Jailer: ಜೈಲರ್‌ಗೂ ತಪ್ಪದ ನಕಲಿ ಹಾವಳಿ, ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆ!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಗುರುವಾರ (ಆಗಸ್ಟ್ 10) ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಕೆಲವು ಕಿಡಿಗೇಡಿಗಳು ಪೂರ್ತಿ ಸಿನಿಮಾವನ್ನು ಆನ್‌ಲೈನ್‌ಗೆ ಸೋರಿಕೆ ಮಾಡಿರುವ ಸುದ್ದಿಗಳು ವರದಿಯಾಗುತ್ತಿದೆ. ಚಿತ್ರ ಥಿಯೇಟರ್‌ಗೆ ಬಿಡುಗಡೆಯಾದ ಕೆಲವೇ ಗಂಟೆಗಳ ಒಳಗೆ ಇಂತಹ ಸುದ್ದಿ ಬಂದಿದ್ದು, ಚಿತ್ರ ತಂಡಕ್ಕೆ ಆಘಾತ ತಂದಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಚಿತ್ರವು ಉತ್ತಮ ಓಪನಿಂಗ್ ಪಡೆದಿದ್ದು, ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಆದರೆ, ಇಷ್ಟು ಬೇಗ ಇಂತಹ ಕೆಲಸ ಮಾಡಿರುವವರ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಚಿತ್ರ ನೋಡಿದವರು, ರಜನಿಕಾಂತ್ ಅಬ್ಬರವನ್ನು ಈ ನಕಲಿ ಸೋರಿಕೆಗಳಿಂದ ತಡೆಯಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

Jailer: Rajinikanths Jailer film full movie leaked online

ಜೈಲರ್ ಬಿಡುಗಡೆಯ ದಿನವೇ ಆನ್‌ಲೈನ್‌ನಲ್ಲಿ ಸೋರಿಕೆ

ಬಿಡುಗಡೆ ದಿನವೇ ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಜೈಲರ್‌ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ಎಲ್ಲಾ ಲಕ್ಷಣಗಳಿವೆ. ಆದರೂ ಈ ಆನ್‌ಲೈನ್ ಸೋರಿಕೆಯಾಗಿರುವುದು ಚಿತ್ರದ ಕಲೆಕ್ಷನ್ ಮೇಲೆ ಕೊಂಚ ಮಟ್ಟಿಗಾದರೂ ಪರಿಣಾಮ ಬೀರಲಿದೆ. ಜೈಲರ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರದ ನಿರ್ಮಾಪಕರಿಗೆ ಮಾತ್ರವಲ್ಲದೆ ಇಡೀ ತಮಿಳು ಚಿತ್ರರಂಗಕ್ಕೆ ಖಂಡಿತ ಕೆಟ್ಟ ಸುದ್ದಿಯೇ.

ತಮಿಳು ಚಿತ್ರೋದ್ಯಮ ಈ ವರ್ಷ ಮತ್ತೊಂದು ದೊಡ್ಡ ಹಿಟ್ ನೀಡಲು ಯಶಸ್ವಿಯಾಗಿದೆ. ಈ ಯಶಸ್ಸಿಗೆ ಆನ್‌ಲೈನ್ ಸೋರಿಕೆ ಅಡ್ಡಗಾಲು ಹಾಕಬಹುದು. ರಜನಿಕಾಂತ್ ಅಭಿನಯದ ಚಿತ್ರವು ಈಗಾಗಲೇ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳು ಕಳೆದಿದ್ದರೂ ಸಹ ಚಿತ್ರ ಸೋರಿಕೆಯಾಗಿದೆ.

Jailer: Rajinikanths Jailer film full movie leaked online

ಚಿತ್ರ ನಿರ್ಮಾಪಕರು ಪೈರಸಿ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕೋವಿಡ್ ನಂತರದ ಜಗತ್ತಿನಲ್ಲಿ, ಚಲನಚಿತ್ರ ನಿರ್ಮಾಪಕರಿಗೆ ಜನರನ್ನು ಚಿತ್ರಮಂದಿರಗಳಿಗೆ ಬರುವಂತೆ ಮಾಡುವಿದೇ ಕಷ್ಟದ ಕೆಲಸವಾಗಿದೆ. ಇಂತಹ ಸಮಯದಲ್ಲಿ ರಜನಿಕಾಂತ್ ಅವರ ಸಿನಿಮಾಗಳು ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಮತ್ತು ಸಿನಿ ಪ್ರಿಯರನ್ನು ಭಾರಿ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಎಳೆದು ತರಲಿದೆ.

ಅದರಲ್ಲೂ ಈಗ ಜೈಲರ್ ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಬರುತ್ತಿರುವುದರಿಂದ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬರುವುದು ಇನ್ನು ಸುಲಭವಾಗಿತ್ತು. ಆದರೆ ಆನ್‌ಲೈನ್‌ನಲ್ಲಿ ಚಿತ್ರದ ಸೋರಿಕೆಯಾಗಿದ್ದು, ಜನರು ಚಿತ್ರಮಂದಿರಗಳಿಗೆ ಬರುವುದಕ್ಕೆ ಅಡ್ಡಗಾಲು ಹಾಕುತ್ತದೆ. ಇದು ಕೇವಕ ನಿರ್ಮಾಪಕರ ಮೇಲೆ ಮಾತ್ರವಲ್ಲದೆ ಚಿತ್ರದ ಯಶಸ್ಸಿನಿಂದ ಪ್ರಯೋಜನ ಪಡೆಯಲಿರುವ ಎಲ್ಲರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಜೈಲರ್ ಆನ್‌ಲೈನ್ ಸೋರಿಕೆಯು ಚಿತ್ರಮಂದಿರಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಅನೇಕ ಅಭಿಮಾನಿಗಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳ ಮೇಲೆ ಪೈರಸಿ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ. ವಿಮರ್ಶೆಗಳ ಪ್ರಕಾರ, ಆನ್‌ಲೈನ್ ಸೋರಿಕೆಗಳು ಜೈಲರ್‌ನ ಥಿಯೇಟರ್ ಪ್ರದರ್ಶನದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದಿದೆ.

ರಜನಿಕಾಂತ್ ಅವರ ಜೈಲರ್ ಚಿತ್ರವನ್ನು ನೆಲ್ಸನ್ ನಿರ್ದೇಶಿಸಿದ್ದಾರೆ ಮತ್ತು ಜಾಕಿ ಶ್ರಾಫ್, ಮೋಹನ್ ಲಾಲ್ ಮತ್ತು ಶಿವರಾಜ್‌ ಕುಮಾರ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. 'ಜೈಲರ್' ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Jailer release: Just hours after the Rajinikanth film Jailer theatrical release has been leaked online. available to download on multiple websites . know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X