ಅತಿಹೆಚ್ಚು ಹೌಸ್‌ಫುಲ್ ಶೋ ದಾಖಲೆಯಲ್ಲಿ ಕೆಜಿಎಫ್ ಎದುರು ಸೋತ ಜೈಲರ್!
ಇಂದು ( ಆಗಸ್ಟ್ 10 ) ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಜೈಲರ್ ಬಿಡುಗಡೆಯಾಗಿದೆ. ಮೊದಲಿಗೆ ಹಾಡುಗಳ ಮೂಲಕ ದೊಡ್ಡ ಮಟ್ಟದ ಟಾಕ್ ಹುಟ್ಟುಹಾಕಿದ್ದ ಜೈಲರ್ ಸಿನಿಮಾ ನಂತರ ಟ್ರೈಲರ್ ಬಿಡುಗಡೆಯಾದ ಮೇಲೆ ತನ್ನ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿತ್ತು. ಹೀಗೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಜೈಲರ್ ಸಿನಿಮಾ ಬಿಡುಗಡೆಯಾದ ಮೇಲೆ ತನ್ನ ಮೇಲಿದ್ದ ಈ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೌದು, ಜೈಲರ್ ಚಿತ್ರ ವೀಕ್ಷಿಸಿದ ಸಿನಿ ರಸಿಕರು ಚಿತ್ರವನ್ನು ಹೊಗಳುತ್ತಿದ್ದು, ಸಿನಿಮಾವನ್ನು ಒಂದೊಮ್ಮೆ ನೋಡಬಹುದು ಎಂಬ ವಿಮರ್ಶೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ರಜನಿಕಾಂತ್ ಅಣ್ಣಾತ್ತೆ ಸಿನಿಮಾದ ಹೀನಾಯ ಸೋಲಿನ ಬಳಿಕ ಈ ಜೈಲರ್ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಅತ್ತ ತನ್ನ ಕಳೆದ ಚಿತ್ರ ಬೀಸ್ಟ್ ಮೂಲಕ ಮಕಾಡೆ ಮಲಗಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಜೈಲರ್ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಮಾತ್ರವಲ್ಲದೇ ಇತರೆ ರಾಜ್ಯಗಳಲ್ಲೂ ಸಹ ಜೈಲರ್ ಅಬ್ಬರ ಜೋರಾಗಿದ್ದು, ವಿಶೇಷವಾಗಿ ಬೆಂಗಳೂರಿನಲ್ಲಿ ಚಿತ್ರ ಅಬ್ಬರದ ಪ್ರದರ್ಶನಗಳನ್ನು ಪಡೆದುಕೊಂಡು ಇಲ್ಲಿಯವರೆಗೂ ಯಾವ ಚಿತ್ರವೂ ಮಾಡದ ದಾಖಲೆಯನ್ನು ಬರೆದಿದೆ. ಹೌದು, ಜೈಲರ್ ಚಿತ್ರ ಬೆಂಗಳೂರಿನಲ್ಲಿ ವಿನೂತನ ದಾಖಲೆ ಬರೆದಿದೆ. ಸಿನಿಮಾ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವ ಚಿತ್ರವೂ ಮಾಡಿರದ ಸಾಧನೆಯನ್ನು ಜೈಲರ್ ಚಿತ್ರ ಮಾಡಿದೆ.
ಹೌದು, ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕಿರುವ ರಜನಿಕಾಂತ್ ನಟನೆಯ ಜೈಲರ್ ವಿನೂತನ ದಾಖಲೆಯನ್ನು ಬರೆದಿದೆ. ಬೆಂಗಳೂರಿನಲ್ಲಿ ಮೊದಲ ದಿನ ಜೈಲರ್ ಚಿತ್ರಕ್ಕೆ ತಮಿಳು, ಕನ್ನಡ ಹಾಗೂ ತೆಲುಗು ಈ ಮೂರೂ ಅವತರಣಿಕೆಗಳು ಸೇರಿದಂತೆ ಬರೋಬ್ಬರಿ 1092 ಪ್ರದರ್ಶನಗಳು ಲಭಿಸಿದ್ದು, ಇದು ನಗರದಲ್ಲಿ ಚಿತ್ರವೊಂದಕ್ಕೆ ಬಿಡುಗಡೆ ದಿನ ಲಭಿಸಿದ ಅತಿಹೆಚ್ಚು ಪ್ರದರ್ಶನಗಳ ಸಂಖ್ಯೆಯಾಗಿದೆ.
ಹೀಗೆ ಬೆಂಗಳೂರಿನಲ್ಲಿ ಬಿಡುಗಡೆಯ ದಿನ ಅತಿಹೆಚ್ಚು ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡ ದಾಖಲೆಯನ್ನು ಬರೆದಿರುವ ಜೈಲರ್ ಅತಿಹೆಚ್ಚು ಹೌಸ್‌ಫುಲ್ ಶೋಗಳ ದಾಖಲೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕುವಲ್ಲಿ ವಿಫಲಗೊಂಡಿದೆ. ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ಮಾಡಿದ್ದ ಅತಿಹೆಚ್ಚು ಹೌಸ್‌ಫುಲ್ ಶೋಗಳ ದಾಖಲೆ ಇಂದಿಗೂ ಸಹ ಹಾಗೆಯೇ ಉಳಿದುಕೊಂಡಿದೆ. ಹಾಗಿದ್ದರೆ ಬೆಂಗಳೂರಿನಲ್ಲಿ ಮೊದಲ ದಿನ ಅತಿಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡ ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ..
ಕೆಜಿಎಫ್ ಚಾಪ್ಟರ್ 2 - 885 ಪ್ರದರ್ಶನಗಳು
ಆರ್ ಆರ್ ಅರ್ - 679 ಪ್ರದರ್ಶನಗಳು
ಜೇಮ್ಸ್ - 650 ಪ್ರದರ್ಶನಗಳು
ಜೈಲರ್ - 601 ಪ್ರದರ್ಶನಗಳು
ಬೀಸ್ಟ್ - 434 ಪ್ರದರ್ಶನಗಳು
ಆದಿಪುರುಷ್ - 419 ಪ್ರದರ್ಶನಗಳು
ಪಠಾಣ್ - 401 ಪ್ರದರ್ಶನಗಳು
ಅವತಾರ್ ದ ವೇ ಆಫ್ ವಾಟರ್ - 382 ಪ್ರದರ್ಶನಗಳು
ಪೊನ್ನಿಯಿನ್ ಸೆಲ್ವನ್ 1 - 385 ಪ್ರದರ್ಶನಗಳು
ವಿಕ್ರಾಂತ್ ರೋಣ - 363 ಪ್ರದರ್ಶನಗಳು


Click it and Unblock the Notifications











