ಬೆಂಗಳೂರಲ್ಲಿ 'ಜೈಲರ್' ಹಗಲು ದರೋಡೆ? ಟಿಕೆಟ್ ದರ 600 ರೂ.ನಿಂದ 1400 ರೂ.. ಹೊರ ರಾಜ್ಯದವರು ಶಾಕ್

ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಮುಂದಿನ ವಾರ ತೆರೆಗಪ್ಪಳಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ನಟಿಸಿದ್ದು ಶಿವರಾಜ್‌ಕುಮಾರ್, ಮೋಹನ್ ಲಾಲ್ ಸಾಥ್ ಸಿಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬೆಂಗಳೂರಿನಲ್ಲಿ ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಟಿಕೆಟ್ ದರ ಕೇಳಿ ಕೆಲವರು ದಂಗಾಗಿದ್ದಾರೆ.

'ಅಣ್ಣಾತ್ತೆ' ನಂತರ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಮತ್ತೆ ಅಭಿಮಾನಿಗಳು ಸೂಪರ್ ಸ್ಟಾರ್ ಆರ್ಭಟವನ್ನು ತೆರೆಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕಥೆಯ ಬಗ್ಗೆ ಸುಳಿವು ಬಿಟ್ಟು ಕೊಡದೇ ಸಿನಿಮಾ ಬಗ್ಗೆ ಚಿತ್ರತಂಡ ಕುತೂಹಲ ಕೆರಳುವಂತೆ ಮಾಡಿದೆ. ಸನ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದೆ. ತಮಿಳುನಾಡಿಗಿಂತ ಮೊದಲು ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

Jailer-ticket- prices- hiked- in- Bengaluru

ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ 'ಜೈಲರ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಜಯಣ್ಣ ಫಿಲ್ಮ್ಸ್ ಮೂಲಕ ಎವಿ ಮೀಡಿಯಾ ಕನ್ಸಲ್ಟೆನ್ಸಿ ಸಂಸ್ಥೆ 'ಜೈಲರ್' ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಿದೆ. ಸದ್ಯ ಸಿನಿಮಾಗಿರುವ ಕ್ರೇಜ್‌ ಎನ್‌ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ.

ಹೆಚ್ಚಾಯ್ತು ಟಿಕೆಟ್ ದರ

ಬೆಂಗಳೂರಿನಲ್ಲಿ ಮೊದಲ ದಿನದ 500ಕ್ಕೂ ಅಧಿಕ ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಮುಖ್ಯವಾಗಿ ಪಿವಿಆರ್‌, ಐನಾಕ್ಸ್‌ ಚೈನ್‌ನಲ್ಲಿ ಟಿಕೆಟ್ ದರ ಹೆಚ್ಚಿಸಿರೋದು ಕಂಡುಬರುತ್ತಿದೆ. ಕರ್ನಾಟಕದಲ್ಲಿ ಯಾವುದೇ ಕನ್ನಡ ಸಿನಿಮಾಗಳಿಗೂ ಈ ಮಟ್ಟಿಗೆ ಟಿಕೆಟ್ ದರ ನಿಗದಿ ಪಡಿಸಿರಲಿಲ್ಲ. ಪಿವಿಆರ್‌ ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ಟಿಕೆಟ್ ದರ 550 ರೂ.ನಿಂದ 1400 ರೂ,ವರೆಗೆ ಇದೆ. ಅಂದರೆ ಸರಾಸರಿ 700 ರೂ.ವರೆಗೆ ನಿಗದಿಪಡಿಸಿದ್ದಾರೆ.

Jailer-ticket- prices- hiked- in- Bengaluru

ಸಿನಿರಸಿಕರು ಶಾಕ್

ಪಿವಿಆರ್‌, ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಲ್ಲಿ 'ಜೈಲರ್' ಟಿಕೆಟ್ ದರ ನೋಡಿ ಸಿನಿರಸಿಕರು ಶಾಕ್ ಆಗಿದ್ದಾರೆ. ಸಾಮಾನ್ಯ ಜನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು ಸಾಧ್ಯವಿಲ್ಲ. ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ ಎಂದು ಈ ರೀತಿ ದರ ಹೆಚ್ಚಿಸಿದರೆ ಹೇಗೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ದರೋಡೆ ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟಿಕೆಟ್ ದರಕ್ಕೆ ಪರಭಾಷಿಕರು ದಂಗು

ಸದ್ಯ ಕರ್ನಾಟಕದಲ್ಲಿ ಮಾತ್ರ 'ಜೈಲರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಬೆಂಗಳೂರು ಪಿವಿಆರ್‌ನಲ್ಲಿ 600 ರೂ.ನಿಂದ 1400 ರೂ. ಟಿಕೆಟ್ ದರ ನೋಡಿ ಪರಭಾಷಾ ಸಿನಿರಸಿಕರು ದಂಗಾಗಿದ್ದಾರೆ. ಬೆಂಗಳೂರಿನಲ್ಲಿ ಇಷ್ಟು ಟಿಕೆಟ್ ದರ ಯಾಕೆ? ಎನ್ನುತ್ತಿದ್ದಾರೆ. ಬರೀ ಮಲ್ಟಿಪ್ಲೆಕ್ಸ್ ಮಾತ್ರವಲ್ಲ ಕೆಲ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಬೆಳಗ್ಗೆ 6.30ರ ಶೋ ಟಿಕೆಟ್ ದರ ಹೆಚ್ಚಾಗಿದೆ.

'ಜೈಲರ್‌'ಗೆ ಒಳ್ಳೆ ಅವಕಾಶ

ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಥಿಯೇಟರ್‌ಗಳು ಖಾಲಿಯಾಗಿವೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', 'ಕೌಸಲ್ಯಾ ಸುಪ್ರಜಾ ರಾಮ', 'ಆಚಾರ್‌ ಅಂಡ್ ಕೋ' ಈಗಾಗಲೇ ಗೆದ್ದು ಬೀಗಿವೆ. ಆದರೂ ಮುಂದಿನ ವಾರದ ವೇಳೆ ಎಲ್ಲೆಡೆ 'ಜೈಲರ್' ಆರ್ಭಟ ಶುರುವಾಗುವ ಸುಳಿವು ಸಿಗುತ್ತಿದೆ. ಕನ್ನಡ ಸಿನಿಮಾಗಳು ಇಲ್ಲದೇ ಇರುವ ಅವಕಾಶವನ್ನು 'ಜೈಲರ್' ಬಳಸಿಕೊಳ್ಳಲಿದೆ. ಮೊದಲ ದಿನವೇ 1000ಕ್ಕೂ ಅಧಿಕ ಶೋಗಳು ಬೆಂಗಳೂರಿನಲ್ಲಿ ಪ್ರದರ್ಶನವಾಗುವ ಸಾಧ್ಯತೆಯಿದೆ.

ಆಗಸ್ಟ್ 10ಕ್ಕೆ ಚಿತ್ರ ರಿಲೀಸ್

ಮುಂದಿನ ಗುರುವಾರ 'ಜೈಲರ್' ಆರ್ಭಟ ಶುರುವಾಗಲಿದೆ. ಚಿತ್ರದಲ್ಲಿ ರಜನಿಕಾಂತ್ ಮಡದಿ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದಾರೆ. ತಮನ್ನಾ ಮುಖ್ಯವಾದ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮೋಹನ್ ಲಾಲ್, ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಮತ್ತಷ್ಟು ಖದರ್ ತಂದುಕೊಟ್ಟಿದೆ. ಈಗಾಗಲೇ ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ 'ಜೈಲರ್' ಆಲ್ಬಮ್ ಹಿಟ್ ಆಗಿದೆ.

More from Filmibeat

English summary
Jailer Booking open: Rajinikanth Starrer film ticket prices hiked in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X