"ಅಪ್ಪು ಸರ್ ನನ್ನ ಚಿತ್ರದಲ್ಲಿ ಸಣ್ಣ ಪಾತ್ರ ಕೇಳಿದ್ರು.. ನಾನು ಶಿವಣ್ಣನ ಯಾವ್ದೇ ಸಿನ್ಮಾ ನೋಡಿರ್ಲಿಲ್ಲ.. 'ಬೀಸ್ಟ್‌' ಸೆಟ್‌ನಲ್ಲಿ

ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ತಲೈವಾ ಇಮೇಜ್‌ಗೆ ತಕ್ಕಂತೆ ಒಂದೊಳ್ಳೆ ಸಿನಿಮಾ ಮಾಡಿ ನಿರ್ದೇಶಕ ನೆಲ್ಸನ್ ಸಕ್ಸಸ್ ಕಂಡಿದ್ದಾರೆ. ಇನ್ನು ಶಿವಣ್ಣನ ಗೆಸ್ಟ್ ಅಪಿಯರೆನ್ಸ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಕ್ಲೈಮ್ಯಾಕ್ಸ್‌ನಲ್ಲಿ ಶಿವಣ್ಣನ ಮುಂದೆ ತಲೈವಾ ಕೂಡ ಡಲ್ಲಾಗಿಬಿಟ್ಟಿದ್ದಾರೆ. ಕೆಲವೇ ಕ್ಷಣಗಳು ತೆರೆಮೇಲೆ ಕಾಣಿಸಿಕೊಂಡು ಸೆಂಚುರಿ ಸ್ಟಾರ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಪಾತ್ರಗಳ ಆಯ್ಕೆ ವಿಚಾರದಲ್ಲೂ ನೆಲ್ಸನ್ ಗೆದ್ದಿದ್ದಾರೆ. ಶಿವಣ್ಣ ಹಾಗೂ ಮೋಹನ್ ಲಾಲ್ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡ್ರು ಸಿಕ್ಕಿರುವ ಎಲಿವೇಷನ್, ಅನುಭವಿ ಕಲಾವಿದರ ಮಾಗಿದ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ನರಸಿಂಹ ಆಗಿ ಕಣ್ಣಲ್ಲೇ ಕೊಲ್ಲುವ ಶಿವಣ್ಣನ ಅಭಿನಯಕ್ಕೆ ತಮಿಳು ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಕನ್ನಡ ಸಿನಿಮಾಗಳಿಗಾಗಿ ಕೆಲವರು ತಡಕಾಡುತ್ತಿದ್ದಾರೆ. ಬರೀ ಕರ್ನಾಟಕ ಮಾತ್ರವಲ್ಲ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳದಲ್ಲೂ ಶಿವಣ್ಣನ ಎಂಟ್ರಿ ಸೀನ್‌ಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿತ್ತಿದ್ದಾರೆ.

Jailer: Nelson interesting comments about Sivarajkumar and Puneeth rajkumar

'ಜೈಲರ್' ಚಿತ್ರದಲ್ಲಿ ಮಂಡ್ಯದ ಹಳೇ ಪಂಟರ್ ನರಸಿಂಹ ಪಾತ್ರಕ್ಕೆ ಶಿವಣ್ಣ ಆಯ್ಕೆ ಹೇಗಾಯ್ತು? ಎಂದು ನಿರ್ದೇಶಕ ನೆಲ್ಸನ್ ಇತ್ತೀಚೆಗೆ ಹೇಳಿದ್ದರು. 'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡುತ್ತಾ ಮೊದಲ ಬಾರಿ 'ಬೀಸ್ಟ್' ಸಿನಿಮಾ ಸೆಟ್‌ನಲ್ಲಿ ಶಿವಣ್ಣನನ್ನು ನೋಡಿದ್ದ ನೆನಪನ್ನು ಬಿಚ್ಚಿಟ್ಟಿದ್ದರು. ಪುನೀತ್ ರಾಜ್‌ಕುಮಾರ್ ಸರ್ ನನ್ನ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು ಎಂದು ಹೇಳಿದ್ದರು.

ಫಸ್ಟ್‌ ಟೈಂ ಶಿವಣ್ಣನ ನೋಡಿದ್ದು

"ಬೀಸ್ಟ್ ಸಿನಿಮಾ ಶೂಟಿಂಗ್ ವೇಳೆ ಒಮ್ಮೆ ಶಿವಣ್ಣ ಸರ್‌ನ ನೋಡಿದ್ದೆ. ಶೂಟಿಂಗ್ ನಡೀತಿತ್ತು. ಇದ್ದಕ್ಕಿದ್ದಂತೆ ಒಬ್ಬರು ಬರ್ತಾರೆ. ತಿರುಗಿ ನೋಡ್ತಿದ್ದಂತೆ ನಿಜವಾದ ಒಬ್ಬ ಗ್ಯಾಂಗ್‌ಸ್ಟರ್ ನಡೆದು ಬರುವಂತೆ ಕಂಡಿತ್ತು. ಅವರ ಖದರ್, ಪವರ್‌ ನೋಡಿ ಶಾಕ್ ಆಗಿದ್ದೆ. ಅದಕ್ಕು ಮುನ್ನ ಸರ್ ಸಿನಿಮಾಗಳನ್ನು ನೋಡಿರಲಿಲ್ಲ. ಸರ ಶಿವಣ್ಣ ಬಂದರು, ಮಾತನಾಡಿದರು. ಹೀಗೆ ಬಂದು ಹಾಗೆ ಹೋಗಿ ಬಿಟ್ಟರು"

'ಡಾಕ್ಟರ್' ನೋಡಿ ಅಪ್ಪು ಸರ್ ಫಿದಾ

"ಬಳಿಕ ನಾನು ಶಿವಣ್ಣ ಸರ್ ಒಂದಷ್ಟು ಸಿನಿಮಾಗಳನ್ನು ನೋಡಿದೆ. ಅವ್ರ ಲುಕ್‌ ನೋಡಿದ್ರೆ ಡೆಡ್ಲಿ ಆಗಿತ್ತು. ಅವತ್ತೇ ಒಂದು ಪಾತ್ರಕ್ಕಾಗಿ ಶಿವಣ್ಣನನ್ನು ಕೇಳೋಣ ಎಂದುಕೊಂಡೆ. ಅದೇ ಸಮಯದಲ್ಲಿ ನನ್ನ 'ಡಾಕ್ಟರ್' ಸಿನಿಮಾ ರಿಲೀಸ್ ಆಗಿತ್ತು. ಆಗ ಪುನೀತ್ ರಾಜ್‌ಕುಮಾರ್ ಸರ್ ಕರೆ ಮಾಡಿದ್ದರು. ಒಂದರ್ಧ ಗಂಟೆ ಮಾತನಾಡಿದರು. ನಾನು 'ಕೋಲಮಾವು ಕೋಕಿಲ', 'ಡಾಕ್ಟರ್' ಎಲ್ಲಾ ಸಿನಿಮಾ ನೋಡಿದ್ದೇನೆ. ನನ್ನ ನಿಮ್ಮ ನಿರ್ದೇಶನ, ತಂಡ ಎಲ್ಲಾ ಇಷ್ಟ ಎಂದರು"

ಅಪ್ಪು ಸರ್ ಸಣ್ಣ ಪಾತ್ರ ಕೇಳಿದ್ರು

"ನಿಮ್ಮ ಚಿತ್ರದಲ್ಲಿ ಒಂದೈದು ನಿಮಿಷ ಪಾತ್ರ ಇದ್ದರೂ ಸರಿ ಹೇಳಿ ನಾನು ಮಾಡುತ್ತೇನೆ ಎಂದು ಪುನೀತ್ ಸರ್ ಹೇಳಿದ್ದರು. ಅದು ಯಾವುದೇ ಪಾತ್ರ ಆಗಿದ್ದರೂ ಸರಿ ಎಂದಿದ್ದರು. ಅದಾಗಿ 10 ದಿನಕ್ಕೆ ಅವರು ಅಗಲಿದರು. ಶಿವಣ್ಣನನ್ನು ಯಾವಾಗ ನೋಡಿದರೂ ಪುನೀತ್ ಸರ್ ನೆನಪಾಗುತ್ತಾರೆ. ಪುನೀತ್ ಸರ್ ಅರ್ಧ ಗಂಟೆ ಮಾತನಾಡಿದ್ದನ್ನು ಊಹಿಸಿಕೊಳ್ಳೋಕು ಸಾಧ್ಯವಿಲ್ಲ. ಶಿವಣ್ಣ 'ಜೈಲರ್' ಚಿತ್ರದಲ್ಲಿ ನಟಿಸ್ತಾರಾ? ಇಲ್ವಾ ಅಂದುಕೊಂಡಿದ್ದೆ. ಆದರೆ ರಜನಿ ಸರ್ ಹೆಸರೇಳಿ ಎಲ್ಲರನ್ನು ಒಪ್ಪಿಸುತ್ತಿದ್ದೆ" ಎಂದು ನೆಲ್ಸನ್ ಹೇಳಿದ್ದರು.

ನಿರ್ದೇಶಕನಾಗಿ ನೆಲ್ಸನ್ ಸಕ್ಸಸ್

ಸಾಮಾನ್ಯವಾಗಿ ಸೂಪರ್ ಸ್ಟಾರ್‌ಗಳ ಸಿನಿಮಾ ಅಂದ್ರೆ, ಒಂದಷ್ಟು ಮಿತಿಗಳು ಇರುತ್ತವೆ. ಆದರೆ ನೆಲ್ಸನ್‌ ಮಾತ್ರ ತಮಗೆ ಹೇಗೆ ಬೇಕೋ ಎಲ್ಲೂ ಕಾಂಪ್ರಮೈಸ್ ಆಗದೇ 'ಜೈಲರ್' ಸಿನಿಮಾ ಮಾಡಿ ಗೆದ್ದಿದ್ದಾರೆ. ನಿಜ ಹೇಳಬೇಕು ಅಂದ್ರೆ ರಜನಿಕಾಂತ್ ತಮ್ಮನ್ನು ಸಂಪೂರ್ಣವಾಗಿ ನಿರ್ದೇಶಕರಿಗೆ ಅರ್ಪಿಸಿಕೊಂಡು ಸಿನಿಮಾದಲ್ಲಿ ಕೆಲಸ ಮಾಡಿದ್ದಂತೆ ಕಾಣುತ್ತದೆ. ಅಭಿಮಾನಿಗಳು ಕೇಳುವ ಮಾಸ್ ಎಲಿಮೆಂಟ್ಸ್ ಜೊತೆಗೆ ಒಂದೊಳ್ಳೆ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕೊಟ್ಟು ನೆಲ್ಸನ್ ಗಮನ ಸೆಳೆದಿದ್ದಾರೆ.

More from Filmibeat

English summary
Jailer Director Nelson on Sivarajkumar and Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X