Jailer: ರಜಿನಿಗಿಂತಲೂ ಶಿವಣ್ಣನ ಆಕ್ಟಿಂಗ್ ಚಿಂದಿ, ಕನ್ನಡ ನಿರ್ದೇಶಕರೇ ಕಲಿಯಿರಿ ಎಂದ ತಮಿಳು ಪ್ರೇಕ್ಷಕ!

ಇಂದು ( ಆಗಸ್ಟ್ 10 ) ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ಜೈಲರ್ ಬಿಡುಗಡೆಯಾಗಿದೆ. ಕಳೆದ ಅಣ್ಣಾತ್ತೆ ಸಿನಿಮಾದ ಮೂಲಕ ಹೀನಾಯವಾಗಿ ಸೋಲನ್ನು ಕಂಡಿದ್ದ ರಜನಿಕಾಂತ್ ಬೀಸ್ಟ್ ಚಿತ್ರದ ಮೂಲಕ ನೆಲ ಕಚ್ಚಿದ್ದ ನಿರ್ದೇಶಕ ನೆಲ್ಸನ್ ಜತೆ ಕೈ ಜೋಡಿಸಿದ್ದು, ಜೈಲರ್ ಅವತಾರ ತಾಳಿ ಅಭಿಮಾನಿಗಳು ಹಾಗೂ ಸಿನಿ ರಸಿಕರ ಮುಂದೆ ಬಂದಿದ್ದಾರೆ.

ಇನ್ನು ಇಂದು ಸೂರ್ಯ ಉದಯಿಸುವ ಮುನ್ನವೇ ಜೈಲರ್ ಬೆಳ್ಳಿತೆರೆಗೆ ಅಪ್ಪಳಿಸಿದ್ದು ರಜನಿಕಾಂತ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮುಂಗಡವಾಗಿ ಟಿಕೆಟ್ ಖರೀದಿಸಿ ಕಾದು ಚಿತ್ರ ವೀಕ್ಷಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ಸಿಂಪಲ್ ಕಾಮನ್ ಮ್ಯಾನ್ ಮುತ್ತುವೇಲ್ ಆಗಿ ಕಾಣಿಸಿಕೊಳ್ಳುವ ರಜನಿಕಾಂತ್ ದ್ವಿತೀಯಾರ್ಧದಲ್ಲಿ ಟೈಗರ್ ಮುತ್ತುವೇಲ್ ಪಾಂಡಿಯನ್ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.

non-kannada-movie-lovers-praised-shivarajkumar

ದೇವರ ಮನೆಯಲ್ಲಿ ಪೂಜೆ ಮಾಡುತ್ತಾ ಎಂಟ್ರಿ ನೀಡುವ ಮುತ್ತುವೇಲ್ ಬಹಳ ಸಿಂಪಲ್ ವ್ಯಕ್ತಿ. ಮಡದಿ, ಮಗ, ಸೊಸೆ ಹಾಗೂ ಮೊಮ್ಮಗನ ಜತೆ ಸರಳ ಸುಖ ಸಂಸಾರ ನಡೆಸುವ ಕಾಮನ್ ಮ್ಯಾನ್. ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿಯಾಗಿದ್ದು, ಪ್ರಕರಣವೊಂದನ್ನು ಭೇದಿಸಲು ಹೋಗಿ ಕಣ್ಮರೆಯಾಗ್ತಾನೆ. ಹೀಗೆ ಕಣ್ಮರೆಯಾಗುವ ಮಗನನ್ನು ಹುಡುಕಲು ನಾಯಕ ಮುತ್ತುವೇಲ್ ಮುಂದಾಗಲಿದ್ದು, ಯಾವ ರೀತಿ ಸೇಡು ತೀರಿಸಿಕೊಳ್ಳಲಿದ್ದಾನೆ ಎಂಬುವುದೇ ಚಿತ್ರದ ಕಥೆಯಾಗಿದೆ.

ಇನ್ನು ನಾಯಕ‌ ತನ್ನ ಮಗನನ್ನು ಹುಡುಕುವ ಯತ್ನದಲ್ಲಿ ಕರ್ನಾಟಕ ಮೂಲದ ಡಾನ್ ನರಸಿಂಹನ ಸಹಾಯ ಪಡೆದುಕೊಳ್ತಾನೆ. ಈ ಪಾತ್ರವನ್ನು ಶಿವರಾಜ್ ಕುಮಾರ್ ನಿರ್ವಹಿಸಿದ್ದಾರೆ. ಕನ್ನಡದಲ್ಲಿಯೇ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಡುವ ಶಿವರಾಜ್‌ಕುಮಾರ್ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ಆಗಿದ್ದು ನಾಯಕನಿಗೆ ತನ್ನ ಮಗನನ್ನು ಹುಡುಕಲು ಸಹಾಯ ಮಾಡಲಿದ್ದಾರೆ.

ಇನ್ನು ಶಿವರಾಜ್ ಕುಮಾರ್ ನಿರ್ವಹಿಸಿರುವ ಈ ಪಾತ್ರ ವಿಶೇಷ ಅತಿಥಿ ಪಾತ್ರವಾಗಿದ್ದರೂ ಸಹ ಆ ಪಾತ್ರಕ್ಕೆ ತನ್ನದೇ ಆದ ಗತ್ತು ಗಮ್ಮತ್ತಿದೆ‌. ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಎಷ್ಟು ಗತ್ತು ಗಮ್ಮತ್ತಿದೆಯೋ ಅಷ್ಟೇ ಮಟ್ಟದ ಬಿಲ್ಡಪ್ ಶಿವಣ್ಣನ‌ ಪಾತ್ರಕ್ಕೂ ಸಹ ಇದೆ. ಮಾಸ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಜತೆಗೆ ರಗಡ್ ಲುಕ್ ನೀಡುತ್ತಾ ಎಂಟ್ರಿ ಕೊಡುವ ಶಿವಣ್ಣನಿಗೆ ಕನ್ನಡ ಸಿನಿ ರಸಿಕರು ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರೂ ಸಹ ಫಿದಾ ಆಗಿದ್ದಾರೆ‌.

ಚಿತ್ರ ವೀಕ್ಷಿಸಿ ಹೊರ ಬಂದ ಪರಭಾಷಾ ಸಿನಿ ರಸಿಕರು ಶಿವಣ್ಣನ‌ ಮಾಸ್ ನಟನೆಯನ್ನು ಸಾಮಾಜಿಕ‌ ಜಾಲತಾಣದಲ್ಲಿ ಹಾಡಿ ಹೊಗಳಿದ್ದಾರೆ. ಚಿತ್ರ ವೀಕ್ಷಿಸಿ ಶಿವಣ್ಣನ ನಟನೆಗೆ ಫಿದಾ ಆಗಿರುವ ರಜನಿ‌ ಹಾಗೂ ಪವನ್ ಕಲ್ಯಾಣ್ ಅಭಿಮಾನಿ ಶಿವಣ್ಣನ ನಟನೆ ಕುರಿತು ಸಾಮಾಜಿಕ‌ ಜಾಲತಾಣದಲ್ಲಿ ಬರೆದುಕೊಂಡಿದ್ದು "ರಜನಿಕಾಂತ್ ಅವರನ್ನು ತೆರೆ ಮೇಲೆ ಯಾರಾದರೊಬ್ಬ ನಟ ಹಿಂದಿಕ್ಕಲಿದ್ದಾರೆ ಎಂದು ನಾನು ನನ್ನ ಕನಸಿನಲ್ಲಿಯೂ ಸಹ ಊಹಿಸಿರಲಿಲ್ಲ. ಆದರೆ ಕ್ಲೈ ಮ್ಯಾಕ್ಸ್‌ಗೂ ಮುಂಚೆ ಬರುವ ದೃಶ್ಯದಲ್ಲಿ ಶಿವಣ್ಣ ರಜನಿಕಾಂತ್ ಅವರನ್ನು ಹಿಂದಿಕ್ಕಿದ್ದಾರೆ.‌ ನಾನು ಶಿವಣ್ಣನ ಅಭಿಮಾನಿಯಾಗಿಬಿಟ್ಟೆ ಎಂದೆನಿಸುತ್ತೆ" ಎಂದು ಬರೆದುಕೊಂಡಿದ್ದಾರೆ‌..

ಮತ್ತೋರ್ವ ಸಿನಿ ರಸಿಕ ಜೈಲರ್ ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಕ ನೆಲ್ಸನ್ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವುದರ ಬಗ್ಗೆ ಹೊಗಳಿ ಬರೆದುಕೊಂಡಿದ್ದಾರೆ‌. ಕನ್ನಡ ನಿರ್ದೇಶಕರಿಗಿಂತ ಚೆನ್ನಾಗಿ ಶಿವಣ್ಣ ಅವರನ್ನು ನೆಲ್ಸನ್ ತೆರೆ ಮೇಲೆ ತೋರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ‌. ಈ ರೀತಿಯ ಅಭಿಪ್ರಾಯವನ್ನು ಹಲವಾರು ಸಿನಿ ರಸಿಕರು ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಸಿನಿ ರಸಿಕ ಶಿವಣ್ಣನ ನಟನೆಯನ್ನು ಹೊಗಳಿದ್ದು ಇಂಥ ಪ್ರತಿಭೆ ಇಷ್ಟು ದಿನಗಳವರೆಗೆ ಕೇವಲ‌ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿತ್ತು ಎಂಬುದು ಬೇಸರದ ಸಂಗತಿ ಎಂದೂ ಸಹ ಬರೆದುಕೊಂಡಿದ್ದಾರೆ‌.

More from Filmibeat

English summary
Jailer: Non Kannada movie lovers praised Shivarajkumar's acting in Jailer movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X