Jailer: 500 ಕೋಟಿ ಕ್ಲಬ್ ಸೇರಿದ ಜೈಲರ್ ಕರ್ನಾಟಕದಲ್ಲಿ ಗಳಿಸಿದ್ದೆಷ್ಟು, ಲಾಭವೆಷ್ಟು?
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟ್ಯಾಗ್ ಪಡೆದುಕೊಂಡಿತ್ತು. ಈ ಚಿತ್ರ ಮೊದಲ ದಿನ ದಾಖಲೆಯ ಆರಂಭವನ್ನು ಪಡೆದುಕೊಂಡು ಈಗಾಗಲೇ 500 ಕೋಟಿ ಕ್ಲಬ್ ಅನ್ನೂ ಸಹ ಸೇರಿದೆ.
ಜೈಲರ್ ನಿನ್ನೆಗೆ ( ಆಗಸ್ಟ್ 20 ) ತನ್ನ 11 ದಿನಗಳ ಓಟವನ್ನು ಯಶಸ್ವಿಯಾಗಿ ಪೂರೈಸಿ ವಿಶ್ವದಾದ್ಯಂತ ಒಟ್ಟು 505.40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.

ಕರ್ನಾಟಕದಲ್ಲಿ ಮೊದಲ 10 ದಿನಗಳಲ್ಲಿ 56 ಕೋಟಿ ಗಳಿಕೆ ಮಾಡಿರುವ ಜೈಲರ್ ಎಂಟನೇ ದಿನವೂ ಸಹ ಉತ್ತಮ ಕಲೆಕ್ಷನ್ ಮಾಡಿದ್ದು, ಇಂದು ( ಆಗಸ್ಟ್ 21 ) ಸಹ ರಾಜ್ಯದಲ್ಲಿ ಜೈಲರ್ ಅಬ್ಬರ ಜೋರಾಗಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಸತತವಾಗಿ ಒಳ್ಳೆಯ ಬುಕಿಂಗ್ ಪಡೆದುಕೊಂಡು ಬಂದಿರುವ ಜೈಲರ್ 500 ಕ್ಕಿಂತ ಪ್ರದರ್ಶನಗಳನ್ನು ಪಡೆದುಕೊಂಡ ದಿನವೇ ಇಲ್ಲ. ಅದೇ ರೀತಿ ಇಂದು 12ನೇ ದಿನವೂ ಸಹ ಜೈಲರ್ ಭರ್ಜರಿ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದೆ.
ಈ ಮೂಲಕ ಜೈಲರ್ ರಾಜ್ಯದಲ್ಲಿ ನೂತನ ತಮಿಳು ಇಂಡಸ್ಟ್ರಿ ಹಿಟ್ ಆಗಿದ್ದು, ಎಲ್ಲೆಡೆ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇನ್ನು ವಿಶ್ವದಾದ್ಯಂತ 505. 40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಜೈಲರ್ ಯಾವ ರಾಜ್ಯಗಳಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ವಿವರ ಈ ಕೆಳಕಂಡಂತಿದೆ.
-ಮಿಳುನಾಡು - 148.80 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
-ತೆಲುಗು ರಾಜ್ಯಗಳು- 69.60 ರೂಪಾಯಿ ಗ್ರಾಸ್ ಕಲೆಕ್ಷನ್ ( ತಮಿಳು ವರ್ಷನ್ ಸೇರಿ)
-ಕರ್ನಾಟಕ- 58.80 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
-ಕೇರಳ - 45.90 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
-ಉತ್ತರ ಭಾರತ - 11.90 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
-ವಿದೇಶ - 170.40 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್
ಇನ್ನು ಕರ್ನಾಟಕದಲ್ಲಿ 29 ಕೋಟಿ ರೂಪಾಯಿ ಶೇರ್ ಕಲೆಕ್ಷನ್ ಅನ್ನು ಜೈಲರ್ ಮಾಡಿದೆ. ಈ ಚಿತ್ರದ ಕರ್ನಾಟಕ ರೈಟ್ಸ್ 10 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ಈ ಮೂಲಕ ಕರ್ನಾಟಕದಲ್ಲಿ ಜೈಲರ್ 19 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ


Click it and Unblock the Notifications











