Jailer: ಜೈಲರ್ ಜಾತ್ರೆಯಲ್ಲಿ ಫ್ಯಾನ್ಸ್: ಬದರಿನಾಥ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಜೈಲರ್ ಗುರುವಾರ (ಆಗಸ್ಟ್ 10) ರಂದು ಥಿಯೇಟರ್‌ಗಳಿಗೆ ಲಗ್ಗೆಯಿಟ್ಟಿದ್ದು, ಅಭಿಮಾನಿಗಳು ನೆಚ್ಚಿನ ನಟನ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಂಭ್ರಮದಿಂದ ಮೆರೆಸುತ್ತಿದ್ದಾರೆ. ವಿಶ್ವದೆಲ್ಲೇಡೆ ಜೈಲರ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ನಟ ರಜನಿಕಾಂತ್ ಮಾತ್ರ ಹಿಮಾಲಯ, ಬದರಿನಾಥ ಎಂದು ದೇವಾಲಯಗಳ ದರ್ಶನಕ್ಕೆ ತೆರಳುತ್ತಿದ್ದಾರೆ.

ಶನಿವಾರ ತಲೈವಾ ರಜನಿಕಾಂತ್ ಉತ್ತರಾಖಂಡದ ಬದರಿನಾಥ ದೇವಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಪಿಟಿಐ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೋಗಳಲ್ಲಿ ರಜನಿಕಾಂತ್ ಅಭಿಮಾನಿಗಳತ್ತ ಕೈ ಬೀಸುವುದು ಮತ್ತು ದೇವಾಲಯದ ಒಳಗೆ ಹೋಗುವುದನ್ನು ಕಾಣಬಹುದು. ತನ್ನ ಅಭಿಮಾನಿಗಳೊಂದಿಗೆ ಉತ್ಸಾಹದಿಂದ ಮಾತನಾಡುತ್ತ ನಡೆಯುತ್ತಿರುವ ರಜನಿಯನ್ನು ಕಣ್ತುಂಬಿಕೊಳ್ಳಬಹುದು.

rajinikanth-visits-badrinath-temple

ಬದರಿನಾಥ್‌ಗೆ ರಜನಿಕಾಂತ್ ಭೇಟಿ

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಹಂಚಿಕೊಂಡ ಚಿಕ್ಕ ವಿಡಿಯೋದಲ್ಲಿ, ರಜನಿಕಾಂತ್ ಅವರು ಶನಿವಾರ ಉತ್ತರಾಖಂಡದ ಬದರಿನಾಥ ದೇವಾಲಯಕ್ಕೆ ಆಗಮಿಸಿದ್ದಾರೆ. ತನ್ನ ಅಭಿಮಾನಿಗಳ ಗುಂಪಿನೊಂದಿಗೆ ಕ್ಯಾಮೆರಾದತ್ತ ಕೈ ಬೀಸುತ್ತಾ, ಅವರೊಂದಿಗೆ ಮಾತನಾಡಿದ್ದಾರೆ. ರಜನಿಕಾಂತ್ ಅವರು ತಿಳಿ ನೀಲಿ ಸ್ವೆಟರ್ ಧರಿಸಿದ್ದು, ಕೈಗವಸುಗಳನ್ನು ಸಹ ಧರಿಸಿದ್ದಾರೆ.

ದೇವಾಲಯ ಪ್ರವೇಶಿಸಲು ಮೆಟ್ಟಿಲುಗಳನ್ನು ಏರುತ್ತಿದ್ದಂತೆ, ಅನೇಕ ಅಭಿಮಾನಿಗಳು ಅವರನ್ನು ಮುಟ್ಟಲು ತಮ್ಮ ಕೈಗಳನ್ನು ಚಾಚಿದ್ದಾರೆ. ಪ್ರವೇಶ ದ್ವಾರದ ಬಳಿ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ನಗುತ್ತಿರುವ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಜನಿಕಾಂತ್ ಅವರು ದೇವಾಲಯದ ಒಳಗೆ ಹೋಗುತ್ತಿದ್ದಂತೆ ಅನೇಕ ಮಂದಿ ಭದ್ರತಾ ಅಧಿಕಾರಿಗಳು ಅವರನ್ನು ಸುತ್ತುವರೆದು ಕರೆದುಕೊಂಡು ಹೋಗಿದ್ದಾರೆ.

ಜೈಲರ್ ಬಿಡುಗಡೆ

ಜೈಲರ್‌ನ ಬಿಡುಗಡೆಯನ್ನು ಹಬ್ಬವಾಗಿಸಲು ಚೆನ್ನೈ ಮತ್ತು ಬೆಂಗಳೂರಿನ ಹಲವು ಕಂಪನಿಗಳು ಆಗಸ್ಟ್ 10 ರಂದು ರಜೆ ಘೋಷಿಸಿದ್ದವು. ಹಲವರು ಬೆಳಗ್ಗಿನ ಶೋಗಳನ್ನು ನೋಡಲು ಮುಂಜಾನೆಯೇ ಥಿಯೇಟರ್‌ಗಳ ಬಳಿ ಜಮಾಯಿಸಿದ್ದರು. ತಮಿಳುನಾಡಿನಾದ್ಯಂತ 900 ಸ್ಕ್ರೀನ್‌ಗಳಲ್ಲಿ ಮೊದಲ ದಿನದಿಂದ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ. ಬೆಂಗಳೂರಿನ ಹಲವು ಥಿಯೇಟರ್‌ಗಳಲ್ಲಿ ಜೈಲರ್ ಪ್ರದರ್ಶನವಾಗುತ್ತಿದೆ.

ಜೈಲರ್ ಸಿನಿಮಾ ಕುರಿತು

ಜೈಲರ್ ಸಿನಿಮಾಗೆ ನೆಲ್ಸನ್ ನಿರ್ದೇಶನವಿದೆ. ಎರಡು ವರ್ಷಗಳ ವಿರಾಮದ ನಂತರರಜನಿಕಾಂತ್ ಜೈಲರ್ 'ಟೈಗರ್' ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್, ಶಿವರಾಜ್ ಕುಮಾರ್, ಯೋಗಿ ಬಾಬು, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಕೂಡ ನಟಿಸಿದ್ದಾರೆ.

ಚಿತ್ರ ಬಿಡುಗಡೆಯಾಗಿ ಮೂರನೇ ದಿನವೂ ಸಹ ಶೇ. 80 ಪ್ರದರ್ಶನಗಳು ಹೌಸ್ ಫುಲ್ ಆಗಿವೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 95 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಚಿತ್ರ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಅಬ್ಬರವನ್ನು ಮುಂದುವರಿಸುತ್ತಿದ್ದು, ಎರಡನೇ ದಿನ 70 ಕೋಟಿ ಕಲೆಕ್ಷನ್ ಮಾಡಿ ಎರಡು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 165 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

More from Filmibeat

English summary
Rajinikanth visits Badrinath Temple after Jailer release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X