ತಬ್ಬಿಕೊಳ್ಳಲು, ಮುತ್ತಿಕ್ಕಲು ಭಯವಾಗುತ್ತಿದೆ ಎಂದ ಹಾಟ್ ನಟಿ

ಕೊರೊನಾ ಚಿತ್ರರಂಗದ ಮೇಲೆ ಭಾರಿ ದೊಡ್ಡ ಪರಿಣಾಮ ಬೀರಿದೆ. ಭಾರತದಲ್ಲಿ ಚಿತ್ರಮಂದಿರಗಳು ಬಾಗಿಲು ಮುಚ್ಚಿ ಮೂರು ತಿಂಗಳಿಗೂ ಮೇಲಾಯ್ತು. ಭಾರಿ ದೊಡ್ಡ ಹೊಡೆತವನ್ನು ಕೊರೊನಾ, ಚಿತ್ರರಂಗಕ್ಕೆ ನೀಡಿದೆ.

Recommended Video

Ambareesh memorial:ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಬಿಎಸ್‌ವೈ ಅಸ್ತು |Kanteerava Studio |Filmibeat Kannada

ಕೊರೊನಾ ಮುಗಿದ ಮೇಲೂ ಚಿತ್ರರಂಗದ ಸ್ಥಿತಿ ಮುಂಚಿನಂತೆ ಆಗುವುದಿಲ್ಲ ಎನ್ನಲಾಗುತ್ತಿದೆ. ಚಿತ್ರೀಕರಣ ವ್ಯವಸ್ಥೆ ಮೊದಲಿನಂತಿರುವುದಿಲ್ಲ, ನಟ-ನಟಿಯರೂ ಸಹ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡದಲ್ಲೂ ನಟಿಸಿರುವ ರೆಜಿನಾ ಕಸಾಂಡ್ರಾ, ಚಿತ್ರೀಕರಣ ಸಮಯದಲ್ಲಿ ಮುತ್ತನಿಡಲು, ತಬ್ಬಿಕೊಳ್ಳುವ ಸೀನ್‌ಗಳಲ್ಲಿ ನಟಿಸಲು ಭಯವಾಗುತ್ತದೆ ಎಂದಿದ್ದಾರೆ. ಇದು ಈ ಒಬ್ಬರು ನಟಿಯ ಆತಂಕವಲ್ಲ ಬಹುತೇಕ ಎಲ್ಲಾ ನಟಿ-ನಟರದ್ದೂ ಇದೇ ಆತಂಕ.

'ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ರಿಸ್ಕ್ ಎನಿಸುತ್ತಿದೆ'

'ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ರಿಸ್ಕ್ ಎನಿಸುತ್ತಿದೆ'

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರೆಜಿನಾ, ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ರಿಸ್ಕ್ ಎನಿಸುತ್ತಿದೆ. ತಬ್ಬಿಕೊಳ್ಳುವ, ಮುತ್ತು ಕೊಡುವ ದೃಶ್ಯಗಳಲ್ಲಿ ನಟಿಸುವುದಕ್ಕೆ ಭಯವಾಗುತ್ತದೆ ಎಂದಿದ್ದಾರೆ. ರೆಜಿನಾ ಹೀಗೆ ಹೇಳಲು ಕಾರಣ ಕೊರೊನಾ.

'ಮುತ್ತಿಕ್ಕುವ ದೃಶ್ಯಗಳು ಮುಜುಗರ ತರುತ್ತವೆ'

'ಮುತ್ತಿಕ್ಕುವ ದೃಶ್ಯಗಳು ಮುಜುಗರ ತರುತ್ತವೆ'

ಸಿನಿಮಾಗಳಲ್ಲಿ ಮುತ್ತಿಕ್ಕುವ ದೃಶ್ಯಗಳಲ್ಲಿ ನಟಿಸುವುದು ವೈಯಕ್ತಿಕವಾಗಿ ನನಗೆ ಮುಜುಗರ ತರುವಂಥಹದು ಆದರೆ ಪಾತ್ರದ ಅವಶ್ಯಕತೆಗೆ ಮಾಡಲೇ ಬೇಕಾಗಿರುತ್ತದೆ. ಆದರೆ ಕೊರೊನಾ ದೆಸೆಯಿಂದ ಅಂಥಹಾ ದೃಶ್ಯಗಳಲ್ಲಿ ಇನ್ನು ಮುಂದೆ ನಟಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.

ತುಟಿಗೆ-ತುಟಿ ಒತ್ತುವ ದೃಶ್ಯಗಳು ಮಾಮೂಲಿ

ತುಟಿಗೆ-ತುಟಿ ಒತ್ತುವ ದೃಶ್ಯಗಳು ಮಾಮೂಲಿ

ಸಿನಿಮಾಗಳಲ್ಲಿ ತುಟಿಗೆ-ತುಟಿ ಒತ್ತುವ ದೃಶ್ಯಗಳು ಮಾಮೂಲಿ ಎಂಬಂತಾಗಿಬಿಟ್ಟಿವೆ, ಬಾಲಿವುಡ್‌ನಲ್ಲಂತೂ ಮುತ್ತಿನ ದೃಶ್ಯಗಳು ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಇರುತ್ತವೆ, ಆದರೆ ಕೊರೊನಾ ಕಾರಣದಿಂದ ಇನ್ನು ಮುಂದೆ ಈ ರೀತಿಯ ದೃಶ್ಯಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಅವಕಾಶ

ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಅವಕಾಶ

ಕೊರೊನಾ ಕಾರಣದಿಂದ ಭಾರತದ ಹಲವು ರಾಜ್ಯಗಳಲ್ಲಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಕರ್ನಾಟಕದಲ್ಲಿ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಚಿತ್ರೀಕರಣಕ್ಕೆ ಅವಕಾಶ ನೀಡಿದೆ. ಆದರೆ ಸೂಕ್ತ ನಿಯಮಗಳನ್ನು ಪಾಲಿಸುವಂತೆ ಷರತ್ತು ವಿಧಿಸಿದೆ.

More from Filmibeat

English summary
It is risky to act in Intimate scenes in this coronavirus situation says actress Regina Cassandra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X