Jailer Day 1 Collection: ಜೈಲರ್ ಮೊದಲ ದಿನ ಯಾವ ರಾಜ್ಯಗಳಲ್ಲಿ ಎಷ್ಟು ಗಳಿಸಿತು?
ನಿನ್ನೆಯಿಂದ ( ಆಗಸ್ಟ್ 10 ) ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲಿಯೂ ಹೆಚ್ಚಾಗಿ ಚರ್ಚೆಗೀಡಾಗಿರುವ ಚಿತ್ರವೆಂದರೆ ಅದು ತಮಿಳಿನ ಜೈಲರ್. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿರುವ ಜೈಲರ್ ಪ್ಯಾನ್ ಇಂಡಿಯಾ ಚಿತ್ರವಾಗಿದೆ. 2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ಬೀಸ್ಟ್ ಚಿತ್ರ ಮಾಡಿ ಹೀನಾಯವಾಗಿ ಟ್ರೋಲ್ ಆಗಿದ್ದ ನೆಲ್ಸನ್ ಕುಮಾರ್ ಇಬ್ಬರೂ ಸಹ ಜೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.
ಹೌದು, ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಅದರಲ್ಲಿಯೂ ವಿಶೇಷವಾಗಿ ಶಿವರಾಜ್‌ಕುಮಾರ್ ತಮ್ಮ ಮಾಸ್ ಅಪೀರಿಯನ್ಸ್‌ಗೆ ಅಭೂತಪೂರ್ವ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ರಜನಿಕಾಂತ್‌ಗಿಂತ ದೊಡ್ಡ ಮಟ್ಟದ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗೆ ವಿಭಿನ್ನ ಅಂಶಗಳಿಂದ ಜೈಲರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಹಾಗಿದ್ದರೆ ಜೈಲರ್ ಸಿನಿಮಾ ತನ್ನ ಬಿಡುಗಡೆಯ ದಿನ ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಮಾಡಿತು ಹಾಗೂ ರಾಜ್ಯವಾರು ಎಷ್ಟು ಗಳಿಸಿತು ಎಂಬ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ..
*ತಮಿಳುನಾಡು - 24 ಕೋಟಿ
*ಕರ್ನಾಟಕ - 11.5 ಕೋಟಿ
*ತೆಲಂಗಾಣ - 5.2 ಕೋಟಿ
*ಆಂಧ್ರ ಪ್ರದೇಶ - 6 ಕೋಟಿ
*ಕೇರಳ - 5.85 ಕೋಟಿ
*ರೆಸ್ಟ್ ಆಫ್ ಇಂಡಿಯಾ - 3 ಕೋಟಿ
*ವಿದೇಶ - 40 ಕೋಟಿ
*ಒಟ್ಟಾರೆ ಮೊದಲ ದಿನದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ - 95.5 ಕೋಟಿ


Click it and Unblock the Notifications











