Jailer: ರಜನಿಕಾಂತ್ ಅವರ 'ಜೈಲರ್' ನೋಡಲು ಜಪಾನ್‌ನಿಂದ ಹಾರಿ ಬಂದ ಜೋಡಿ!
ಈ ಗುರುವಾರ ರಜನಿ ಜಾತ್ರೆ ಪ್ರಾರಂಭವಾಗಿದೆ. ತಲೈವರ್ ರಜನಿಕಾಂತ್ ಅವರ ಅಭಿಮಾನಿಗಳಿಗೆ ಹಬ್ಬದೂಟ ಸಿಕ್ಕಿದೆ. ಈ ಅಭಿಮಾನಕ್ಕೆ ಯಾವುದೇ ಗಡಿಗಳಿಲ್ಲ ಎಂಬುದು ಹಲವು ಬಾರಿ ರುಜುವಾತಾಗಿದೆ. ಆದರೂ ರಜನಿಕಾಂತ್ ಚಿತ್ರಗಳು ಪ್ರತಿ ಬಾರಿ ವಿಶೆಷತೆಯನ್ನು ಹೊತ್ತು ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳ ಪ್ರೀತಿ ಮಾತ್ರ ಹೆಚ್ಚುತ್ತಲೇ ಇದೆ.
ಗಡಿಗಳ ಹಂಗಿಲ್ಲದೇ ಇರುವ ರಜನಿ ಅಭಿಮಾನಿಗಳ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ್ದಾರೆ ಈ ಜಪಾನ್ ದಂಪತಿ. ಹೌದು... ಭಾರೀ ಸಂಭ್ರಮದ ನಡುವೆ ಗುರುವಾರ (ಆಗಸ್ಟ್ 10) ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಜೈಲರ್ ಸಿನಿ ಪರದೆಗೆ ಅಪ್ಪಳಿಸಿದೆ. ಸೂಪರ್‌ಸ್ಟಾರ್ ಅಭಿಮಾನಿಗಳು ಸಿನಿಮಾ ಮಂದಿರಗಳ ಬಳಿ ಜಾತ್ರೆಯನ್ನೇ ಮಾಡಿದ್ದಾರೆ.

ಚಿತ್ರಮಂದಿರಗಳ ಬಳಿ ಕೆಲವರು ಪಟಾಕಿ ಸಿಡಿಸಿದರೇ, ಮತ್ತೆ ಕೆಲವರು ಸೂಪರ್‌ಸ್ಟಾರ್‌ನ ಪೋಸ್ಟರ್‌ಗೆ ಹೂವಿನ ಹಾರಗಳನ್ನು ಹಾಕಿ ಸಂಭ್ರವಿಸಿದ್ದಾರೆ. ಇನ್ನೂ ಕರಲವು ಅಭಿಮಾನಿಗಳು ರಜನಿಕಾಂತ್ ಪೋಸ್ಟರ್‌ಗಳಿಗೆ ಹೂವಿನ ದಳಗಳ ಅಭಿಷೇಕ ಮಾಡಿದ್ದಾರೆ. ಈ ಎಲ್ಲಾ ಅಭಿಮಾನಿಗಳ ನಡುವೆ ಇಬ್ಬರು ಹೆಚ್ಚಿ ವಿಶೇಷವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಚೆನ್ನೈನಲ್ಲಿ ಜೈಲರ್ ನೋಡಲು ಬಂದ ಜಪಾನ್ ದಂಪತಿ
ರಜನಿಕಾಂತ್ ಅವರ 'ಜೈಲರ್' ಚಿತ್ರಮಂದಿರಗಳಲ್ಲಿ ಉತ್ತಮ ಓಪನಿಂಗೆ ಪಡೆದುಕೊಂಡಿದೆ. ಸಿನಿಮಾಗೆ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ. ನಟ ರಜನಿಕಾಂತ್ ಮೇಲಿರುವ ಪ್ರೀತಿ, ಆರಾಧಾನೆಯನ್ನು ಸಿನಿಮಾ ಹಾಲ್‌ಗಳಲ್ಲಿ, ಥಿಯೇಟರ್‌ಗಳ ಬಳಿ ಹೋದರೆ ಸಾಕು ಕಣ್ಣಿಗೆ ಕಟ್ಟಲಿದೆ. ಹೀಗೆಯೇ ತಲೈವರ್ ಅವರ ಸಿನಿಮಾವನ್ನು ಚೆನ್ನೈನಲ್ಲಿ ನೋಡಬೇಕು ಎಂದು ಜಪಾನಿನ ದಂಪತಿ ಸ್ಥಳೀಯ ಚಿತ್ರಮಂದಿರಕ್ಕೆ ಹೊಕ್ಕಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ತನ್ನ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದು, ಜಪಾನಿನ ದಂಪತಿ ಇತರ ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ರಜನಿಕಾಂತ್ ಅವರ ಚಿತ್ರವನ್ನು ನೋಡುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಇಲ್ಲಿಯೇ ಉಳಿದ ಅಭಿಮಾನಿಗಳೊಂದಿಗೆ ಚಿತ್ರ ನೋಡಬೇಕು ಎಂದು ಜಪಾನಿನ ಓಸಕಾದಿಂದ ಬಂದಿರುವ ಅವರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಕೈಯಲ್ಲಿ ಜೈಲರ್ ಸಿನಿಮಾದ ಪೋಸ್ಟರ್ ಹಿಡಿದು., ಖುಷಿಯಲ್ಲಿ ಮಾತನಾಡಿರುವ ಯಸುದಾ ಹಿಡೆತೋಶಿ, ತಾವು ರಜನಿಕಾಂತ್ ಅವರ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಜೈಲರ್ ಚಿತ್ರವನ್ನು ನೋಡಲು, ನಾವು ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದಲ್ಲದೇ ತಾವು ಜಪಾನ್‌ನಲ್ಲಿರುವ ರಜನಿಕಾಂತ್ ಅಭಿಮಾನಿಗಳ ಸಂಘದ ನಾಯಕರಾದ ಎಂದು ಯಸುದಾ ಹಿಡೆತೋಶಿ ಹೇಳಿದ್ದಾರೆ.
ರಜನಿಕಾಂತ್ ಅವರ 'ಜೈಲರ್'
ರಜನಿಕಾಂತ್ ಅಭಿನಯದ ಜೈಲರ್‌ಗೆ ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನವಿದೆ. ಚಿತ್ರವು ಆಗಸ್ಟ್ 10 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಮತ್ತು ಕನ್ನಡದ ಸೂಪರ್‌ಸ್ಟಾರ್ ಶಿವರಾಜ್ ಕುಮಾರ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. 'ಜೈಲರ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. 'ಕಾವಲಾ' ಮತ್ತು 'ಹುಕುಂ' ಎರಡು ಹಾಡುಗಳು ಈಗಾಗಲೇ ಹಿಟ್ ಆಗಿವೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬಂದಿದ್ದು, ಒಂದು ದಿನದಲ್ಲಿಯೇ 50 ಕೋಟಿ ಗಳಿಸುವ ಸಾಧ್ಯತೆಯಿದೆ.


Click it and Unblock the Notifications











