Jailer: ಆರೇ ದಿನಕ್ಕೆ ಕಾಂತಾರ, ಆದಿಪುರುಷ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಮುರಿದ ಜೈಲರ್!
ಸದ್ಯ ಭಾರತ ಸಿನಿಮಾ ರಂಗದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಜೈಲರ್. ಹೌದು, ಆಗಸ್ಟ್ 10ರಂದು ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಕುಮಾರ್ ಕಾಂಬಿನೇಶನ್ ನ ಸಿನಿಮಾ ಜೈಲರ್ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಕ್ರೇಜ್ ಹೆಚ್ವುತ್ತಲೇ ಇದೆ.
ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಂಡಿತು. ಮೊದಲ ಪ್ರದರ್ಶನದ ಬಳಿಕ ಶುರುವಾದ ಈ ಜೈಲರ್ ಭಜನೆ ಸದ್ಯ ಆರು ದಿನಗಳು ಮುಕ್ತಾಯಗೊಂಡರೂ ಸಹ ನಿಲ್ಲುವ ಹಾಗೆ ಕಾಣುತ್ತಿಲ್ಲ.

ಐದನೇ ದಿನವೂ ಸಹ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಜೈಲರ್ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಕಳೆದ ಗುರುವಾರ ಬಿಡುಗಡೆಗೊಂಡು ಅಬ್ಬರಿಸಿದ್ದ ಜೈಲರ್ ವಾರಾಂತ್ಯದ ದಿನಗಳಲ್ಲಿ ಮತ್ತಷ್ಟು ಗಳಿಕೆ ಮಾಡಿತು. ಅಲ್ಲದೇ ನಿನ್ನೆ ( ಆಗಸ್ಟ್ 15 ) ಸ್ವಾತಂತ್ರ ದಿನಾಚರಣೆಯ ರಜಾ ದಿನವಾದ್ದರಿಂದ ಜೈಲರ್ ಬೊಕ್ಕಸಕ್ಕೆ ಮತ್ತಷ್ಟು ಕೋಟಿ ಹರಿದು ಬಂತು.
ಪರಿಣಾಮ ಜೈಲರ್ ಚಿತ್ರ ಬಿಡುಗಡೆಯಾದ 6 ದಿನಗಳಲ್ಲಿ ಬರೋಬ್ಬರಿ 402 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಕಾಂತಾರ ಚಿತ್ರದ ಕಲೆಕ್ಷನ್ ದಾಖಲೆಯನ್ನು ಮುರಿದು ಹಾಕಿದೆ. ಹೌದು, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಚಿತ್ರ ಒಟ್ಟು 401.05 ಕೋಟಿ ಗಳಿಕೆ ಮಾಡಿತ್ತು.
ಇನ್ನು ಈ ವರ್ಷ ಬಿಡುಗಡೆಯಾಗಿ ಅತಿಯಾಗಿ ಟ್ರೋಲ್ ಆದ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಓಂ ರಾವತ್ ಕಾಂಬಿನೇಶನ್ ನ ಆದಿಪುರುಷ್ ಚಿತ್ರದ ಒಟ್ಟಾರೆ ಗಳಿಕೆಯನ್ನೂ ಸಹ ಜೈಲರ್ ಆರೇ ದಿನಕ್ಕೆ ಹೊಡೆದುರುಳಿಸಿದೆ. ಆದಿಪುರುಷ್ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 397 ಕೋಟಿ ಗಳಿಕೆ ಮಾಡಿತ್ತು.
ಅತಿಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತದ ಚಿತ್ರಗಳ ಪಟ್ಟಿ
ಬಾಹುಬಲಿ 2 - 1810 ಕೋಟಿ
ಆರ್ ಆರ್ ಆರ್ - 1280 ಕೋಟಿ
ಕೆಜಿಎಫ್ ಚಾಪ್ಟರ್ 2 - 1233 ಕೋಟಿ
2 ಪಾಯಿಂಟ್ 0- 709 ಕೋಟಿ
ಬಾಹುಬಲಿ ದ ಬೆಗಿನಿಂಗ್ - 605 ಕೋಟಿ
ಪೊನ್ನಿಯಿನ್ ಸೆಲ್ವನ್ 1- 487.50 ಕೋಟಿ
ಸಾಹೋ- 435 ಕೋಟಿ
ವಿಕ್ರಮ್- 417.10 ಕೋಟಿ
ಜೈಲರ್- 402.25 ಕೋಟಿ ( 6 ದಿನಗಳು)*
ಕಾಂತಾರ- 401.05 ಕೋಟಿ ಆದಿಪುರುಷ್- 397 ಕೋಟಿ
ಪುಷ್ಪ ದ ರೈಸ್ - 360 ಕೋಟಿ


Click it and Unblock the Notifications











