Jailer: 300 ಕೋಟಿ ಕ್ಲಬ್ ಸೇರಿದ ಜೈಲರ್ ಕರ್ನಾಟಕದಲ್ಲಿ 4 ದಿನಕ್ಕೆ ಗಳಿಸಿದ್ದೆಷ್ಟು?

ಸದ್ಯ ಬಾಕ್ಸ್ ಆಫೀಸ್ ಹಾಗೂ ಸಾಮಾಜಿಕ ಜಾಲತಾಣ ಎಲ್ಲೇ ನೋಡಿದರೂ ಹೆಚ್ಚಾಗಿ ಕೇಳಿ ಬರುತ್ತಿರುವುದು ಜೈಲರ್ ಚಿತ್ರದ ಸುದ್ದಿಗಳೇ. ಹೌದು, ಜೈಲರ್ ಚಿತ್ರದ ಅಬ್ಬರ ಅಷ್ಟು ಮಟ್ಟಕ್ಕಿದೆ. ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು, ಕೇರಳ ಹಾಗೂ ಹಿಂದಿ ಬೆಲ್ಟ್‌ನಲ್ಲಿಯೂ ಸಹ ಜೈಲರ್ ಒಳ್ಳೆಯ ಗಳಿಕೆಯನ್ನೇ ಮಾಡಿದೆ.

ಇನ್ನು ದೇಶದಲ್ಲಿ ಜೈಲರ್ ಮಾಡಿರುವ ಒಟ್ಟು ಗಳಿಕೆಯಲ್ಲಿ ಸಿಂಹಪಾಲು ತಮಿಳುನಾಡಿನ ಬಾಕ್ಸ್ ಆಫೀಸ್‌ನದ್ದಾದರೆ, ಎರಡನೇ ಸ್ಥಾನ ಕರ್ನಾಟಕದ ಪಾಲು. ಹೌದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ಜೈಲರ್ ಮೊದಲ ವಾರಾಂತ್ಯಕ್ಕೆ ಬರೋಬ್ಬರಿ 31.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದು ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ತಮಿಳು ಚಿತ್ರವೊಂದು ಮಾಡಿದ ವೇಗದ ಕಲೆಕ್ಷನ್ ಆಗಿದೆ.

Jailer 4 days Box Office: Movie grossed 31.2 crores in Karnataka Box Office

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಜೈಲರ್ 4 ದಿನಗಳಲ್ಲಿ ಗಳಿಸಿದ್ದೆಷ್ಟು?

ಮೊದಲ ದಿನ ಅಬ್ಬರಿಸಿದ್ದ ಜೈಲರ್ ಎರಡನೇ ದಿನ ಹಾಗೂ ಮೂರನೇ ದಿನವೂ ಸಹ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 91.10 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದ ಜೈಲರ್ ಎರಡನೇ ದಿನ 52.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಮೂರನೇ ದಿನ 80.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ 3 ದಿನಗಳಲ್ಲಿ 224.15 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಜೈಲರ್ ನಾಲ್ಕನೇ ದಿನ ಭಾನುವಾರ ತನ್ನ ಕಲೆಕ್ಷನ್ ನಾಗಾಲೋಟವನ್ನು ಮುಂದುವರೆಸಿದೆ.

ಹೌದು, ನಾಲ್ಕನೇ ದಿನ ಆಗಸ್ಟ್ 13ರ ಭಾನುವಾರ ಜೈಲರ್ ಚಿತ್ರ ವಿಶ್ವದಾದ್ಯಂತ 89 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಜೈಲರ್ ಮೊದಲ 4 ದಿನಗಳಲ್ಲಿಯೇ 313 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿದೆ.

ಬೆಂಗಳೂರಿನಲ್ಲಿ ಹೆಚ್ಚು ಶೋ ಪಡೆದುಕೊಳ್ಳುತ್ತಿರುವ ಜೈಲರ್:

ಜೈಲರ್ ಅಬ್ಬರದ ಕಲೆಕ್ಷನ್ ಮಾಡುತ್ತಿರುವ ಕಾರಣ ಉಳಿದ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಬೆಂಗಳೂರು ನಗರದಲ್ಲಿ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಉಳಿದ ಚಿತ್ರಗಳಿಗಿಂತ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡು ಅಬ್ಬರಿಸಿದೆ. ಹಾಗಿದ್ದರೆ ಜೈಲರ್ ಬಿಡುಗಡೆಯ ದಿನದಿಂದ ಐದನೇ ದಿನದವರೆಗೆ ಎಷ್ಟು ಶೋಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಆಗಸ್ಟ್ 10:

ಜೈಲರ್ : 1092 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 99 ಪ್ರದರ್ಶನಗಳು

ಆಪನ್‌ಹೈಮರ್ : 75 ಪ್ರದರ್ಶನಗಳು

ಕೌಸಲ್ಯ ಸುಪ್ರಜ ರಾಮ : 73 ಪ್ರದರ್ಶನಗಳು

ಮೆಗ್ 2 : 64 ಪ್ರದರ್ಶನಗಳು

ಆಗಸ್ಟ್ 11:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 12:

ಜೈಲರ್ : 551 ಪ್ರದರ್ಶನಗಳು

ಭೋಳ ಶಂಕರ್ : 321 ಪ್ರದರ್ಶನಗಳು

ಗದರ್ 2 : 191 ಪ್ರದರ್ಶನಗಳು

ಓ ಮೈ ಗಾಡ್ 2 : 177 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 603 ಪ್ರದರ್ಶನಗಳು

ಭೋಳ ಶಂಕರ್ : 222 ಪ್ರದರ್ಶನಗಳು

ಗದರ್ 2 : 197 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 90 ಪ್ರದರ್ಶನಗಳು

ಆಗಸ್ಟ್ 13:

ಜೈಲರ್ : 620 ಪ್ರದರ್ಶನಗಳು

ಭೋಳ ಶಂಕರ್ : 207 ಪ್ರದರ್ಶನಗಳು

ಗದರ್ 2 : 198 ಪ್ರದರ್ಶನಗಳು

ಓ ಮೈ ಗಾಡ್ 2 : 176 ಪ್ರದರ್ಶನಗಳು

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು

More from Filmibeat

English summary
Jailer 4 days Box Office: Movie grossed 31.2 crores in Karnataka Box Office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X