Rajinikanth: "10 ವರ್ಷದ ಹಿಂದೆ ಇಂಡಿಯನ್ ಸಿನ್ಮಾ ಅಂದ್ರೆ ಹಿಂದಿ ಬಿಟ್ರೆ, ತಮಿಳು ಅಷ್ಟೇ.. ಕನ್ನಡ ಇಂಡಸ್ಟ್ರಿ ಗೊತ್ತಿರ್ಲಿಲ್ಲ"
ಕನ್ನಡ ಚಿತ್ರರಂಗದ ಸುವರ್ಣಯುಗ ಮತ್ತೆ ಶುರುವಾಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುತ್ತಿದೆ. 'KGF', 'ಕಾಂತಾರ' ಸಿನಿಮಾಗಳು ದೇಶ ವಿದೇಶಗಳಲ್ಲಿ ಸಂಚಲನ ಸೃಷ್ಟಿಸಿವೆ. ಬಾಲಿವುಡ್ ಸ್ಟಾರ್‌ಗಳೇ ಕನ್ನಡ ನಟರ ಅಭಿಮಾನಿಗಳಾಬಿಟ್ಟಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. ಕನ್ನಡ ಚಿತ್ರರಂಗದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತುಗಳು ವೈರಲ್ ಆಗುತ್ತಿದೆ.
ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲವೇ ಕ್ಷಣಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸಿನಿಮಾ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ತಿದೆ. ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್, ಮೋಹನ್ ಲಾಲ್ ಸಹ ನಟಿಸಿದ್ದಾರೆ.

ಇನ್ನು ಇತ್ತೀಚೆಗೆ ಚೆನ್ನೈನ ಜವಹರಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ 'ಜೈಲರ್' ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿತ್ತು. ಶಿವಣ್ಣ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಇನ್ನು ವೇದಿಕೆಯಲ್ಲಿ ರಜನಿಕಾಂತ್ ಒಂದು ಗಂಟೆಗೂ ಹೆಚ್ಚು ಸಮಯ ಮಾತನಾಡಿದರು. 'ಜೈಲರ್' ಸಿನಿಮಾ ಬಗ್ಗೆ ಮಾತ್ರವಲ್ಲ ಸಾಕಷ್ಟು ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿದ್ದರು.
ಕನ್ನಡ ಇಂಡಸ್ಟ್ರಿ ಗೊತ್ತೇ ಇರ್ಲಿಲ್ಲ
"10 ವರ್ಷಗಳ ಹಿಂದೆ ಕೂಡ ಇಂಡಿಯನ್ ಸಿನಿಮಾ ಎಂದರೆ ಹಿಂದಿ ಬಿಟ್ಟರೆ ನೆಕ್ಟ್ಸ್ ತಮಿಳು ಸಿನಿಮಾ ಎನ್ನುವಂತಿತ್ತು. ಸೌತ್ ಅಂದ್ರು ತಮಿಳು ಎನ್ನವಂತಾಗಿತ್ತು. ಉಳಿದಿದ್ದೆಲ್ಲಾ ಹಾಗೆ ಹೀಗೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಇಂಡಸ್ಟ್ರಿ ಅನ್ನೋದು ಇದ್ದಿದ್ದೆ ಗೊತ್ತಿರಲಿಲ್ಲ. ಆದರೆ ಈಗ ಕನ್ನಡ ಇಂಡಸ್ಟ್ರಿ ಅಂದರೆ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗಿದೆ."
ದೊಡ್ಡ ಸಿನಿಮಾಗಳು ಗೆಲ್ಲಬೇಕು
"KGF', 'ಕಾಂತಾರ' ಸಿನಿಮಾಗಳಿಂದ ಎಲ್ಲೋ ಹೋಗಿಬಿಟ್ಟರು. ತೆಲುಗಿನ 'ಬಾಹುಬಲಿ', 'RRR', 'ಪುಷ್ಪ' ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅವ್ರು ಈಗ ಎಲ್ಲೋ ಹೋಗಿಬಿಟ್ಟಿದ್ದಾರೆ. ಆದರೆ ಇಲ್ಲಿ ನಮ್ಮ ತಮಿಳಿನಲ್ಲಿ ಎಲ್ಲಾ ಹೀರೊಗಳ ಸಿನಿಮಾಗಳು ಚೆನ್ನಾಗಿ ಓಡಬೇಕು. ಎಲ್ಲಾ ಸಿನಿಮಾ ಉತ್ತಮ ಗಳಿಕೆ ಕಾಣಬೇಕು. ಮುಖ್ಯವಾಗಿ ದೊಡ್ಡ ಹೀರೊಗಳ ಸಿನಿಮಾಗಳು ಗೆಲ್ಲಬೇಕು. ಆಗ ಮಾತ್ರ ಥಿಯೇಟರ್‌ನವರಿಗೆ ಹಣ ಬರುತ್ತದೆ"

ನಾವು ಕಲಾವಿದರು ಒಗ್ಗಟ್ಟಾಗಿದ್ದೀವಿ
"ಚಿಕ್ಕ ಚಿಕ್ಕ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ಹಾಕಲ್ಲ ಎನ್ನುತ್ತಿದ್ದಾರೆ. ಟಿಕೆಟ್ ರೇಟ್ ಜಾಸ್ತಿ. ಓಟಿಟಿಯಲ್ಲಿ ನೋಡೋಣ ಎಂದು ಸುಮ್ಮನಾಗಿಬಿಡುತ್ತಾರೆ. ಹಾಗಾಗಿ ಆ ಹೀರೊ, ಈ ಹೀರೋ ಸಿನಿಮಾ ಎಂದು ನೋಡದೇ ಒಳ್ಳೆ ಸಿನಿಮಾ, ದೊಡ್ಡ ಸಿನಿಮಾ ಎಂದು ನೋಡಬೇಕು. ನಾವು ಕಲಾವಿದರೆಲ್ಲಾ ಒಗ್ಗಟ್ಟಾಗಿ ಇದ್ದೀವಿ. ಆದರೆ ನೀವು ಏನೇನೋ ಅಂದುಕೊಳ್ಳುತ್ತಿದ್ದೀರಾ. ನಾವೆಲ್ಲಾ ಒಂದೇ. ನಮ್ಮ ಸಿನಿಮಾಗಳಿಗೆ ನಮ್ಮ ಸಿನಿಮಾಗಳೇ ಪೈಪೋಟಿ. ಅದು ಬಿಟ್ಟು ಬೇರೆ ಪೈಪೋಟಿ ಇಲ್ಲ. ಎಲ್ಲಾ ಒಳ್ಳೆ ಸಿನಿಮಾಗಳನ್ನು ನೋಡಿ ಹರಸಿ " ಎಂದು ರಜನಿಕಾಂತ್ ಹೇಳಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ತಲೈವಾ
ಹೊಸ ಪಕ್ಷ ಕಟ್ಟಿ ರಾಜಕೀಯರಂಗ ಪ್ರವೇಶಿಸುವುದಾಗಿ ಹೇಳಿದ್ದ ರಜನಿಕಾಂತ್ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಇದೀಗ ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೈಲರ್ ಬಳಿಕ ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಮಗಳು ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಚಿತ್ರದ ಮುಖ್ಯ ಪಾತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ವಯಸ್ಸು 70 ದಾಟಿದ್ರು ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.


Click it and Unblock the Notifications











