Rajinikanth: ಸ್ವಾಭಿಮಾನವನ್ನು ಯುಪಿ ಸಿಎಂ ಯೋಗಿ ಕಾಲಡಿ ಇಟ್ರಾ ತಲೈವಾ.. ಸಖತ್ ಟ್ರೋಲ್ ಆಗುತ್ತಿರುವ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ನಟ ರಜನಿಕಾಂತ್ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ಮಾಡಿ ಒಟ್ಟಿಗೆ 'ಜೈಲರ್' ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ತಲೈವಾ ಹಿಮಾಲಯ ಪ್ರವಾಸ ಕೈಗೊಂಡಿದ್ದರು.

ಹಿಮಾಲಯದಲ್ಲಿ ತಮ್ಮ ಆಧ್ಯಾತ್ಮ ಗುರುಗಳನ್ನು ಭೇಟಿ ಮಾಡಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿತ್ತು. ಹಿಮಾಲಯದಿಂದ ಹಿಂತಿರುಗುವಾಗ ಸಾಕಷ್ಟು ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ. ಇನ್ನು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ತಲೈವಾ ಭೇಟಿ ಮಾಡುವ ವಿಚಾರ ಕಳೆದರಡು ದಿನಗಳಿಂದ ಸದ್ದು ಮಾಡಿತ್ತು. ಆದಿತ್ಯಾನಾಥ್ ಭೇಟಿ ವೇಳೆ ರಜನಿಕಾಂತ ಅವರ ಕಾಲಿಗೆ ಎರಗಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Jailer: Rajinikanth gets trolled for touches UP CM yogi aadityanaths feet

ರಜನಿ- ಯೋಗಿ ಆದಿತ್ಯಾನಾಥ್ ಭೇಟಿ ಬಗ್ಗೆ ಮೊದಲೇ ಸುದ್ದಿಯಾಗಿತ್ತು. ಆದರೆ ಭೇಟಿ ವೇಳೆ ತಲೈವಾ, ಆದಿತ್ಯಾನಾಥ್ ಕಾಲಿಗೆ ಎರಗಿ ಆಶಿರ್ವಾದ ಪಡೆಯುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಸೂಪರ್ ಸ್ಟಾರ್ ಯುಪಿ ಸಿಎಂ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿರುವುದು ಕೆಲವರ ಬೇಸರಕ್ಕೆ ಕಾರಣವಾಗಿದೆ. ತಲೈವಾ ತಮಗಿಂತ 21 ವರ್ಷ ಚಿಕ್ಕ ವಯಸ್ಸಿನ ವ್ಯಕ್ತಿಯ ಕಾಲಿಗೆ ಎರಗಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್‌ನ ಟ್ರೋಲ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. "ರಜನಿಕಾಂತ್ ನಿಜವಾಗಿಯೂ ಯೋಗಿ ಆದಿತ್ಯನಾಥ್ ಅವರ ಪಾದಗಳನ್ನು ಮುಟ್ಟಿದ್ದರೇ?! ಅವರು ತಮ್ಮ ಸ್ವಾಭಿಮಾನವನ್ನು ತಮಿಳುನಾಡಿನಲ್ಲಿಯೇ ಬಿಟ್ಟಿದ್ದಾರೆಯೇ?!" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, "ಸ್ಟಾರ್ ಸಣ್ಣ ತುಂಡುಗಳಾಗಿ ಬಿದ್ದಿದೆ" ಎಂದು ಬರೆದುಕೊಂಡಿದ್ದಾರೆ. "ಇದು ವಿಚಾರ ನಿಜಕ್ಕೂ ಬೇಸರ ತಂದಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇಂದು ರಜನಿ ಅಭಿಮಾನಿಗಳು ಕಲಾವಿದರಿಂದ ಕಲೆಯನ್ನು ಹೇಗೆ ಬೇರ್ಪಡಿಸಬೇಕೆಂದು ಕಲಿಯುತ್ತಾರೆ. ಆಲ್ ದಿ ಬೆಸ್ಟ್" ಎನ್ನುವ ಇನ್ನೊಂದು ಕಾಮೆಂಟ್ ವೈರಲ್ ಆಗಿದೆ.

ರಜನಿಕಾಂತ್ ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಪಾದಕ್ಕೆ ಎರಗಿದ ವಿಚಾರವನ್ನು ಕೆಲವರು ಬೆಂಬಲಿಸಿದ್ದಾರೆ. "ಯೋಗಿ ಒಬ್ಬ ಸನ್ಯಾಸಿ, ಹಾಗಾಗಿ ರಜನಿ ಹೀಗೆ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಆಧ್ಯಾತ್ಮಿಕ ಕೋನದಲ್ಲಿ ರಜನಿ ಹಾಗೆ ಮಾಡಿದ್ದಾರೆ, ಇದನ್ನು ಇನ್ನೊಂದು ಕೋನದಲ್ಲಿ ನೋಡಬೇಕಾದ ಅವಶ್ಯಕತೆ ಇಲ್ಲ" ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಚಾರಈಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.

Jailer: Rajinikanth gets trolled for touches UP CM yogi aadityanaths feet

'ಜೈಲರ್' ವಿಚಾರಕ್ಕೆ ಬಂದರೆ ಸಿನಿಮಾ 10 ದಿನಕ್ಕೆ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ನೆಲ್ಸನ್ ಒಂದೊಳ್ಳೆ ಸಿನಿಮಾ ಕೊಟ್ಟು ಗೆದ್ದಿದ್ದಾರೆ. ಶಿವರಾಜ್‌ಕುಮಾರ್ ಗೆಸ್ಟ್ ಅಪಿಯರೆನ್ಸ್, ಅನಿರುದ್ಧ್ ಮ್ಯೂಸಿಕ್ ಚಿತ್ರಕ್ಕೆ ಪ್ಲಸ್ ಆಗಿದೆ. ಬಹಳ ದಿನಗಳಿಂದ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದ ತಲೈವಾಗೆ 'ಜೈಲರ್' ಸಿನಿಮಾ ಒಳ್ಳೆ ಬ್ರೇಕ್ ಕೊಟ್ಟಿದೆ. ಕರ್ನಾಟಕದಲ್ಲೇ ಸಿನಿಮಾ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.

ತಮಿಳು ಬಾಕ್ಸಾಫೀಸ್‌ನಲ್ಲಿ ಈವರೆಗೆ '2.O' ಹಾಗೂ 'ಪೊನ್ನಿಯಿನ್ ಸೆಲ್ವನ್-1' ಸಿನಿಮಾಗಳು ಮಾತ್ರ 500 ಕೋಟಿ ರೂ. ಕ್ಲಬ್ ಸೇರಿದ್ದವು. ಆ ಸಾಲಿಗೆ ಇದೀಗ 'ಜೈಲರ್' ಎಂಟ್ರಿ ಕೊಟ್ಟಿದೆ. 2ನೇ ಭಾನುವಾರವೂ ಭರ್ಜರಿ ಟಿಕೆಟ್ ಬುಕ್ಕಿಂಗ್ ಆಗಿದೆ. 2ನೇ ವಾರವೂ ಸಿನಿಮಾ ಸಾಕಷ್ಟು ಕಡೆಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸುಳಿವು ಸಿಗುತ್ತಿದೆ. ಸೆಪ್ಟೆಂಬರ್ 7ಕ್ಕೆ ಸಿನಿಮಾ ಓಟಿಟಿಗೆ ಬರುತ್ತದೆ ಎನ್ನಲಾಗ್ತಿದೆ.

More from Filmibeat

English summary
Netizens Troll Rajinikanth for touching UP CM Yogi Adityanath's feet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X