ಪ್ರೈವೇಟ್ ಜೆಟ್ ಖರೀದಿಸಿದ್ರಾ ತಮಿಳು ನಟ ಸೂರ್ಯ? ಈ ಐಷಾರಾಮಿ ವಿಮಾನದ ಬೆಲೆ ಎಷ್ಟು ಗೊತ್ತಾ?

ಸ್ಟಾರ್ ನಟರು ಚಿತ್ರವೊಂದಕ್ಕೆ ಹತ್ತಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಪ್ರತಿ ಚಿತ್ರಕ್ಕೆ ನೂರಾರು ಕೋಟಿ ಚಾರ್ಜ್ ಮಾಡುವ ಕಲಾವಿದರು ಇದ್ದಾರೆ. ವರ್ಷಕ್ಕೆ ಸಾವಿರಾರು ಕೋಟಿ ಆದಾಯ ಗಳಿಸುವವರು ಇರ್ತಾರೆ. ಇಂತಹವರ ಲೈಫ್‌ಸ್ಟೈಲ್ ಹೇಗಿರುತ್ತೆ ಅಂತ ಬಿಡಿಸಿ ಹೇಳುವುದು ಬೇಕಿಲ್ಲ.

ಹತ್ತಾರು ಕೋಟಿ ಐಷಾರಾಮಿ ಕಾರುಗಳನ್ನು ಸ್ಟಾರ್ ನಟರು ಕೊಂಡುಕೊಳ್ಳುವುದು ಆಗಾಗ್ಗೆ ಸುದ್ದಿ ಆಗುತ್ತದೆ. ಇನ್ನು ರಾಮ್‌ಚರಣ್, ಯಶ್, ಅಲ್ಲು ಅರ್ಜುನ್, ಪ್ರಭಾಸ್, ಜ್ಯೂ. ಎನ್‌ಟಿಆರ್ ಸೇರಿದಂತೆ ಕೆಲವರು ಸುತ್ತಾಡಲು ಪ್ರೈವೇಟ್ ಜೆಟ್‌ಗಳನ್ನೇ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ತಮಿಳು ನಟ ಅಜಿತ್ 9 ಕೋಟಿ ರೂ. ಮೌಲ್ಯದ ಫೆರಾರಿ ಕಾರ್ ಖರೀದಿಸಿದ್ದು ಸುದ್ದಿಯಾಗಿತ್ತು.

Is Tamil actor Suriya has bought a private jet for a whopping amount

ಇದೀಗ ತಮಿಳಿನ ಮತ್ತೊಬ್ಬ ನಟ ಸೂರ್ಯ ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಸದ್ಯ ಸೂರ್ಯ ನಟನೆಯ 'ಕಂಗುವ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಸಜ್ಜಾಗಿದೆ. ಅಕ್ಟೋಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಶಿವ ನಿರ್ದೇಶನದ ಈ ಫ್ಯಾಂಟಸಿ ಥ್ರಿಲ್ಲರ್ ಕುತೂಹಲ ಮೂಡಿಸಿದೆ.

'ಸುರರೈ ಪೊಟ್ರು' ಹಾಗೂ 'ಜೈಭೀಮ್' ರೀತಿಯ ಸೆನ್ಸೇಷನಲ್ ಸಿನಿಮಾಗಳಿಂದ ಸೂರ್ಯ ಇತ್ತೀಚೆಗೆ ಸದ್ದು ಮಾಡಿದ್ದಾರೆ. ಪತ್ನಿ ಜ್ಯೋತಿಕಾ ಕೂಡ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇಬ್ಬರ ವಾರ್ಷಿಕ ಆದಾಯ ನೂರಾರು ಕೋಟಿ ಇದೆ. ಕೆಲವೇ ತಿಂಗಳ ಹಿಂದೆಯೇ ದಂಪತಿ ಮುಂಬೈನಲ್ಲಿ ದುಬಾರಿ ಬಂಗಲೆ ಖರೀದಿಸಿ ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸೋಕೆ ಅಲ್ಲಿ ವಾಸ್ತವ್ಯ ಹೂಡಿದ್ದೇವೆ ಎಂದು ಜ್ಯೋತಿಕಾ ಹೇಳಿದ್ದಾರೆ.

ಇನ್ನು ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಮೋಷನ್‌ಗೆ ಸ್ಟಾರ್ ನಟರು ಪ್ರೈವೆಟ್ ಜೆಟ್ ಏರಿ ವಿವಿಧ ನಗರಗಳಿಗೆ ಓಡಾಡುವುದು ಈಗ ಟ್ರೆಂಡ್. ಸೂರ್ಯ 'ಕಂಗುವ' ಪ್ರಚಾರ ಆರಂಭಿಸಬೇಕಿದೆ. ಇಂತಹ ಹೊತ್ತಲ್ಲೇ ಹೊಸ ಜೆಟ್ ಖರೀದಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಡಿಪ್ಪಿನ್ ನಾಯಗನ್ ಅಭಿಮಾನಿಗಳು ಈ ವಿಚಾರವನ್ನು ವೈರಲ್ ಮಾಡುತ್ತಿದ್ದಾರೆ.

Is Tamil actor Suriya has bought a private jet for a whopping amount

ನಟ ಸೂರ್ಯ ಐಷಾರಾಮಿ ಡಸಾಲ್ಟ್ ಫಾಲ್ಕನ್- 2000 ಪ್ರೈವೇಟ್ ಜೆಟ್ ಖರೀದಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ. ಇದರ ಬೆಲೆ 120 ಕೋಟಿ ರೂ. ಎನ್ನಲಾಗ್ತಿದೆ. ಈ ಜೆಟ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಮಾಡೆಲ್ ವಿಮಾನ ಹೊಂದಿರುವ ಏಕೈಕ ನಟ ಸೂರ್ಯ ಎಂದು ಚರ್ಚೆ ನಡೆಯುತ್ತಿದೆ.

ಕೆಲವರ ಪ್ರಕಾರ ಸೂರ್ಯ ಪ್ರೈವೇಟ್ ಜೆಟ್ ಖರೀಸಿದಿರುವುದು ಸುಳ್ಳು. ಆಪ್ತ ಮೂಲಗಳಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದ್ದು ಇದು ಸತ್ಯಕ್ಕೆ ದೂರವಾದ ಮಾತು ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಅಂದಹಾಗೆ 'ಸುರರೈ ಪೊಟ್ರು' ಚಿತ್ರದಲ್ಲಿ ಭಾರತದ ಮೊದಲ ಕಡಿಮೆ ವೆಚ್ಚದ ವಿಮಾನಯಾನ ಪ್ರಾರಂಭಿಸಿದ ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ ನಟಿಸಿದ್ದರು.

ಸೂರ್ಯ ನಟನೆಯ 'ಕಂಗುವ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದಸರಾ ಸಂಭ್ರಮದಲ್ಲಿ ಈ ಸಿನಿಆ ತೆರೆಗೆ ಬರಲು ಸಿದ್ಧವಾಗಿದೆ. ಅದೇ ದಿನ ರಜನಿಕಾಂತ್ ನಟನೆಯ ವೆಟ್ಟೆಯಾನ್, ಮರುದಿನ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಕದನ ನಡೆಯಲಿದೆ. ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ಸೂರ್ಯ ಈಗ ಬಣ್ಣ ಹಚ್ಚಿದ್ದಾರೆ.

More from Filmibeat

English summary
Kanguva Actor Suriya purchase Dassault falcon 2000 Private jet?
Read more about: tamil kollywood suriya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X