Jailer: ಅನಿರುದ್ಧ್ ಮುಂದೆ 3 ಕಾರು ನಿಲ್ಸಿ ಯಾವ್ದು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದ ಮಾರನ್
ನಿರ್ಮಾಪಕ ಕಲಾನಿಧಿ ಮಾರನ್ 'ಜೈಲರ್' ಸಕ್ಸಸ್ ಸಂಭ್ರಮಾಚರಣೆ ಮುಂದುವರೆಸಿದ್ದಾರೆ. ನಟ ರಜನಿಕಾಂತ್, ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಬಳಿಕ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್‌ಗೆ ಕಾರು ಹಾಗೂ ಚೆಕ್ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. 'ಜೈಲರ್' ಸಿನಿಮಾ ಸಕ್ಸಸ್‌ನಲ್ಲಿ ಅನಿರುದ್ಧ್ ಸಂಗೀತದ ಪಾಲು ದೊಡ್ಡದಿದೆ.
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ವಾರವೇ ಸಿನಿಮಾ ಓಟಿಟಿಗೆ ಬರ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಹೆಚ್‌ಡಿ ಪ್ರಿಂಟ್ ಸಿನಿಮಾ ಲೀಕ್ ಆಗಿದೆ. ಆದರೂ ಕೂಡ ಪ್ರೇಕ್ಷಕರು ಥಿಯೇಟರ್‌ಗಳಲ್ಲೇ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ಈಗಾಗಲೇ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ 'ಜೈಲರ್' ಸಿನಿಮಾ ನಿರ್ಮಾಣವಾಗಿತ್ತು. ಆ ಸಂಸ್ಥೆಗೆ ಬೇರೆ ಯಾವುದೇ ಸಿನಿಮಾ ತಂದುಕೊಡದಷ್ಟು ಲಾಭವನ್ನು 'ಜೈಲರ್' ಸಿನಿಮಾ ತಂದುಕೊಟ್ಟಿದೆ. ಹಾಗಾಗಿ ಆ ಲಾಭದ ಒಂದು ಭಾಗವನ್ನು ಚಿತ್ರಕ್ಕಾಗಿ ಶ್ರಮಿಸಿದ ಕಲಾವಿದರು, ತಂತ್ರಜ್ಞರಿಗೆ ನೀಡಲು ನಿರ್ಮಾಪಕರು ಮುಂದಾಗಿದ್ದಾರೆ. ನಾಲ್ಕೈದು ದಿನಗಳ ಹಿಂದೆ ನಟ ರಜನಿಕಾಂತ್‌ಗೆ ಲಾಭದ ಭಾಗದ ಚೆಕ್ ನೀಡಿದ್ದರು. ಬಳಿಕ 3 ಮಾಡೆಲ್ ಬಿಎಂಡಬ್ಲ್ಯೂ ಕಾರ್ ಮನೆ ಮುಂದೆ ನಿಲ್ಲಿಸಿ ಯಾವುದು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದಿದ್ದರು.
ರಜನಿಕಾಂತ್ ಬಳಿಕ ನಿರ್ದೇಶಕ ನೆಲ್ಸನ್‌ನ ತಮ್ಮ ಕಚೇರಿ ಕರೆಸಿ ಚೆಕ್ ನೀಡಿದ್ದರು. ಪೋರ್ಷ್ ಕಂಪೆನಿ ಕಾರುಗಳನ್ನು ನಿಲ್ಲಿಸಿ ಯಾವುದು ಬೇಕೊ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದರು. ಇದೀಗ ಸಂಗೀತ ಅನಿರುದ್ಧ್ ರವಿಚಂದರ್‌ನ ಕೂಡ ತಮ್ಮ ಕಚೇರಿಗೆ ಕರೆಸಿ ಚೆಕ್ ನೀಡಿ, ಪೋರ್ಷ್ ಕಂಪೆನಿಯ 3 ಮಾಡೆಲ್ ಕಾರುಗಳನ್ನು ತೋರಿಸಿ ಯಾವುದು ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ. ಅನಿರುದ್ಧ್‌ಗೆ ಚೆಕ್ ಹಾಗೂ ಕಾರ್ ಉಡುಗೊರೆಯಾಗಿ ಸಿಕ್ಕಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

'ಜೈಲರ್' ಚಿತ್ರದ ದೊಡ್ಡ ಆಧಾರಸ್ತಂಭ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್. ಕಾಲಿವುಡ್ ರಾಕ್‌ಸ್ಟಾರ್ ಎಂದೇ ಕರೆಸಿಕೊಳ್ಳುವ ಅನಿರುದ್ದ್ ಇತ್ತೀಚಿನ ವರ್ಷಗಳಲ್ಲಿ ತಮ್ಮ ಮ್ಯೂಸಿಕ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. 'ಜೈಲರ್' ಚಿತ್ರದ ಸಾಂಗ್ಸ್ ಮಾತ್ರವಲ್ಲ ಬಿಜಿಎಂ ಕೂಡ ಸೂಪರ್ ಆಗಿದೆ. 'ಕಾವಾಲಯ್ಯ' ವರ್ಷದ ಸೂಪರ್ ಹಿಟ್ ಸಾಂಗ್ ಲಿಸ್ಟ್ ಸೇರಿದೆ. ಈ ಸಾಂಗ್‌ಗೆ ಕುಣಿಯದವರಿಲ್ಲ. ಲಕ್ಷ ಲಕ್ಷ ಹುಕ್ ಸ್ಟೆಪ್ಸ್ ರೀಲ್ಸ್ ಕ್ರಿಯೇಟ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಜನಿಕಾಂತ್‌ಗೆ ಬಿಎಂಡಬ್ಲ್ಯೂ ಕಾರ್ ಜೊತೆ 110 ಕೋಟಿ ರೂ. ನೆಲ್ಸನ್ 50 ಲಕ್ಷ ರೂ. ಹಾಗೂ ಅನಿರುದ್ಧ್ 25 ಲಕ್ಷ ರೂ. ಚೆಕ್ ಸಿಕ್ಕಿದೆ ಎನ್ನಲಾಗ್ತಿದೆ. ಸಂಭಾವನೆ ಬಿಟ್ಟು ನಿರ್ಮಾಪಕರು ಬಂದ ಲಾಭದಲ್ಲಿ ಪ್ರೀತಿಯಿಂದ ಈ ಮೊತ್ತವನ್ನು ನೀಡುತ್ತಿದ್ದಾರೆ. ಅನಿರುದ್ಧ್ ನಟ ರಜನಿಕಾಂತ್ ಸೋದರ ಸಂಬಂಧಿಯೇ ಆಗಬೇಕು. ತಲೈವಾ ನಟನೆಯ 'ಪೇಟಾ' ಹಾಗೂ 'ದರ್ಬಾರ್' ಚಿತ್ರಗಳಿಗೂ ಅನಿರುದ್ಧ್ ಟ್ಯೂನ್ ಹಾಕಿದ್ದರು.
'ಜೈಲರ್' ಚಿತ್ರದ ಬಿಜಿಎಂಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಕೆಲವರು ಇದೆಲ್ಲಾ ಹಾಲಿವುಡ್ ಸಿನಿಮಾಗಳಿಂದ ಕದ್ದಿರೋದು ಎಂದು ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ಆದರೂ 'ಜೈಲರ್' ಆರ್ಭಟಕ್ಕೆ ಅನಿರುದ್ಧ್ ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಸೀನ್‌ನಲ್ಲಿ ಶಿವಣ್ಣನ ಎಂಟ್ರಿಗೂ ಅನಿರುದ್ಧ್ ಹಾಕಿರುವ ಟ್ಯೂನ್ ಸಖತ್ ಕಿಕ್ ಕೊಡುತ್ತಿದೆ.
ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಮೂಲಕ ಅನಿರುದ್ಧ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಈ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದೇ ಶುಕ್ರವಾರ ಸಿನಿಮಾ ಪ್ರಪಂಚದಾದ್ಯಂತ ರಿಲೀಸ್ ಆಗುತ್ತಿದೆ. ಇನ್ನುಳಿದಂತೆ ದಳಪತಿ ವಿಜಯ್ ನಟನೆಯ 'ಲಿಯೋ', ಕಮಲ್ ಹಾಸನ್ ನಟನೆಯ 'ಇಂಡಿಯನ್-2', ಜ್ಯೂ. ಎನ್‌ಟಿಆರ್ ಅಭಿನಯದ 'ದೇವರ', ಹೊಂಬಾಳೆ ಸಂಸ್ಥೆಯ ಮಲಯಾಳಂ ಚಿತ್ರ 'ಟೈಸನ್' ಹೀಗೆ ಸಾಲು ಸಾಲು ದೊಡ್ಡ ಸಿನಿಮಾಗಳು ಅನಿರುದ್ಧ್ ಕೈಯಲ್ಲಿವೆ.
ರಜನಿಕಾಂತ್ ನಟನೆಯ ಮತ್ತೆರಡು ಸಿನಿಮಾಗಳಿಗೂ ಕೂಡ ಅನಿರುದ್ಧ್ ರವಿಚಂದರ್ ಟ್ಯೂನ್ ಹಾಕುವುದು ಪಕ್ಕಾ ಆಗಿದೆ. ಒಟ್ನಲ್ಲಿ ಈಗ ಕಾಲಿವುಡ್‌ನಲ್ಲಿ ಅನಿರುದ್ದ್ ರವಿಚಂದ್ರನ್ ಕ್ರೇಜ್ ಜೋರಾಗಿದೆ.


Click it and Unblock the Notifications











