ತಮಿಳು ನಟ ವಿಜಯ್ ಗೆ ಸಮನ್ಸ್ ನೀಡಿದ ಐಟಿ ಅಧಿಕಾರಿಗಳು

ತಮಿಳು ನಟ ವಿಜಯ್ ಮನೆ ಮೇಲೆ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ಮೂರು ದಿನದಲ್ಲಿ ಆಸ್ತಿಯ ಕುರಿತು ವಿವರಣೆ ನೀಡುವಂತೆ ಎಂದು ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ.

ಫೈನಾನ್ಶಿಯರ್ ಅನ್ಬು ಚೆನಿಯಾನ್ ಅವರ ಮನೆಯಲ್ಲಿ ಸಿಕ್ಕ ಸುಮಾರು 70 ಕೋಟಿಗೆ ಸಂಬಂಧಿಸಿದಂತೆ ನಟ ವಿಜಯ್ ಹಾಗೂ ಬಿಗಿಲ್ ಚಿತ್ರದ ನಿರ್ಮಾಪಕರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಫೈನಾನ್ಶಿಯರ್ ಜೊತೆ ವಿಜಯ್ ಮತ್ತು ಬಿಗಿಲ್ ಪ್ರೊಡಕ್ಷನ್ ವಹಿವಾಟು ನಡೆಸಿರುವ ದಾಖಲೆ ಇದ್ದು, ಅದಕ್ಕೆ ವಿವರಣೆ ನೀಡುವಂತೆ ಸೂಚಿಸಿದೆ.

ಇನ್ನು ವೈಯಕ್ತಿಕವಾಗಿ ವಿಜಯ್ ಗೆ ಸಂಬಂಧಿಸಿದಂತೆ ಆಸ್ತಿ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಐಟಿ ಸಂಸ್ಥೆ ಕೇಳಿದೆ. ವಿಜಯ್ ಮನೆಯಲ್ಲಿ ಪರಿಶೀಲನೆ ವೇಳೆ ಹಣ ಹಾಗೂ ಕೆಲವು ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

It Officers Issude Summons To Tamil Actor Vijay

ಬಿಗಿಲ್ ಸಿನಿಮಾ ಬಗ್ಗೆ ಹೇಳುವುದಾದರೆ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ 250-300 ಕೋಟಿ ಗಳಿಸಿದೆ. ಸಿನಿಮಾ ದೊಡ್ಡ ಹಿಟ್ ಆಗಿತ್ತು. ಈ ಚಿತ್ರಕ್ಕಾಗಿ ವಿಜಯ್ ಕೂಡ ದೊಡ್ಡ ಬೆಲೆಯ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದ ಈ ಚಿತ್ರವನ್ನ ಎಜಿಎಸ್ ಪ್ರೊಡಕ್ಷನ್ ನಿರ್ಮಾಣ ಮಾಡಿತ್ತು.

ಸದ್ಯ 'ಮಾಸ್ಟರ್' ಚಿತ್ರದಲ್ಲಿ ನಟಿಸುತ್ತಿರುವ ವಿಜಯ್ ಚೆನ್ನೈನಲ್ಲಿ ಶೂಟಿಂಗ್ ಮಾಡ್ತಿದ್ದಾರೆ. ಮಾಸ್ಟರ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಐಟಿ ರೇಡ್ ಆಗಿದ್ದ ಕಾರಣ ಶೂಟಿಂಗ್ ಸ್ಥಗಿತವಾಗಿತ್ತು. ಬಳಿಕ, ವಿಚಾರಣೆ ಅಂತ್ಯವಾದ್ಮೇಲೆ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ ವಿಜಯ್.

More from Filmibeat

English summary
Income tax officer issued summons to tamil actor Vijay on monday. they asked to clarified about his property and income source.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X