twitter
    For Quick Alerts
    ALLOW NOTIFICATIONS  
    For Daily Alerts

    ಥ್ರಿಲ್ ಹೆಚ್ಚಿಸಿದ 'ಜೈ ಭೀಮ್' ಸುದ್ದಿ: ಸೂರ್ಯ ನಟಿಸಲಿರುವ ಲಾಯರ್ ಇವರೇ

    By ಫಿಲ್ಮಿಬೀಟ್ ಡೆಸ್ಕ್
    |

    ತಮಿಳಿನ ಖ್ಯಾತ ನಟ ಸೂರ್ಯ ಇತ್ತೀಚಿಗಷ್ಟೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ವಿಭಿನ್ನ ಪಾತ್ರಗಳಲ್ಲಿ ನಟಿಸುವ ಸೂರ್ಯ ಇತ್ತೀಚಿಗೆ ಹುಟ್ಟುಹಬ್ಬದ ದಿನ ಅನೌನ್ಸ್ ಮಾಡಿದ ಹೊಸ ಸಿನಿಮಾ ಮತ್ತಷ್ಟು ಕುತೂಹಲ ಹೆಚ್ಚಿಸುವ ಜೊತೆಗೆ ಚರ್ಚೆ ಹುಟ್ಟುಹಾಕಿದೆ.

    ಪೋಸ್ಟರ್ ನಲ್ಲಿ ಸೂರ್ಯ ಕಪ್ಪು ಕೋಟ್ ಧರಿಸಿ ಲಾಯರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೆಯಲ್ಲ ಈ ಪೋಸ್ಟರ್ ನಲ್ಲಿ ಬುಡಕಟ್ಟು ಜನರ ಗುಂಪಿನನ್ನು ಕಾಣಬಹುದು. ಇದೆಲ್ಲದರ ಜೊತೆಗೆ ಚಿತ್ರದ ಶೀರ್ಷಿಕೆ 'ಜೈ ಭೀಮ್' ಪೋಸ್ಟರ್ ನ ತೂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಶೀರ್ಷಿಕೆ ಕೇಳಿದರೆ ಈ ಸಿನಿಮಾ ಜಾತಿಯಂತ ದೊಡ್ಡ ಸಾಮಾಜಿಕ ಪಿಡುಗಿನ ಬಗ್ಗೆ ಹೇಳಹೊರಟಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದೀಗ ಕಳಿಬರುತ್ತಿರುವ ಮಾಹಿತಿ ಪ್ರಕಾರ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ನಟ ಸೂರ್ಯ ನಿವೃತ್ತ ನ್ಯಾಯಮೂರ್ತಿ ಚಂದ್ರು ಪಾತ್ರದಲ್ಲಿ ಸೂರ್ಯ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ. ಮುಂದೆ ಓದಿ...

    ನೈಜ ಘಟನೆ ಆಧಾರಿತ ಸಿನಿಮಾ

    ನೈಜ ಘಟನೆ ಆಧಾರಿತ ಸಿನಿಮಾ

    ಸೂರ್ಯ ನಟನೆಯ ಜೈ ಭೀಮ್ ನೈಜ ಘಟನೆ ಆಧಾರಿತ ಸಿನಿಮಾ ಎನ್ನುವ ಮಾಹಿತಿ ಬಹಿರಂಗವಾಗಿದೆ. 1993 ಕಾನೂನು ಹೋರಾಟವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ನಟ ಸೂರ್ಯ, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಎನ್ನುವವರ ಪಾತ್ರ ನಿರ್ವಹಿಸುತ್ತಿದ್ದಾರೆ.

    ಹುಟ್ಟುಹಬ್ಬದ ದಿನ 'ಜೈ ಭೀಮ್' ಅಂತ ಅಭಿಮಾನಿಗಳ ಮುಂದೆ ಬಂದ ನಟ ಸೂರ್ಯಹುಟ್ಟುಹಬ್ಬದ ದಿನ 'ಜೈ ಭೀಮ್' ಅಂತ ಅಭಿಮಾನಿಗಳ ಮುಂದೆ ಬಂದ ನಟ ಸೂರ್ಯ

    ಕಾನೂನು ಹೋರಾಟದ ಬಗ್ಗೆ ಇರುವ ಸಿನಿಮಾ

    ಕಾನೂನು ಹೋರಾಟದ ಬಗ್ಗೆ ಇರುವ ಸಿನಿಮಾ

    ನ್ಯಾಮೂರ್ತಿ ಚಂದ್ರು ಎನ್ನುವವರ ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇರುಳಾರ್ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ಹೋರಾಟದ ಬಗ್ಗೆ ಇರುವ ಚಿತ್ರವಾಗಿದೆ. ನ್ಯಾಯಮೂರ್ತಿ ಚಂದ್ರು ನೇತೃತ್ವದಲ್ಲಿ ನಡೆದ ಈ ಕಾನೂನು ಹೋರಾಟದ ಬಗ್ಗೆ ಇರುವ ಚಿತ್ರ ಜೈ ಭೀಮ್ ಎನ್ನುವ ಸುದ್ದಿ ಬಹಿರಂಗವಾಗಿದೆ.

    ಹೆಸರಾಂತ ನ್ಯಾಯಧೀಶರು ಚಂದ್ರು

    ಹೆಸರಾಂತ ನ್ಯಾಯಧೀಶರು ಚಂದ್ರು

    ಈ ಬಗ್ಗೆ ಸೂರ್ಯ ಆಗಲಿ ಅಥವಾ ನಿವೃತ್ತ ನ್ಯಾಯಮೂರ್ತಿ ಚಂದ್ರು ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ನ್ಯಾಯಮೂರ್ತಿ ಕೆ.ಚಂದ್ರು ಹೆಸರಾಂತ ನ್ಯಾಯಧೀಶರಾಗಿದ್ದು, 96,000 ಅಧಿಕ ಪ್ರಕರಣಗಳನ್ನು ನಡೆಸಿದ್ದಾರೆ. ಹಾಗೂ ಕೆಲವು ಮಹತ್ವದ ತೀರ್ಪುಗಳಿಗಾಗಿ ಕಾನೂನು ವಲಯದಲ್ಲಿ ಭಾರಿ ಪ್ರಸಿದ್ಧರಾಗಿದ್ದಾರೆ.

    ಹಿಂದಿಯಲ್ಲಿ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ; ನಾಯಕ ಯಾರು?ಹಿಂದಿಯಲ್ಲಿ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ; ನಾಯಕ ಯಾರು?

    ನ್ಯಾಯಮೂರ್ತಿ ಕೆ.ಚಂದ್ರು ಹೋರಾಟ

    ನ್ಯಾಯಮೂರ್ತಿ ಕೆ.ಚಂದ್ರು ಹೋರಾಟ

    ನ್ಯಾಯಮೂರ್ತಿ ಕೆ ಚಂದ್ರು, ಕೆಳ ಜಾತಿ ಮತ್ತು ಮಹಿಳಯರ ಪರವಾಗಿ ಅನೇಕ ಪ್ರಕರಣಗಳಲ್ಲಿ ಹೋರಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ದೂರದ ಹಳ್ಳಿಗಾಡಿನ ಮತ್ತು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಜನರ ಪರವಾಗಿ ಚಂದ್ರು ಕಾನೂನು ಹೋರಾಟ ಮಾಡಿದವರು. ಅವರು ತಮ್ಮ ಎಲ್ಲಾ ಅನುಭವದ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. 2013ರಲ್ಲಿ ನ್ಯಾಯಮೂರ್ತಿ ಕೆ. ಚಂದ್ರು ನಿವೃತ್ತರಾದರು.

    ಜೈ ಭೀಮ್ ಮೇಕಿಂಗ್ ಫೋಟೋಗಳು ವೈರಲ್

    ಜೈ ಭೀಮ್ ಮೇಕಿಂಗ್ ಫೋಟೋಗಳು ವೈರಲ್

    ನ್ಯಾಯಮೂರ್ತಿ ಕೆ.ಚಂದ್ರು ಪಾತ್ರದಲ್ಲಿ ನಟ ಸೂರ್ಯ ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಸೂರ್ಯ ಲುಕ್ ಮತ್ತು ಪೋಸ್ಟರ್ ನೋಡಿದ್ರೆ ನ್ಯಾಯಮೂರ್ತಿ ಚಂದ್ರು ಅವರ ಕಥೆಯೇ ಕೇಳುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಜೈ ಭೀಮ್ ಮೇಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಜ್ಞಾನವೇಲ್ ನಿರ್ದೇಶನ

    ಜ್ಞಾನವೇಲ್ ನಿರ್ದೇಶನ

    ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ನಟ ಧನುಷ್ ಜೊತೆ ಕರ್ಣನ್ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ರಾಜಿಶಾ ವಿಜಯನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕರ್ಣನ್ ನಲ್ಲಿ ರಾಜೀಶ್ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಪಾತ್ರದ ಮೂಲಕ ಚಿತ್ರಾಭಿಮಾನಿಗಳ ಮುಂದೆ ಬರ್ತಿದ್ದಾರೆ. ಬುಗಕಟ್ಟು ಜನಾಂಗದ ಮಹಿಳೆಯ ಪಾತ್ರದಲ್ಲಿ ರಾಜೀಶಾ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಜೈ ಭೀಮ್ ಹೇಗಿರಲಿದೆ, ಯಾವ ಸಂದೇಶವನ್ನು ಹೊತ್ತು ಬರಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

    ಸೂರ್ಯ ಬಳಿ ಇರುವ ಸಿನಿಮಾಗಳು

    ಸೂರ್ಯ ಬಳಿ ಇರುವ ಸಿನಿಮಾಗಳು

    ಈ ಸಿನಿಮಾ ಜೊತೆಗೆ ಸೂರ್ಯ ಎಥಾರ್ಕುಮ್ ತುನಿಂಧವನ್ ಎನ್ನುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೊತೆಗೆ ವಾಡಿವಾಸಲು ಸಿನಿಮಾ ಕೂಡ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುವ ಮೂಲಕ ಡಿಜಿಟಲ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. 'ನವರಸ' ಎನ್ನುವ ವೆಬ್ ಸೀರಿಸ್ ನಲ್ಲಿ ಸೂರ್ಯ ನಟಿಸಿದ್ದಾರೆ. ಸೂರ್ಯ ಕೊನೆಯದಾಗಿ ಸೂಪರ್ ಹಿಟ್ ಸೂರರೈ ಪೊಟ್ರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

    English summary
    Is Tamil Actor Suriya's Next Movie Jai Bheem based on a real incident?
    Tuesday, August 10, 2021, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X