, ಸ್ವ್ಯಾಗ್, ಪರ್ಫಾರ್ಮನ್ಸ್ ಮಾತ್ರ ಚಿಂದಿ. ಆದರೆ ದಣಿದ ದೇಹ ಅದಕ್ಕೆ ಸಾಥ್ ಕೊಡಲ್ಲ.

Is Rajinikanth s age is big minus for action thriller vettaiyan Movie

73 ವರ್ಷ ವಯಸ್ಸಿನ ರಜನಿಕಾಂತ್ ಅವರನ್ನು ಅಥಿಯಾನ್ ಪಾತ್ರದಲ್ಲಿ 50ರ ಹರೆಯದವರಂತೆ ತೋರಿಸಲಾಗಿದೆ. ವಿಗ್ ಹಾಕಿಸಿ ಬಿಳಿ ಗಡ್ಡಕ್ಕೆ ಬಣ್ಣ ಹಚ್ಚಿ ಯಂಗ್ ಆಗಿ ಬಿಂಬಿಸಲಾಗಿದೆ. ಇನ್ನು ಪರ್ಫಾರ್ಮನ್ಸ್ ವಿಚಾರದಲ್ಲೂ ತಲೈವಾ ಇಪ್ಪತ್ತರ ಯುವಕರನ್ನು ನಾಚಿಸುವಂತೆ ಮಿಂಚಿದ್ದಾರೆ. ವಯಸ್ಸು ಬರೀ ನಂಬರ್ ಅಷ್ಟೆ ಎನ್ನುವಂತೆ ಅಬ್ಬರಿಸಿದ್ದಾರೆ. ಆ ಸ್ಟೈಲ್, ಬಾಡಿ ಲಾಂಗ್ವೇಜ್, ಸ್ವ್ಯಾಗ್ ಬಗ್ಗೆ ಮಾತನಾಡುವಂತಿಲ್ಲ. ಸೂಪರ್ ಸ್ಟಾರ್ ಏನೇ ಯಂಗ್ ಆಗಿ ನಟಿಸಲು ಯತ್ನಿಸಿದರೂ ದೇಹ ಕೇಳಬೇಕಲ್ಲ. 'ವೆಟ್ಟೆಯಾನ್' ಚಿತ್ರದಲ್ಲಿ ಅದು ಎದ್ದು ಕಾಣುತ್ತದೆ.

ಅಮಿತಾಬ್ ಬಚ್ಚನ್ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರು ವಯಸ್ಸಿಗೆ ತಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೀರೊ ಆಗಿ ನಟಿಸೋದು ಬಿಟ್ಟು ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ಬಣ್ಣ ಹಚ್ಚಲು ಆರಂಭಿಸಿ ಬಹಳ ವರ್ಷಗಳಾಯಿತು. ಪವರ್‌ಫುಲ್ ಪಾತ್ರಗಳನ್ನೇ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ರಜನಿಕಾಂತ್ ಅವರನ್ನು ಇನ್ನು ಹೀರೊ ಆಗಿ ಯಂಗ್ ಆಗಿಯೇ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.

ರಜನಿಕಾಂತ್ ಈಗಾಗಲೇ ಸಾಕಷ್ಟು ಸಾಧಿಸಿದ್ದು ಆಗಿದೆ. ಬೆಂಗಳೂರಿನ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್‌ವಾಡ್ ಸೂಪರ್ ಸ್ಟಾರ್ ಆಗಿದ್ದು ರೋಚಕ ಪಯಣ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ತಲೈವಾ ಪ್ರೇಕ್ಷಕರನ್ನು ರಂಜಿಸಿದ್ದಾರೆ. ರಜನಿಕಾಂತ್ ನೋಡದಲ ಹಿಟ್‌ಗಳಿಲ್ಲ, ಬಾಕ್ಸಾಫೀಸ್ ದಾಖಲೆಗಳಿಲ್ಲ. ಅವರು ಇನ್ನು ಸಾಧಿಸಬೇಕಿರುವುದು ಏನು ಇಲ್ಲ. ಇನ್ನಾದರೂ ಅವರು ವಿಶ್ರಾಂತಿ ಪಡೆಯಬೇಕು ಎಂದು 'ವೆಟ್ಟೆಯಾನ್' ಸಿನಿಮಾ ನೋಡಿದ ಕೆಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಎಲ್ಲಾ ವಿಭಾಗಗಳಲ್ಲಿ 'ವೆಟ್ಟೆಯಾನ್' ಸಿನಿಮಾ ಚೆನ್ನಾಗಿದೆ. ಆದರೆ ರಜನಿಕಾಂತ್ ದಣಿದ ದೇಹವೇ ಚಿತ್ರ ಕೊಂಚ ಸ್ಲೋ ಎನಿಸಲು ಕಾರಣ ಎನ್ನಬಹುದು. ಸುಖಾ ಸುಮ್ಮನೆ ಕಥೆಯನ್ನು ಎಳೆದಿರುವುದರಿಂದ ಸಿನಿಮಾ ನೋಡುವ ಪ್ರೇಕ್ಷಕರಿಗೆ ತಲೈವಾ ಏಜ್ ಫ್ಯಾಕ್ಟರ್ ನೆನೆಪಾಗುತ್ತದೆ. ಇದೇ ವಿಚಾರದ ಬಗ್ಗೆ ರಜನಿಕಾಂತ್ ಸ್ನೇಹಿತ ರಾಜ್‌ ಬಹದ್ದೂರ್ ಟಿವಿ9 ಜೊತೆ ಮಾತನಾಡಿದ್ದಾರೆ.

'ವೆಟ್ಟೆಯಾನ್' ಸಿನಿಮಾ ನೋಡಿದ ರಾಜ್‌ ಬಹದ್ದೂರ್ "ನಾನು ರಜನಿಕಾಂತ್‌ಗೆ ಹೇಳ್ದೆ. ನಿನಗೆ ವಯಸ್ಸಾಯಿತು. ಇನ್ನು ಹೀರೊ ಆಗಿ ನಾಲ್ಕೈದು ಸಿನಿಮಾಗಳಲ್ಲಿ ಮಾತ್ರ ನಟಿಸೋಕೆ ಸಾಧ್ಯ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಂಡು ನಟಿಸಿಬಿಡು ಎಂದೆ. ಅದೇ ಕಾರಣಕ್ಕೆ 'ಅಣ್ಣಾತ್ತೆ' ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾನೆ. ಇನ್ನು ನಾಲ್ಕೈದು ವರ್ಷ ಹೀರೊ ಆಗಿ ನಟಿಸ್ತಾನೆ. 80 ವರ್ಷ ಆದಮೇಲೆ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾನೆ" ಎಂದಿದ್ದಾರೆ.

ಕುಡಿತದ ಚಟ ಹಾಗೂ ಆರೋಗ್ಯ ಸಮಸ್ಯೆಯಿಂದಲೂ ರಜನಿಕಾಂತ್ ದಣಿದಿದ್ದಾರೆ. ಸ್ವತಃ ತಲೈವಾ ಹೇಳಿಕೊಂಡಂತೆ "ನನ್ನ ಕುಡಿತದ ಚಟದಿಂದ ನಾನು ಈ ರೀತಿ ಇದ್ದೀನಿ. ಇಲ್ಲದೇ ಇದ್ದರೆ ಈಗ ಇರುವ ರಜನಿಕಾಂತ್ ಏನೇನು ಅಲ್ಲ, ಸಿನಿಮಾ ಮಾತ್ರವಲ್ಲ ರಾಜಕೀಯವಾಗಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದೆ. ಕುಡಿತ ನನಗೆ ನಾನೇ ಇಟ್ಟುಕೊಂಡ ಕೊಳ್ಳಿ" ಎಂದು ಹೇಳಿದ್ದರು. ತಲೈವಾ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಬಂದು ತಮಿಳುನಾಡು ಜನರ ಸೇವೆ ಮಾಡುವ ಕನಸು ಕಂಡಿದ್ದರು. ಕೊನೆಗೆ ಆರೋಗ್ಯ ಸಮಸ್ಯೆ ನೆಪವೊಡ್ಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

More from Filmibeat

English summary
Fans request to actor Rajinikanth to retire from acting after watching vettaiyan movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X