Jailer Box Office Collection Day 4: ಭಾನುವಾರ ಬಾಕ್ಸ್ ಆಫೀಸ್‌ನಲ್ಲಿ ಜೈಲರ್ ಅಬ್ಬರ; 4 ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು?

ಸದ್ಯ ಭಾರತ ಚಿತ್ರರಂಗದಲ್ಲಿಯೇ ಅತಿಹೆಚ್ಚು ಮಾಡುತ್ತಿರುವ ಸಿನಿಮಾವೆಂದರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ. ಹೌದು, ನೆಲ್ಸನ್ ಕುಮಾರ್ ನಿರ್ದೇಶನದ ಜೈಲರ್ ಚಿತ್ರ ಎಲ್ಲೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬಹು ದಿನಗಳ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಚಿತ್ರ ಅವರ ಸ್ಟಾರ್‌ಡಂಗೆ ತಕ್ಕ ಹಾಗೆ ಸೌಂಡ್ ಮಾಡುತ್ತಿದೆ.

2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ಬೀಸ್ಟ್ ಚಿತ್ರ ಮಾಡಿ ಹೀನಾಯವಾಗಿ ಟ್ರೋಲ್ ಆಗಿದ್ದ ನೆಲ್ಸನ್ ಕುಮಾರ್ ಇಬ್ಬರೂ ಸಹ ಜೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ. ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Jailer 4th Day Box Office Collection

ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನ ಅಬ್ಬರಿಸಿದ್ದ ಜೈಲರ್ ಎರಡನೇ ದಿನ ಹಾಗೂ ಮೂರನೇ ದಿನವೂ ಸಹ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನ 91.10 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದ ಜೈಲರ್ ಎರಡನೇ ದಿನ 52.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಮೂರನೇ ದಿನ 80.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿತ್ತು. ಹೀಗೆ ಮೊದಲ 3 ದಿನಗಳಲ್ಲಿ 224.15 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಜೈಲರ್ ನಾಲ್ಕನೇ ದಿನ ಭಾನುವಾರ ತನ್ನ ಕಲೆಕ್ಷನ್ ನಾಗಾಲೋಟವನ್ನು ಮುಂದುವರೆಸಿದೆ.

ಹೌದು, ನಾಲ್ಕನೇ ದಿನ ಆಗಸ್ಟ್ 13ರ ಭಾನುವಾರ ಜೈಲರ್ ಚಿತ್ರ ವಿಶ್ವದಾದ್ಯಂತ 89 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಜೈಲರ್ ಮೊದಲ 4 ದಿನಗಳಲ್ಲಿಯೇ 313 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿದೆ.

More from Filmibeat

English summary
Jailer 4 Days Collection: Movie grossed 300 crores worldwide in just 4 days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X