Jailer: ಕರ್ನಾಟಕದಲ್ಲಿ ಜೈಲರ್ ಭರ್ಜರಿ ಕಲೆಕ್ಷನ್; ರಾಜ್ಯದ ಎಲ್ಲಾ ಹಳೆ ದಾಖಲೆ ಉಡೀಸ್!
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದ ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಜೈಲರ್ ಚಿತ್ರ ಮೊನ್ನೆಯಷ್ಟೇ ( ಆಗಸ್ಟ್ 10 ) ಬಿಡುಗಡೆಗೊಂಡಿದೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿರುವ ಜೈಲರ್ ಪ್ಯಾನ್ ಇಂಡಿಯಾ ಚಿತ್ರವಾಗಿದೆ. 2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ಬೀಸ್ಟ್ ಚಿತ್ರ ಮಾಡಿ ಹೀನಾಯವಾಗಿ ಟ್ರೋಲ್ ಆಗಿದ್ದ ನೆಲ್ಸನ್ ಕುಮಾರ್ ಇಬ್ಬರೂ ಸಹ ಜೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.
ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನಿರ್ದೇಶಕ ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನೆಲ್ಸನ್ ಕುಮಾರ್ ಹಾಗೂ ರಜಿನಿಕಾಂತ್ ಕಾಂಬಿನೇಶನ್ ವರ್ಕ್ ಆಗಿದ್ದು, ಸಿನಿ ರಸಿಕರು ಮೋಹನ್ ಲಾಲ್ ಮತ್ತು ಶಿವರಾಜ್‌ಕುಮಾರ್ ನಟನೆಗೂ ಜೈ ಎಂದಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರ್ ಅತಿಥಿ ಪಾತ್ರಕ್ಕೆ ಇಡೀ ಸೌತ್ ಇಂಡಸ್ಟ್ರಿ ಫಿದಾ ಆಗಿದ್ದು, ಚಿತ್ರ ಮೊದಲ ಶೋ ಮುಗಿಯುತ್ತಿದಂತೆಯೇ ಸೂಪರ್ ಹಿಟ್ ಹಂತವನ್ನು ತಲುಪಿಬಿಟ್ಟಿದೆ.
ಮೂರನೇ ದಿನವೂ ಸಹ ಶೇ. 80 ಪ್ರದರ್ಶನಗಳು ತುಂಬು ಮಂದಿರಗಳ ಪ್ರದರ್ಶನವನ್ನು ಜೈಲರ್ ಕಾಣುತ್ತಿದ್ದು, ಮೊದಲೆರಡು ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಚಿತ್ರ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರಿಸುತ್ತಿದ್ದು, ಎರಡನೇ ದಿನ 70 ಕೋಟಿ ಕಲೆಕ್ಷನ್ ಮಾಡಿ ಎರಡು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 165 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಹೀಗೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಜೈಲರ್ ಕರ್ನಾಟಕದಲ್ಲಿಯೂ ಸಹ ದೊಡ್ಡ ಮಟ್ಟದ ಗಳಿಕೆಯನ್ನೇ ಮಾಡಿದೆ. ಹೌದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ತಮಿಳು ಸಿನಿಮಾವಾಗಿ ಜೈಲರ್ ಹೊರಹೊಮ್ಮಿದೆ. ಹೌದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 11.85 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಎರಡನೇ ದಿನ 4.12 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳಲ್ಲಿ 15.97 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ರಾಜ್ಯ ಬಾಕ್ಸ್ ಆಫೀಸ್‌ನಲ್ಲಿದ್ದ ಎಲ್ಲಾ ಹಳೆ ತಮಿಳು ದಾಖಲೆಗಳು ಅಳಿಸಿ ಹೋಗಿವೆ.


Click it and Unblock the Notifications











