Jailer: 9 ದಿನಕ್ಕೆ ಜೈಲರ್ ವಿಶ್ವದಾದ್ಯಂತ ಗಳಿಸಿದ್ದೆಷ್ಟು? ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟ್ಯಾಗ್ ಪಡೆದುಕೊಂಡಿತ್ತು. ಹೌದು, ಜೈಲರ್ ಮೊದಲ ಪ್ರದರ್ಶನ ನೋಡಿ ಹೊರಬಂದ ಸಿನಿ ರಸಿಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು. ಚಿತ್ರದಲ್ಲಿನ ಪಾತ್ರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉದ್ದುದ್ದ ಪೋಸ್ಟ್‌ಗಳನ್ನು ಬರೆದುಕೊಳ್ಳುವುದರ ಮೂಲಕ ಕೊಂಡಾಡಿದ್ದರು.

ಹೀಗೆ ಜೈಲರ್ ನೋಡಿ ಹೊರಬಂದ ಸಿನಿ ರಸಿಕರು ಚಿತ್ರವನ್ನು ಹೊಗಳುವ ಪರಿ ನೋಡಿದ ಇತರೆ ಸಿನಿ ರಸಿಕರೂ ಸಹ ಚಿತ್ರವನ್ನು ನೋಡಲು ಚಿತ್ರಮಂದಿರಗಳತ್ತ ಕಾಲಿಟ್ಟರು. ಚಿತ್ರ ಮಾಸ್ ಆಗಿದ್ದರೂ ಸಹ ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಕಥೆ ಇರುವ ಕಾರಣ ಫ್ಯಾಮಿಲಿ ಆಡಿಯನ್ಸ್ ಸಹ ಕುಟುಂಬ ಸಮೇತರಾಗಿ ಚಿತ್ರಮಂದಿರಗಳತ್ತ ಬರತೊಡಗಿದ್ದಾರೆ.

Jailer Box Office: movie grossed 468 crores collection worldwide in 9 days

ಪರಿಣಾಮವಾಗಿ ಜೈಲರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಹಾಗೂ ಕಲೆಕ್ಷನ್ ಅನ್ನು ಮಾಡುತ್ತಿದೆ. ಹೌದು, ನಿನ್ನೆಗೆ ( ಆಗಸ್ಟ್ 18 ) ಜೈಲರ್ ಚಿತ್ರ ತನ್ನ 9 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದ್ದು, ವಿಶ್ವದಾದ್ಯಂತ ಬರೋಬ್ಬರಿ 468 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಇನ್ನು ಜೈಲರ್ ಈ ಮೂಲಕ ಕಳೆದ ವರ್ಷ ಇದೇ ರೀತಿಯ ಮಾಸ್ ಚಿತ್ರ ವಿಕ್ರಮ್ ಮೂಲಕ ಕಮಲ್ ಹಾಸನ್ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದೆ ಹಾಗೂ ಪೊನ್ನಿಯಿನ್ ಸೆಲ್ವನ್ 1 ಚಿತ್ರದ ದಾಖಲೆ ಮುರಿಯುವತ್ತ ಕಣ್ಣಿಟ್ಟಿದೆ.

ಹೀಗೆ 9 ದಿನಗಳಿಗೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 468 ಕೋಟಿ ಗಳಿಕೆ ಮಾಡಿರುವ ಜೈಲರ್ ಯಾವ ರಾಜ್ಯಗಳಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ತಮಿಳುನಾಡು - 147 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ಕರ್ನಾಟಕ - 52 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ತೆಲುಗು ರಾಜ್ಯಗಳು - 59 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ಕೇರಳ - 40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ಉತ್ತರ ಭಾರತ - 8 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

ವಿದೇಶ - 162 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್

More from Filmibeat

English summary
Jailer Box Office: movie grossed 468 crores collection worldwide in 9 days .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X