Shivarajkumar: 'ಜೈಲರ್‌' ಸಣ್ಣ ಪಾತ್ರದಿಂದ ಶಿವಣ್ಣ ಈಗ ತಮಿಳಿನಲ್ಲಿ ಫೇಮಸ್; ಡಬ್ಬಿಂಗ್ ಬ್ಯಾನ್‌ಗೆ ಹಿಡಿ ಶಾಪ ಹಾಕಿದ ಕನ್ನಡಿಗರು

ನಿನ್ನೆಯಷ್ಟೇ ( ಆಗಸ್ಟ್ 10 ) ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ಕುಮಾರ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಜೈಲರ್ ಬೆಳ್ಳಿತೆರೆಗೆ ಅಪ್ಪಳಿಸಿತು. 2021ರಲ್ಲಿ ಅಣ್ಣಾತ್ತೆ ಎಂಬ ಸಿನಿಮಾ ಮೂಲಕ ಹೀನಾಯ ಸೋಲನ್ನು ಕಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಚಿತ್ರದ ಮೂಲಕ ಯಶಸ್ಸಿನ ಹಾದಿಗೆ ಮರಳಿದೆ ಎಂದೇ ಹೇಳಬಹುದು. ಹೌದು, ಜೈಲರ್ ಚಿತ್ರದ ಮುಂಜಾನೆಯ ಪ್ರದರ್ಶನಗಳು ಮುಕ್ತಾಯಗೊಳ್ಳುತ್ತಿದ್ದಂತೆಯೇ ಚಿತ್ರ ಸೂಪರ್ ಹಿಟ್, ಚಿಂದಿ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ರಜನಿಕಾಂತ್ ಅಭಿಮಾನಿಗಳಿಗೆ ಜೈಲರ್ ಫುಲ್ ಮೀಲ್ಸ್ ಬಡಿಸಿದ್ದರೆ, ಸಾಮಾನ್ಯ ಸಿನಿ ರಸಿಕ ಚಿತ್ರ ಚೆನ್ನಾಗಿದೆ, ಒಂದೊಮ್ಮೆ ನೋಡಬಹುದು ಎಂಬ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಜೈಲರ್ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್‌ಗಳು ಹಾಗೂ ಪೋಸ್ಟ್‌ಗಳು ಹರಿದು ಬರುತ್ತಿದ್ದು, ಇದೇ ಮೊದಲ ಬಾರಿಗೆ ರಜನಿಕಾಂತ್ ನಟನೆಯ ಚಿತ್ರವೊಂದರಲ್ಲಿ ರಜನಿಗಿಂತಲೂ ಬೇರೊಬ್ಬ ಕಲಾವಿದನನ್ನು ತಮಿಳು ಸಿನಿ ರಸಿಕರು ಹೆಚ್ಚಾಗಿ ಹೊಗಳಿ ಬರೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೌದು, ಜೈಲರ್ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Jailer: Kannadigas felt sad about dubbing ban after Shivanna gets huge appreciation from Tamilians

ಚಿತ್ರದಲ್ಲಿ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ನರಸಿಂಹ ಎಂಬ ಪಾತ್ರವನ್ನು ನಿರ್ವಹಿಸಿರುವ ಶಿವಣ್ಣ ಕಾಣಿಸಿಕೊಳ್ಳುವ ಮೂರ್ನಾಲ್ಕು ದೃಶ್ಯಗಳ ಮೂಲಕವೇ ತಮಿಳು ಸಿನಿ ರಸಿಕರು ತಮ್ಮ ನಟನೆ ಕಂಡು ಹುಚ್ಚೆದ್ದು ಕೂಗುವ ಹಾಗೆ ಮಾಡಿದ್ದಾರೆ. ಹೌದು, ಶಿವಣ್ಣನ ನಟನೆ ಕಂಡ ತಮಿಳು ಸಿನಿ ರಸಿಕರು ಅಕ್ಷರಷಃ ಮನ ಸೋತಿದ್ದಾರೆ. ಕಾಣಿಸಿಕೊಳ್ಳುವುದು ಕೆಲ ದೃಶ್ಯಗಳಲ್ಲಿಯೇ ಆದರೂ ಶಿವರಾಜ್‌ಕುಮಾರ್ ನಟನೆ ಮಾತ್ರ ಚಿಂದಿ ಎಂದು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರು ಕೊಂಡಾಡುತ್ತಿದ್ದಾರೆ.

ರಜನಿಕಾಂತ್ ಸಿನಿಮಾದಲ್ಲಿ ನಟಿಸಿ ರಜನಿಗಿಂತಲೂ ಹೆಚ್ಚಿನ ಪ್ರಶಂಸೆಯನ್ನು ಮತ್ತೊಬ್ಬ ಕಲಾವಿದ ಗಿಟ್ಟಿಸಿಕೊಳ್ಳುತ್ತಿರುವುದು, ಅದರೂ ಸಹ ಕೇವಲ ಅತಿಥಿ ಪಾತ್ರದ ಮೂಲಕ ಪಡೆದುಕೊಳ್ಳುತ್ತಿರುವುದು ಇದೇ ಮೊದಲು ಎಂದೇ ಹೇಳಬಹುದು. ಇಷ್ಟರ ಮಟ್ಟಕ್ಕೆ ಶಿವರಾಜ್‌ಕುಮಾರ್ ಅಬ್ಬರಿಸುತ್ತಿದ್ದು, ತಮಿಳು ಸಿನಿ ರಸಿಕರು ಇನ್ನು ಮುಂದಿನ ಶಿವರಾಜ್‌ಕುಮಾರ್ ನಟನೆಯ ಸಿನಿಮಾಗಳನ್ನು ತಮಿಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಶಿವಣ್ಣ ನಟನೆಯ ಕನ್ನಡ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿ ಹಾಡಿ ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಹೀಗೆ ಕನ್ನಡ ನಟ ಶಿವರಾಜ್‌ಕುಮಾರ್ ತಮಿಳಿನ ಸಿನಿಮಾವೊಂದರಲ್ಲಿ ಕೇವಲ ಐದು ನಿಮಿಷಗಳ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ ತಮಿಳು ಸಿನಿ ರಸಿಕರು ಇಷ್ಟರ ಮಟ್ಟಿಗೆ ಶಿವಣ್ಣನನ್ನು ಹೊಗಳುತ್ತಿರುವುದನ್ನು ಕಂಡ ಕನ್ನಡ ಚಿತ್ರ ಪ್ರೇಮಿಗಳು ಇಷ್ಟು ವರ್ಷಗಳವರೆಗೆ ಕರ್ನಾಟಕದಲ್ಲಿ ಡಬಿಂಗ್ ನಿಷೇಧಿಸಿದ್ದಕ್ಕೆ ಕಿಡಿ ಕಾರುತ್ತಿದ್ದಾರೆ. ಡಬಿಂಗ್ ಇದ್ದಿದ್ದರೆ ಕನ್ನಡದ ಇನ್ನೂ ಅನೇಕ ನಟರು ಹಾಗೂ ನಟಿಯರು ತಮ್ಮ ಅದ್ಭುತ ನಟನೆಯಿಂದ ಗಡಿ ದಾಟಿ ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದರು, ಡಬಿಂಗ್ ಬ್ಯಾನ್ ಅದೆಲ್ಲವನ್ನೂ ನಾಶ ಪಡಿಸಿಬಿಡ್ತು ಎಂದು ಟ್ವೀಟ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.

More from Filmibeat

English summary
Jailer: Kannadigas felt sad about dubbing ban after Shivanna gets huge appreciation from Tamilians
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X