Jailer Storyline: ಜೈಲರ್ ಚಿತ್ರದಲ್ಲಿನ ಶಿವಣ್ಣನ ಪಾತ್ರ ರಿವೀಲ್; ಚಿತ್ರದ ಕಥೆ ಲೀಕ್!

ರಜನಿಕಾಂತ್ ನಟನೆಯ ಜೈಲರ್ ಈ ವರ್ಷ ಬಿಡುಗಡೆಯಾಗಲು ತಯಾರಾಗಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೊಲಮಾವು ಕೋಕಿಲ, ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಇನ್ನು ಜೈಲರ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡಿದ್ದು, ಚಿತ್ರದ ಬಿಡುಗಡೆ ದಿನಾಂಕವೂ ಸಹ ಹತ್ತಿರ ಬರುತ್ತಿರುವ ಕಾರಣ ಜೈಲರ್ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರಚಾರ ಗಿಟ್ಟಿಸುವ ಕೆಲಸಕ್ಕೆ ಕೈಹಾಕಿದೆ.

Jailer Storyline: Jailer movie oneline story leaked and Shivarajkumar character revealed

ಮೊದಲಿಗೆ ಕಾವಾಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಜೈಲರ್ ಚಿತ್ರ ಬಳಿಕ ಟೈಗರ್ ಕಾ ಹುಕುಮ್ ಎಂಬ ಎರಡನೇ ಹಾಡನ್ನು ರಿಲೀಸ್ ಮಾಡುವ ಮೂಲಕ ಹೈಪ್ ಹೆಚ್ಚಿಸಿದೆ.

ಇನ್ನು ಜೈಲರ್ ಚಿತ್ರತಂಡ ಈ ಹಿಂದೆ ರಜನಿಕಾಂತ್ ಅವರ ವಿಶೇಷ ಟೀಸರ್ ಬಿಡುಗಡೆ ಮಾಡಿದ್ದು ಬಿಟ್ಟರೆ ಚಿತ್ರದ ಬಗ್ಗೆ ಹೆಚ್ಚೇನೂ ಅಪ್‌ಡೇಟ್‌ಗಳನ್ನು ನೀಡಿಲ್ಲ. ಇನ್ನು ಚಿತ್ರದ ಕಥೆ ಏನು, ಯಾವ ಅಂಶದ ಸುತ್ತ ಕಥೆ ಜರುಗಲಿದೆ ಎಂಬ ಮಾಹಿತಿಯಂತೂ ಎಲ್ಲಿಯೂ ಹೊರಬಿದ್ದಿರಲಿಲ್ಲ. ಆದರೀಗ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರದ ಕಥೆ ಏನು ಎಂಬುದು ಬಲ್ಲ ಮೂಲಗಳ ಮಾಹಿತಿಯಿಂದ ಹೊರಬಿದ್ದ ಸ್ಟೋರಿಲೈನ್ ಮೂಲಕ ತಿಳಿದುಬಂದಿದೆ.

ಹೌದು, ಜೈಲರ್ ಚಿತ್ರದ ಸ್ಟೋರಿ ಲೈನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪ್ರಕಾರ ಜೈಲಿನಲ್ಲಿ ಬಂಧಿಯಾಗಿರುವ ಗ್ಯಾಂಗ್‌ಸ್ಟರ್ ಓರ್ವನನ್ನು ಆತನ ಅನುಯಾಯಿಗಳು ಜೈಲಿನಿಂದ ಹೊರತರಲು ಯೋಜನೆಯೊಂದನ್ನು ರೂಪಿಸುತ್ತಾರೆ ಹಾಗೂ ಆ ಯೋಜನೆಯನ್ನು ಅದೇ ಜೈಲಿನಲ್ಲಿ ಜೈಲರ್ ಆಗಿ ಕೆಲಸ ನಿರ್ವಹಿಸುವ ನಾಯಕ ರಜನಿಕಾಂತ್ ಯಾವ ರೀತಿ ತಡೆಯುತ್ತಾರೆ ಎಂಬುದೇ ಚಿತ್ರದ ಸ್ಟೋರಿ ಲೈನ್ ಎನ್ನಲಾಗಿದೆ.

ಇನ್ನು ಈ ಚಿತ್ರದಲ್ಲಿ ರಜನಿಕಾಂತ್ ಮುತ್ತುವೇಲು ಪಾಂಡಿಯನ್ ಎಂಬ ಹೆಸರಿನ ಜೈಲರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದೇ ಮೊದಲ ಬಾರಿಗೆ ತಮಿಳು ಸಿನಿಮಾಗಾಗಿ ಬಣ್ಣ ಹಚ್ಚಿರುವ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ರಾವಣ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶಿವರಾಜ್‌ಕುಮಾರ್ ಮಾತ್ರವಲ್ಲದೇ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಟಾಲಿವುಡ್ ನಟ ಸುನಿಲ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

ಇನ್ನು ಜೈಲರ್ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಜಾಕಿ ಶ್ರಾಫ್ ಸಹ ಅಭಿನಯಿಸಿದ್ದು, ತಮನ್ನಾ ಭಾಟಿಯಾ ಹಾಗೂ ರಮ್ಯಾಕೃಷ್ಣ ಸಹ ಬಣ್ಣ ಹಚ್ಚಿದ್ದಾರೆ. ಚಿತ್ರದ ಹಾಡುಗಳು ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಚಿತ್ರ ಆಗಸ್ಟ್ 10ರಂದು ತೆರೆಗೆ ಬರಲಿದೆ.

ಈ ಚಿತ್ರ ಗೆದ್ದರೆ ರಜನಿಕಾಂತ್ ಹಾಗೂ ನಿರ್ದೇಶಕ ನೆಲ್ಸನ್ ಕುಮಾರ್ ಇಬ್ಬರೂ ಸಹ ಕಮ್‌ಬ್ಯಾಕ್ ಮಾಡಲಿದ್ದಾರೆ. ಹೌದು, ರಜನಿಕಾಂತ್ ನಟನೆಯ ಕೊನೆಯ ಸಿನಿಮಾ ಅಣ್ಣಾತ್ತೆ ಸೋಲನ್ನು ಕಂಡಿತ್ತು. ಅದೇ ರೀತಿ ನೆಲ್ಸನ್ ಕುಮಾರ್ ನಿರ್ದೇಶನದ ಕೊನೆಯ ಚಿತ್ರ ಬೀಸ್ಟ್‌ ನೆಲಕಚ್ಚಿತ್ತು. ಈ ರೀತಿ ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಿದ ಚಿತ್ರಗಳನ್ನು ನೀಡಿರುವ ಈ ಇಬ್ಬರಿಗೂ ಜೈಲರ್ ಗೆದ್ದು ಕೈ ಹಿಡಿಯಬೇಕಾದ ಅನಿವಾರ್ಯತೆ ಇದೆ.

More from Filmibeat

English summary
Jailer Storyline: Jailer movie oneline story leaked and Shivarajkumar character revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X