Jailer: ಎಲ್ಲೆಡೆ ಜೈಕಾರ ಹಾಕಿಸಿಕೊಳ್ಳುತ್ತಿರುವ ಜೈಲರ್ ಅಲ್ಲಿ ಮಾತ್ರ ಸೈಲೆಂಟ್; ಕಲೆಕ್ಷನ್ 2 ಕೋಟಿಯನ್ನೂ ಮುಟ್ಟಿಲ್ಲ!
ಸದ್ಯ ಎಲ್ಲಿ ಕೇಳಿದರೂ ಜೈಲರ್ ಚಿತ್ರದ್ದೇ ಜಪ. ಸಾಮಾಜಿಕ ಜಾಲತಾಣ ತೆರೆದರೆ ಸಾಕು ಜೈಲರ್ ಚಿತ್ರದ ವಿಮರ್ಶೆ, ಕಲೆಕ್ಷನ್ ವರದಿ ಹಾಗೂ ಚಿತ್ರದ ಅಂಶಗಳ ಕುರಿತ ಪೋಸ್ಟ್‌ಗಳೇ ತುಂಬಿ ತುಳುಕುತ್ತಿವೆ. ಕಳೆದ ಗುರುವಾರ ( ಆಗಸ್ಟ್ 10 ) ವಿಶ್ವದಾದ್ಯಂತ ಬಿಡುಗಡೆಯಾದ ಜೈಲರ್ ಸಿನಿಮಾ ಸದ್ಯ ಆರು ದಿನಗಳು ಕಳೆದಿದ್ದರೂ ಸಹ ತನ್ನ ಸದ್ದನ್ನು ಸ್ವಲ್ಪವೂ ತಗ್ಗಿಸುವ ಹಾಗೆ ಕಾಣುತ್ತಿಲ್ಲ.
ಹೌದು, ಜೈಲರ್ ಸಿನಿಮಾ ಮೊದಲ ವಾರಾಂತ್ಯವನ್ನು ಮುಕ್ತಾಯಗೊಳಿಸಿದ್ದು, ಮೊದಲ 6 ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 402 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ. ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಮೊದಲ ದಿನ ಅಬ್ಬರಿಸಿದ್ದ ಜೈಲರ್ ಎರಡನೇ ದಿನ ಹಾಗೂ ಮೂರನೇ ದಿನವೂ ಸಹ ಭರ್ಜರಿ ಕಲೆಕ್ಷನ್ ಮಾಡಿದೆ.

ಇನ್ನು ಜೈಲರ್ ಚಿತ್ರ ತಮಿಳು ನಾಡು ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು, ಕೇರಳ ಹಾಗೂ ವಿದೇಶಿ ನೆಲದಲ್ಲೂ ಸಹ ಅಬ್ಬರದ ಕಲೆಕ್ಷನ್ ಮಾಡ್ತಿದೆ. ಹೀಗೆ ಎಲ್ಲಾ ಭಾಗಗಳಲ್ಲಿಯೂ ಅಬ್ಬರದ ಗಳಿಕೆ ಮಾಡುತ್ತಿರುವ ಜೈಲರ್ ಒಂದು ಪ್ರಾಂತ್ಯದಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಹೌದು, ಹಿಂದಿ ಬೆಲ್ಟ್ ನಲ್ಲಿ ಜೈಲರ್ ಸಿನಿಮಾದ ಗಳಿಕೆ 6 ದಿನಗಳು ಕಳೆದರೂ ಸಹ 2 ಕೋಟಿ ರೂಪಾಯಿ ಮುಟ್ಟಿಲ್ಲ.
ಜೈಲರ್ ಹಿಂದಿ ಬೆಲ್ಟ್ ನಲ್ಲಿ 6 ದಿನಕ್ಕೆ 1.65 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಅನ್ನು ಮಾಡಿದೆ. ಜೈಲರ್ ಹಿಂದಿ ಬೆಲ್ಟ್ ನಲ್ಲಿ ಯಾವ ದಿನ ಎಷ್ಟು ಗಳಿಕೆ ಮಾಡಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಜೈಲರ್ ಹಿಂದಿ ಸಂಗ್ರಹಗಳು:
ಮೊದಲ ದಿನ- 35 ಲಕ್ಷ
ಎರಡನೇ ದಿನ - 15 ಲಕ್ಷ
ಮೂರನೇ ದಿನ - 25 ಲಕ್ಷ
ನಾಲ್ಕನೇ ದಿನ - 30 ಲಕ್ಷ
ಐದನೇ ದಿನ - 20 ಲಕ್ಷ
ಆರನೇ ದಿನ - 40 ಲಕ್ಷ
ಒಟ್ಟು - 1.65 ಕೋಟಿ ರೂಪಾಯಿ ( ನಿವ್ವಳ )


Click it and Unblock the Notifications











