ರಜನಿಕಾಂತ್ 'ಜೈಲರ್' ಎರಡನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಜನಿಕಾಂತ್ ನಟನೆಯ ಜೈಲರ್ ಸಹ ಒಂದು. ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಜೈಲರ್ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಸಹ ಮುಕ್ತಾಯಗೊಂಡಿವೆ ಹಾಗೂ ಚಿತ್ರದ ಬಿಡುಗಡೆ ದಿನಾಂಕವೂ ಸಹ ಹತ್ತಿರ ಬರುತ್ತಿದೆ. ಹೀಗಾಗಿ ಜೈಲರ್ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರಚಾರ ಗಿಟ್ಟಿಸುವ ಕೆಲಸಕ್ಕೆ ಕೈಹಾಕಿದೆ.

Jailer

ಮೊದಲಿಗೆ ಜುಲೈ 6ರಂದು ಮೊದಲ ಹಾಡನ್ನು ಬಿಡುಗಡೆ ಮಾಡಿದ್ದ ಜೈಲರ್ ಚಿತ್ರತಂಡ ಜುಲೈ 17ರ ಸೋಮವಾರದಂದು ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಹೌದು, ಸೋಮವಾರ 'ಹುಕುಮ್' ಎಂಬ ಹಾಡನ್ನು ಬಿಡುಗಡೆ ಮಾಡಲು ಜೈಲರ್ ಚಿತ್ರತಂಡ ತೀರ್ಮಾನಿಸಿದೆ.

ಕಾವಾಲ ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಜೈಲರ್ ಇದೀಗ ಹುಕುಮ್ ಎಂಬ ಹಾಡಿನ ಮೂಲಕ ಮತ್ತೊಮ್ಮೆ ಸದ್ದು ಮಾಡಲು ತಯಾರಾಗಿದೆ. ಕಾವಾಲ ಹಾಡು ಹಾಗೂ ಅದರಲ್ಲಿನ ತಮನ್ನಾ ಡಾನ್ಸ್‌ಗೆ ಫಿದಾ ಆದ ಸಿನಿ ರಸಿಕರು ಹಾಡನ್ನು ದೊಡ್ಡ ಹಿಟ್ ಆಗುವಂತೆ ಮಾಡಿದ್ದು, ಈಗ ಎರಡನೇ ಹಾಡು ಯಾವ ರೀತಿ ಇರಲಿದೆ ಎಂದು ಕಾತರರಾಗಿ ಎದುರು ನೋಡುತ್ತಿದ್ದಾರೆ.

ಇನ್ನು ಹುಕುಮ್ ಚಿತ್ರದ ಪ್ರಿವ್ಯೂವನ್ನು ಇಂದು ( ಜುಲೈ 15 ) ಜೈಲರ್ ಚಿತ್ರತಂಡ ಬಿಡುಗಡೆಗೊಳಿಸಿದೆ. ಈ ಪ್ರೊಮೊದಲ್ಲಿ ಹುಕುಮ್ ಹಾಡಿಗೂ ಮೊದಲೇ ಬರುವ ಕೆಲ ಡೈಲಾಗ್‌ಗಳನ್ನು ಬಳಸಲಾಗಿದೆ. "ಏಯ್ ಇಲ್ಲಿ ನಾನೇ ಕಿಂಗು. ನಾನು ಮಾಡಿದ್ದೇ ರೂಲ್ಸು. ಆ ರೂಲ್ಸ್‌ನ ನನಗೆ ಇಷ್ಟ ಬಂದಾಗ ಆಗಾಗ ಬದಲಾಯಿಸುತ್ತಲೇ ಇರುತ್ತೇನೆ. ಗಪ್‌ಚುಪ್ ಎಂದು ಅದನ್ನು ಫಾಲೋ ಮಾಡುತ್ತಲೇ ಇರಬೇಕು. ಅದನ್ನು ಬಿಟ್ಟು ಕಿತಾಪತಿ ಮಾಡಿದ್ರೆ ನಿನ್ನ ಖಂಡ ಕತ್ತರಿಸಿ ಹೊಸಕಿಹಾಕಿಬಿಡುವೆ. ಹುಕುಮ್.. ಟೈಗರ್ ಕಾ ಹುಕುಮ್.." ಎಂದು ರಜನಿಕಾಂತ್ ಹೇಳುವ ಡೈಲಾಗ್ ಪ್ರೋಮೊ ನೋಡುಗರ ಗಮನ ಸೆಳೆದಿದೆ.

More from Filmibeat

English summary
Jailer second single Hukum releasing on 17th July. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X