Nayanthara: ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ್ರಾ ನಯನ್? ಅವರ ವಿರುದ್ಧ ಕಾನೂನು ಕ್ರಮ!

ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಸುಳ್ಳು ಸುದ್ದಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಸೆಲೆಬ್ರೆಟಿಗಳ ವಿಚಾರದಲ್ಲಿ ಎಲ್ಲಿಂದ ಎಲ್ಲಿಗೋ ಲಿಂಕ್ ಮಾಡಿ ಏನೇನೋ ಸುದ್ದಿ ತೇಲಿ ಬಿಡಲಾಗುತ್ತಿದೆ. ಮಲಯಾಳಂ ನಿರ್ಮಾಪಕನ ಜೊತೆ ತ್ರಿಶಾ ಮದುವೆ ಆಗ್ತಾರಂತೆ, ಸಾಯಿ ಪಲ್ಲವಿ ಕದ್ದು ಮುಚ್ಚಿ ಮದುವೆ ಆಗಿಬಿಟ್ಟಿದ್ದಾರೆ, ಹೀಗೆ ಸಾಕಷ್ಟು ವದಂತಿ ಹರಿದಾಡಿತ್ತು.

ತ್ರಿಶಾ ಹಾಗೂ ಸಾಯಿ ಪಲ್ಲವಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಗಾಳಿಸುದ್ದಿ ಗುದ್ದು ಕೊಟ್ಟಿದ್ದರು. ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಇದೀಗ ನಯನತಾರ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ನಯನತಾರ 'ಜವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇಂತಹ ಹೊತ್ತಲ್ಲೇ ಆಕೆಯ ಬಗ್ಗೆ ಗಾಸಿಸುದ್ದಿಯೊಂದು ಹರಿದಾಡ್ತಿದೆ.

Nayanthara-atlee-defamation-case

'ಜವಾನ್' ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದು ಗೊತ್ತೇ ಇದೆ. ತಂದೆಯ ಪಾತ್ರದಲ್ಲಿ ಶಾರುಖ್ ಖಾನ್ ಪತ್ನಿಯಾಗಿ ದೀಪಿಕಾ ನಟಿಸಿದ್ದಾರೆ. ಸೆಕೆಂಡ್ ಹಾಫ್‌ನಲ್ಲಿ ಬರೋ ಈ ಪಾತ್ರ ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್ ಆಗಿದೆ. ಇನ್ನು ನಯನತಾರ ಮಾಡಿರುವ ಪಾತ್ರ ಕೂಡ ಸಖತ್ ಪವರ್‌ಫುಲ್ ಆಗಿದೆ. ಆದರೆ, ದೀಪಿಕಾ ಪಡುಕೋಣೆ ತನಗಿಂತ ಹೆಚ್ಚು ಫೇಮಸ್ ಆಗಿದ್ದಕ್ಕೆ ನಯನತಾರಾ ತುಂಬಾ ಕೋಪಗೊಂಡಿದ್ದಾರೆ ಎಂದು X(ಟ್ವಿಟ್ಟರ್) ಹಾಗೂ ಯೂಟ್ಯೂಬ್ ಚಾನೆಲ್‌ಗಳಲ್ಲೂ ವರದಿ ಆಗಿತ್ತು.

ಅಟ್ಲಿ ನಿರ್ದೇಶನದಲ್ಲಿ ನಯನತಾರಾ ಮತ್ತೆ ನಟಿಸೋಕೆ ಇಷ್ಟಪಡುತ್ತಿಲ್ಲ ಎಂದು ಕೆಲವರು ಸುದ್ದಿ ವೈರಲ್ ಮಾಡಿದ್ದರು. ಇದ್ದಕ್ಕಿದಂತೆ ಈ ಸುದ್ದಿ ಕಾಡ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಆದರೆ, ಈ ಆಧಾರ ರಹಿತ ವದಂತಿ ಹಬ್ಬಿಸಿದ್ದನ್ನು ನಯನತಾರಾ ಬಹಳ ಗಂಭೀರವಾಗಿ ಪರಿಗಣಿಸಿದ್ದಾರಂತೆ. ತನ್ನನ್ನು ಮತ್ತು ಅಟ್ಲಿ ಇಬ್ಬರನ್ನು ಲಿಂಕ್ ಮಾಡಿ ಸುಳ್ಳು ಸುದ್ದಿ ಬರೆದವರ ವಿರುದ್ಧ ನಯನತಾರಾ ಮಾನನಷ್ಟ ಮೊಕದ್ದಮೆ ಹೂಡಲು ಹೊರಟಿದ್ದಾರೆ ಎನ್ನುವ ಚರ್ಚೆ ನಡೀತಿದೆ.

Nayanthara-atlee-defamation-case

ನಿರ್ದೇಶಕ ಅಟ್ಲಿ ಹುಟ್ಟುಹಬ್ಬಕ್ಕೆ ನಯನತಾರಾ ಶುಭ ಕೋರಿದ್ದಾರೆ. ಅಟ್ಲಿ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಇನ್‌ಸ್ಟಾ ಸ್ಟೋರಿ ಹಾಕಿದ್ದರು. ಅಲ್ಲಿಗೆ ಅಟ್ಲಿ- ನಯನತಾರ ನಡುವೆ ಯಾವುದೇ ವೈಮನಸ್ಸು ಇಲ್ಲ. ಆ ವದಂತಿಗಳೆಲ್ಲ ನಿರಾಧಾರ ಎಂಬುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಆದರೂ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಕೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಮನೆಯಲ್ಲಿ ನಡೆದ ಗಣೇಶೋತ್ಸವದಲ್ಲಿ 'ಜವಾನ್' ಚಿತ್ರತಂಡ ಭಾಗವಹಿಸಿತ್ತು. ಶಾರುಖ್ ಖಾನ್- ಗೌರಿ ಖಾನ್, ಅಟ್ಲಿ-ಪ್ರಿಯಾ ದಂಪತಿ, ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ದಂಪತಿ, ನಯನತಾರಾ- ವಿಘ್ನೇಶ್ ಶಿವನ್ ದಂಪತಿ ಈ ಪೂಜೆಗೆ ಹಾಜರಾಗಿದ್ದರು. ನಯನತಾರಾ ಒಂದುವೇಳೆ ಅಟ್ಲಿ ಮತ್ತು ದೀಪಿಕಾ ಪಡುಕೋಣೆ ಮೇಲೆ ಕೋಪಗೊಂಡಿದ್ದರೆ, ಆಕೆ ಈ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ. ಅನಾವಶ್ಯಕ ವದಂತಿಗಳನ್ನು ಹುಟ್ಟುಹಾಕಿ ನಯನತಾರಾಳನ್ನು ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ನಯನತಾರಾ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಕೆಯ ಅಭಿಮಾನಿಗಳು ಹೇಳುತ್ತಿದ್ದಾರೆ.

'ಜವಾನ್' ಬಳಿಕ ಮತ್ತೆ 3 ಸಿನಿಮಾಗಳಲ್ಲಿ ನಯನತಾರಾ ನಟಿಸುತ್ತಿದ್ದಾರೆ. 'ಇರೈವನ್' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಟೆಸ್ಟ್‌ ಎನ್ನುವ ಮತ್ತೊಂದು ಚಿತ್ರದ ಜೊತೆಗೆ ಇನ್ನು ಹೆಸರಿಡದ ಮಗದೊಂದು ಸಿನಿಮಾ ಆಕೆಯ ಕೈಯಲ್ಲಿದೆ. ಸಾರೋಗಸಿ ವಿಧಾನದಲ್ಲಿ ನಯನತಾರ- ವಿಘ್ನೇಶ್ ದಂಪತಿ ಅವಳಿ ಮಕ್ಕಳ ಪೋಷಕರಾಗಿದ್ದರು. ಮಕ್ಕಳ ಲಾಲನೆ ಪಾಲನೆ ಜೊತೆಗೆ ನಯನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Nayanthara Upset With Atlee amid Rumors, she is taking legal action?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X