ಜೊತೆಯಲ್ಲಿದ್ದವರೇ ಚೂರಿ ಹಾಕಿದರು ; ಚುನಾವಣಾ ಕಣದಲ್ಲಿ ಪತ್ನಿ ಸಂಗೀತಾ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ವಿಜಯ್

ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ನೋಡ ನೋಡುತ್ತಲೇ ಸಂಬಂಧ ಮುರಿದು ಬೀಳುತ್ತೆ. ಆ ನಂತರ ಶುರುವಾಗುವುದೇ ಆರೋಪ- ಪ್ರತ್ಯಾರೋಪಗಳ ಸುರಿಮಳೆ. ಇದಕ್ಕೆ ಉದಾಹರಣೆ ಎಂಬಂತೆ ವಿಜಯ್ ದಾಂಪತ್ಯ ಜೀವನ ಸದ್ಯ ಕಣ್ಮುಂದೆಯೇ ಇದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರಿಬ್ಬರ 27ವರ್ಷಗಳ ಸುಖ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ ತ್ರಿಶಾ ಅವರ ಮೇಲೀದೆ. ಇನ್ನು ಇದು ಚುನಾವಣೆಯ ಸಮಯ. ರಾಜಕೀಯದ ರಣರಂಗಕ್ಕೆ ಬಂದ ವಿಜಯ್ ಪಾಲಿಗೆ ಈಗ ತಮ್ಮ ವೈಯಕ್ತಿಕ ಬದುಕಿನ ಈ ವಿವಾದ ತಲೆ ನೋವಾಗಿದೆ. ವಿರೋಧ ಪಕ್ಷದವರೆಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.

Is Vijay s Nellai Speech an Indirect Shield Against Sangeetha s Divorce Filing

ಎಲ್ಲಕ್ಕಿಂತ ಮುಖ್ಯವಾಗಿ ತಮಿಳುನಾಡಿನ ರಾಜಕಾರಣವೂ ನಾವು-ನೀವು ಅಂದುಕೊಂಡತೆ ಅಲ್ಲ. ಅದಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ತಮ್ಮನ್ನು ತಾವು ಬುದ್ದಿವಂತ ಎಂದು ವಿಜಯ್ ಅಂದುಕೊಂಡಿರಬಹುದು. ಆದರೆ, ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ವ್ಯಕ್ತಿ ವಿಜಯ್. ಚುನಾವಣೆಯ ಹೊಸ್ತಿಲಿನಲ್ಲಿ ಇವರ ಫ್ಯಾಮಿಲಿ ಇಮೇಜ್ ಸಂಪೂರ್ಣ ಡ್ಯಾಮೇಜ್ ಕೂಡ ಆಗಿದೆ.

ಇಷ್ಟೆಲ್ಲಾ ಆದರೂ ಕೂಡ ವಿಜಯ್‌ಗೆ ಈ ಕ್ಷಣಕ್ಕೂ ಇವತ್ತು ಕೂಡ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ. ಸಂಗೀತಾ ಅವರ ವಿಚಾರದಲ್ಲಿ ವಿಜಯ್ ಅವರಲ್ಲಿ ಯಾವ ಪಾಪ ಪ್ರಜ್ಞೆಯೂ ಇದ್ದಂತೆ ಇಲ್ಲ. ಬದಲಿಗೆ ಸೇಡಿನ ಜ್ವಾಲೆ ವಿಜಯ್ ಮನದಲ್ಲಿ ಧಗಧಗಿಸುತ್ತಿರುವಂತೆ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ವಿಜಯ್ ಪರೋಕ್ಷವಾಗಿ ತಮ್ಮ ಪತ್ನಿ ಸಂಗೀತಾ ವಿರುದ್ಧ ಕೆಂಡ ಕಾರಿದ್ದಾರೆ. ಎಲ್ಲವೂ ಷಡ್ಯಂತ್ರ, ಪಿತೂರಿ ಎಂಬ ಅರ್ಥದಲ್ಲಿ ಮಾತನಾಡಿದ್ಧಾರೆ.

ಈ ಕುರಿತು ನೆಲ್ಲೈನಲ್ಲಿ ಬೃಹತ್ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ವಿಜಯ್, ಚುನಾವಣೆಗೆ 30 ದಿನಗಳು ಇರುವಾಗ ನನ್ನ ಮಾನಹಾನಿ ಮಾಡುವ ಪ್ರಯತ್ನಕ್ಕೆ ಕೆಲವರು ಮುಂದಾದರು ಎಂದು ಹೇಳಿದ್ಧಾರೆ. ನನ್ನ ಸುತ್ತ ಮುತ್ತ ಇದ್ದವರೇ ಹಲವು ವರ್ಷಗಳಿಂದ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು ಎಂದು ಹೇಳಿರುವ ವಿಜಯ್ ಚುನಾವಣೆಯ ಮುನ್ನ ನನಗೆ ಅವಮಾನ ಮಾಡುವ ಎಲ್ಲ ಪ್ರಯತ್ನಗಳನ್ನು ಕೂಡ ಅವರು ಮಾಡಿದರು ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಪತ್ನಿ ಸಂಗೀತಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Is Vijay s Nellai Speech an Indirect Shield Against Sangeetha s Divorce Filing

ಮುಂದುವರೆದು, ನೀವೆಷ್ಟೇ ಕಷ್ಟ ಪಟ್ಟರೂ, ನನಗೆ ನೀವು ಎಷ್ಟೇ ಕಷ್ಟ ಕೊಟ್ಟರೂ ಕೂಡ ಜನರಿಂದ ನನ್ನನ್ನೂ ಬೇರ್ಪಡಿಸಲು ಸಾಧ್ಯ ಇಲ್ಲ, ನಮ್ಮನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯ ಇಲ್ಲ ಎಂದು ಗುಡುಗಿರುವ ವಿಜಯ್, ಬೇರೆಯವರ ಪಾಲಿಗೆ ಇದೊಂದು ಕೇವಲ ಚುನಾವಣೆ ಆಗಿರಬಹುದು, ಆದರೆ ಟಿವಿಕೆ ಸದಸ್ಯರಿಗೆ ಇದೊಂದು ಭಾವನಾತ್ಮಕವಾದ ಸವಾಲು ಎಂದು ಹೇಳಿದ್ದಾರೆ. ಇದೊಂದು ಸ್ಫರ್ಧೆಯಲ್ಲ ಅದಕ್ಕೂ ಮಿಗಿಲಾದದ್ದು, ಬಹುದೊಡ್ಡ ಹೋರಾಟ ಎಂದು ಹೇಳಿದ್ದಾರೆ.

ವಿಜಯ್ ಅವರ ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದ್ದು,ನೀವು ನನಗೆ ಎಷ್ಟು ಕಷ್ಟ ಕೊಟ್ಟರೂ, ಎಷ್ಟೇ ಪ್ರಯತ್ನ ಮಾಡಿದರೂ ಕೂಡ ನನ್ನನ್ನು ತ್ರಿಷಾಳಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವಿಜಯ್ ಪರೋಕ್ಷವಾಗಿ ಹೇಳಿದಂತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಅಕ್ರಮ ಸಂಬಂಧ ಹೊಂದಿರುವ ವ್ಯಕ್ತಿ ಹೊರಗಡೆ ಬಂದು ಮಾಸ್ ಭಾಷಣ ಮಾಡುತ್ತಿದ್ಧಾನೆ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ.

ಇದರ ಹೊರತಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧವೂ ವಾಗ್ದಾಳಿ ನಡೆಸಿದ ವಿಜಯ್, ಡಿಎಂಕೆ-ನೇತೃತ್ವದ ಸರ್ಕಾರವನ್ನು "ಕ್ಯಾಶ್-ಬಾಕ್ಸ್ ಒಕ್ಕೂಟ" ಎಂದು ಬಣ್ಣಿಸಿದ್ದಾರೆ. ಈ ಹಾಲಿ ಸರ್ಕಾರಕ್ಕೆ ನಿಜವಾದ ಅಧಿಕಾರವಿಲ್ಲ ಎಂದೂ ವಿಜಯ್ ಟೀಕಿಸಿದ್ದಾರೆ.

More from Filmibeat

English summary
With just one month to go for the TN Elections, Vijay addresses the "painful trials" rocking his personal life. From desertion claims to Sangeetha’s legal filing, see how the TVK chief is fighting back against the divorce scandal.
Read more about: vijay politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X