Jailer Showcase: ರಜನಿಕಾಂತ್, ನೆಲ್ಸನ್ ಕಾಂಬಿನೇಶನ್‌ನ ಜೈಲರ್ ಟ್ರೈಲರ್ ಚಿಂದಿ; ಇಲ್ಲ ಶಿವಣ್ಣನ ದರ್ಶನ!

ಇಂದು ( ಆಗಸ್ಟ್ 2 ) ಸಂಜೆ 6 ಗಂಟೆಗೆ ಸನ್ ನೆಟ್‌ವರ್ಕ್ ಯುಟ್ಯೂಬ್ ಚಾನೆಲ್‌ನಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಜೈಲರ್‌ನ ಟ್ರೈಲರ್ ಬಿಡುಗಡೆಗೊಂಡಿದೆ. 2.15 ನಿಮಿಷದ ಈ ಟ್ರೈಲರ್ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಮಾಸ್ ಅಂಶಗಳನ್ನು ಹೊಂದಿದ್ದು, ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರು ಈ ಚಿತ್ರ ಗೆಲ್ಲುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೈಲರ್ ಚಿತ್ರ ಇದೇ 10ರಂದು ಬಿಡುಗಡೆಯಾಗಲಿದ್ದು, ಈ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

Jailer Showcase: Rajinikanths Jailer mass trailer boosting the hype of the film

ಚಿತ್ರದ ಟ್ರೈಲರ್‌ನಲ್ಲಿ ನಿರ್ದೇಶಕ ನೆಲ್ಸನ್ ಕಥೆಯನ್ನು ಸ್ವಲ್ಪ ಬಿಟ್ಟುಕೊಟ್ಟಂತಿದೆ. ಹೌದು, ಇಲ್ಲಿಯವರೆಗೂ ಎಲ್ಲಿಯೂ ಸಹ ಜೈಲರ್ ಚಿತ್ರದ ಕಥೆ ಏನೆಂಬುದರ ಬಗ್ಗೆ ಮಾಹಿತಿ ನೀಡದಿದ್ದ ಚಿತ್ರತಂಡ ಟ್ರೈಲರ್‌ನಲ್ಲಿ ಚಿತ್ರ ಮಾಸ್ ಮಾತ್ರವಲ್ಲ, ಕುಟುಂಬ ಸಮೇತರಾಗಿ ಕುಳಿತು ನೋಡಬಲ್ಲ ಚಿತ್ರ ಸಹ ಹೌದು ಎಂಬುದನ್ನು ಬಿಚ್ಚಿಟ್ಟಿದೆ. ಇನ್ನು ಚಿತ್ರದಲ್ಲಿ ರಜಿನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದು, ಟ್ರೈಲರ್‌ನ ಮೊದಲಿಗೆ ನಾಯಕ ಓರ್ವ ಸಾಮಾನ್ಯ ಮುಗ್ದ ಎಂಬಂತೆ ತೋರಿಸಿ ಬಳಿಕ ಆತ ಹುಲಿಯಂತೆ ಬೇಟೆಯಾಡುವ ಬೇಟೆಗಾರ ಎಂಬುದನ್ನೂ ಸಹ ಬಿಚ್ಚಿಡಲಾಗಿದೆ.

ಹೌದು, ವೈದ್ಯನೋರ್ವ ನಾಯಕನಿಗಿರುವ ವಿಚಿತ್ರ ರೋಗವೊಂದರ ಬಗ್ಗೆ ತಿಳಿಸುತ್ತಾ ಇಂತಹ ರೋಗ ಇರುವವರು ನೋಡಲು ಪಾಪದ ಬೆಕ್ಕಿನ ಹಾಗೆ ಕಾಣ್ತಾರೆ, ಆದರೆ ದಿಢೀರನೆ ಹುಲಿಯಾಗಿಬಿಡ್ತಾರೆ ಎಂದು ಬಿಲ್ಡಪ್ ಕೊಡುವ ಮೂಲಕ ರಜಿನಿಕಾಂತ್ ಅವರ ಪಾತ್ರದ ಪರಿಚಯ ಮಾಡಿಸಿದ್ದಾರೆ. ಮನೆಯಲ್ಲಿ ಮುಗ್ದನಂತೆ ಮಗ ಹಾಗೂ ಮೊಮ್ಮಗನ ಶೂಗಳನ್ನು ಪಾಲಿಶ್ ಮಾಡುವ ನಾಯಕ ಬಳಿಕ ಅದೇ ಮನೆಯ ಊಟದ ಟೇಬಲ್ ಮೇಲೆಯೇ ವೈರಿಗಳ ರಕ್ತಪಾತ ಮಾಡುವ ದೃಶ್ಯಗಳನ್ನು ನಿರ್ದೇಶಕ ನೆಲ್ಸನ್ ಹಾಸ್ಯಮಯವಾಗಿ ತೋರಿಸಿದ್ದು, ಈ ಬಾರಿ ಎಂಟರ್‌ಟೈನ್‌ಮೆಂಟ್ ಪಕ್ಕಾ ಎಂಬ ಮಾಹಿತಿ ನೀಡಿದ್ದಾರೆ.

ಹೀಗಿರುವಾಗಲೇ ಪ್ರವೇಶಿಸುವ ಖಳ ನಾಯಕ ವಿನಾಯಗನ್ ಜೀವನದಲ್ಲಿ ಇದೇ ಮೊದಲ ಬಾರಿಗೆ ನನ್ನನ್ನು ವ್ಯಕ್ತಿಯೋರ್ವ ಬ್ಲಾಕ್‌ಮೇಕ್ ಮಾಡುತ್ತಿದ್ದಾನೆ, ಆತನನ್ನು ಕೊಲ್ಲಬೇಕು, ಹಿಂಸೆ ನೀಡಿ ಕೊಲ್ಲಬೇಕು ಎಂದು ಪಣತೊಡುತ್ತಾನೆ. ಹೀಗೆ ನಾಯಕನನ್ನು ಖಳ ನಾಯಕರ ಗುಂಪು ಟಾರ್ಗೆಟ್ ಮಾಡಲಿದ್ದು, ಇದೆಲ್ಲದ್ದರ ಹಿಂದಿರುವ ಅಂಶವೇನು, ಯಾತಕ್ಕಾಗಿ ಇಷ್ಟೆಲ್ಲಾ ಕಿತ್ತಾಟ ಎಂಬುದನ್ನು ನೆಲ್ಸನ್ ಚಿತ್ರದಲ್ಲಿ ಹೇಳಲಿದ್ದಾರೆ.

ಇನ್ನು ಚಿತ್ರದಲ್ಲಿ ಬಾಲಿವುಡ್ ಟು ಸ್ಯಾಂಡಲ್‌ವುಡ್‌ನ ಹಲವಾರು ನಟರು ನಟಿಸಿದ್ದದ್ದು ವಿಶೇಷವಾಗಿತ್ತು. ಈ ಪೈಕಿ ಟ್ರೈಲರ್‌ನಲ್ಲಿ ಬಾಲಿವುಡ್‌ನ ಜಾಕಿ ಶ್ರಾಫ್ ಹಾಗೂ ಟಾಲಿವುಡ್‌ನ ಸುನಿಲ್ ಅವರನ್ನು ತೋರಿಸಲಾಗಿದ್ದು, ಮಲಯಾಳಂನ ಮೋಹನ್ ಲಾಲ್ ಹಾಗೂ ಕನ್ನಡದ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರನ್ನು ತೋರಿಸಿಲ್ಲ. ಈ ಮೂಲಕ ಆ ಇಬ್ಬರದ್ದು ಚಿತ್ರದಲ್ಲಿ ಯಾವ ರೀತಿಯ ಪಾತ್ರ ಹಾಗೂ ಲುಕ್ ಎಂಬುದನ್ನು ನಿರ್ದೇಶಕ ಇನ್ನೂ ಸಹ ಗೌಪ್ಯವಾಗಿಯೇ ಇಟ್ಟಿದ್ದಾರೆ.

ಟ್ರೈಲರ್ ಅನ್ನು ಅಚ್ಚುಕಟ್ಟಾಗಿ ಕಟ್ ಮಾಡಲಾಗಿದ್ದು, ಛಾಯಾಗ್ರಹಣ ಅದ್ಭುತವಾಗಿದೆ. ಇನ್ನುಳಿದಂತೆ ಅನಿರುದ್ಧ್ ಸಂಗೀತ ನಿರ್ದೇಶನ ಎಂದಿನಂತೆ ಅತ್ಯದ್ಭುತವಾಗಿದ್ದು, ಚಿತ್ರದಲ್ಲಿ ನಟಿ ರಮ್ಯಾ ಕೃಷ್ಣ ರಜಿನಿಕಾಂತ್ ಪತ್ನಿಯಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಹೀಗೆ ಸ್ಟಾರ್ ನಟನ ಚಿತ್ರವೊಂದರಲ್ಲಿ ಏನೆಲ್ಲಾ ಅಂಶಗಳಿರಬೇಕೋ ಅದನ್ನೆಲ್ಲಾ ಟ್ರೈಲರ್‌ನಲ್ಲಿಯೇ ತೋರಿಸಿರುವ ಜೈಲರ್ ಚಿತ್ರ ಗೆಲ್ಲಲಿದೆ ಎಂಬ ಊಹೆಗಳು ಬರಲಾರಂಭಿಸಿವೆ.

More from Filmibeat

English summary
Jailer Showcase: Rajinikanth's Jailer mass trailer boosting the hype of the film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X