Jailer: ಕ್ರೇಜ್ ಹೆಚ್ಚಿಸಿದ ಜೈಲರ್ ಟ್ರೈಲರ್; ಎಲ್ಲೆಡೆ ತಲೈವಾ ಟ್ರೆಂಡಿಂಗ್ ದರ್ಬಾರ್

ನಿನ್ನೆಯಷ್ಟೇ ( ಆಗಸ್ಟ್ 2 ) ರಜನಿಕಾಂತ್ ಹಾಗೂ ನೆಲ್ಸನ್ ಕುಮಾರ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಜೈಲರ್ ಟ್ರೈಲರ್ ಬಿಡುಗಡೆಗೊಂಡಿತು. ಜೈಲರ್ ಶೋಕೇಸ್ ಎಂಬ ಹೆಸರಿನ ಅಡಿಯಲ್ಲಿ ಬಿಡುಗಡೆಗೊಂಡ ಈ ಟ್ರೈಲರ್‌ ಚಿತ್ರದ ಮೇಲೆ ಸಿನಿ ರಸಿಕರು ಹಾಗೂ ರಜನಿಕಾಂತ್ ಅಭಿಮಾನಿಗಳಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. 2.15 ನಿಮಿಷದ ಈ ಟ್ರೈಲರ್ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಮಾಸ್ ಅಂಶಗಳನ್ನು ಹೊಂದಿದ್ದು, ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಈ ಚಿತ್ರ ಗೆಲ್ಲುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಟ್ರೈಲರ್‌ನಲ್ಲಿ ರಜನಿಕಾಂತ್ ಹಿಂದೆಂದೂ ಕಂಡಿರದ ರೀತಿಯ ವಿಭಿನ್ನ ಲುಕ್‌ನಲ್ಲಿ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದು, ನಿರ್ದೇಶಕ ನೆಲ್ಸನ್ ಕುಮಾರ್ ಈ ಬಾರಿ ಸಿಕ್ಸರ್ ಬಾರಿಸುವುದು ಖಚಿತ ಎನ್ನಲಾಗುತ್ತಿದೆ. ಹೀಗೆ ಜೈಲರ್ ಚಿತ್ರ ತನ್ನ ಟ್ರೈಲರ್ ಮೂಲಕ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕಿದ್ದು ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಜೈಲರ್ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳಲ್ಲಿ ಹುಡುಕಾಡಲು ಆರಂಭಿಸಿದ್ದಾರೆ.

jailer-movie-started-to-trending

ಹೌದು, ಹೆಸರಾಂತ ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಬುಕ್‌ಮೈಶೋನಲ್ಲಿಯೂ ಸಹ ಜೈಲರ್ ಕುರಿತು ಹುಡುಕಾಟಗಳು ಜೋರಾಗಿದ್ದು, ಜೈಲರ್ ಬುಕಿಂಗ್ ಶುರುವಾಗುವ ಮುನ್ನವೇ ಟ್ರೆಂಡಿಂಗ್ ಪಟ್ಟಿ ಸೇರಿದೆ. ಕೇವಲ ತಮಿಳುನಾಡಿನ ನಗರಗಳಲ್ಲಿ ಮಾತ್ರವಲ್ಲದೇ ಕರ್ನಾಟಕದ ಪ್ರಮುಖ ನಗರಗಳಲ್ಲಿಯೂ ಸಹ ಜೈಲರ್ ಚಿತ್ರಕ್ಕಾಗಿ ಸಿನಿ ರಸಿಕರು ಬುಕ್ ಮೈ ಶೋನಲ್ಲಿ ಹುಡುಕಾಟ ನಡೆಸಿದ್ದಾರೆ.

ಹಾಗಿದ್ದರೆ ಜೈಲರ್ ಚಿತ್ರ ಯಾವ ನಗರಗಳ ಟ್ರೆಂಡಿಂಗ್ ಸರ್ಚ್ ಪಟ್ಟಿಯಲ್ಲಿ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಬೆಂಗಳೂರಿನಲ್ಲಿ ಆಗಸ್ಟ್ 3ರಂದು ಬುಕ್ ಮೈ ಶೋನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟಿರುವ ಚಿತ್ರಗಳ ಟಾಪ್ 10 ಪಟ್ಟಿ

1. ಜೈಲರ್

2. ಬೇಬಿ

3. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

4. ಬಾರ್ಬಿ

5. ಆಪನ್‌ಹೈಮರ್

6. ಬ್ಯುಸಿನೆಸ್‌ಮ್ಯಾನ್

7. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

8. ಬ್ರೋ

9. ಸನ್ ಆಫ್ ಕೃಷ್ಣನ್

10. ಇಂಟರ್‌ಸ್ಟೆಲ್ಲರ್

ಮೈಸೂರಿನಲ್ಲಿ ಆಗಸ್ಟ್ 3ರಂದು ಬುಕ್ ಮೈ ಶೋನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟಿರುವ ಚಿತ್ರಗಳ ಟಾಪ್ 10 ಪಟ್ಟಿ

1. ಬೇಬಿ

2. ಜೈಲರ್

3. ಆಪನ್‌ಹೈಮರ್

4. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

5. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

6. ಬಾರ್ಬಿ

7. ಮೆಗ್ 2

8. ಬ್ರೋ

9. ಗದರ್ 2

10. ನಮೋ ಭೂತಾತ್ಮ 2

ಶಿವಮೊಗ್ಗದಲ್ಲಿ ಆಗಸ್ಟ್ 3ರಂದು ಬುಕ್ ಮೈ ಶೋನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟಿರುವ ಚಿತ್ರಗಳ ಟಾಪ್ 10 ಪಟ್ಟಿ

1. ಬೇಬಿ

2. ಜೈಲರ್

3. ಆಪನ್‌ಹೈಮರ್

4. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

5. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

6. ಬಾರ್ಬಿ

7. ಮೆಗ್ 2

8. ಬ್ರೋ

9. ಗದರ್ 2

10. ನಮೋ ಭೂತಾತ್ಮ 2

More from Filmibeat

English summary
Jailer: Jailer movie started to trending on bookmyshow after trailer release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X