Jailer vs Bhola Shankar: ಆಗಸ್ಟ್ 12ರಂದು ಭೋಳ ಶಂಕರ್‌ಗಿಂತ ಜೈಲರ್ ಕಲೆಕ್ಷನ್ 10 ಪಟ್ಟು ಹೆಚ್ಚು!

ಆಗಸ್ಟ್ ತಿಂಗಳ ಎರಡನೇ ವಾರ ತಮಿಳು ಹಾಗೂ ತೆಲುಗಿನ ಇಬ್ಬರು ದೊಡ್ಡ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಗೊಂಡಿವೆ. ಈ ಪೈಕಿ ಓರ್ವ ಸ್ಟಾರ್ ನಟನ ಚಿತ್ರ ಗೆದ್ದು ಬೀಗಿದರೆ, ಮತ್ತೋರ್ವ ಸ್ಟಾರ್ ನಟನ ಚಿತ್ರ ಹೀನಾಯವಾಗಿ ಸೋತಿದೆ. ಹೌದು, ಮೊನ್ನೆ ಗುರುವಾರ ( ಆಗಸ್ಟ್ 10 ) ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ತಮಿಳಿನ ಜೈಲರ್ ಚಿತ್ರ ಬಿಡುಗಡೆಗೊಂಡು ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ಶುಕ್ರವಾರ ( ಆಗಸ್ಟ್ 11 ) ಬಿಡುಗಡೆಗೊಂಡ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಸಿನಿಮಾ ಹೀನಾಯವಾಗಿ ಸೋತಿದೆ.

ರಜನಿಕಾಂತ್ ಬಹು ದಿನಗಳ ಬಳಿಕ ತಮ್ಮ ಸ್ಟಾರ್‌ಡಂ ರೇಂಜಿನ ಸಿನಿಮಾದಲ್ಲಿ ನಟಿಸಿದ್ದರೆ, ನಿರ್ದೇಶಕ ನೆಲ್ಸನ್ ದೊಡ್ಡ ಸೋಲಿನ ಬಳಿಕ ಮೈ ಕೊಡವಿ ಎದ್ದು ನಿಂತಿದ್ದಾರೆ. ಇನ್ನು ಜೈಲರ್ ಚಿತ್ರದ ಮೂಲಕ ಈ ಇಬ್ಬರು ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಹಾಗೂ ಮಲಯಾಳಂನ ಮೋಹನ್ ಲಾಲ್ ಸಹ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Jailer vs Bhola Shankar: Jailer 3rd day gross is 10 times more than Bhola Shankar 2nd day collection

ನೆಲ್ಸನ್ ಕುಮಾರ್ ಹಾಗೂ ರಜಿನಿಕಾಂತ್ ಕಾಂಬಿನೇಶನ್ ವರ್ಕ್ ಆಗಿದ್ದು, ಸಿನಿ ರಸಿಕರು ಮೋಹನ್ ಲಾಲ್ ಮತ್ತು ಶಿವರಾಜ್‌ಕುಮಾರ್ ನಟನೆಗೂ ಜೈ ಎಂದಿದ್ದಾರೆ. ಅದರಲ್ಲಿಯೂ ಶಿವರಾಜ್‌ಕುಮಾರ್ ಅತಿಥಿ ಪಾತ್ರಕ್ಕೆ ಇಡೀ ಸೌತ್ ಇಂಡಸ್ಟ್ರಿ ಫಿದಾ ಆಗಿದ್ದು, ಚಿತ್ರ ಮೊದಲ ಶೋ ಮುಗಿಯುತ್ತಿದಂತೆಯೇ ಸೂಪರ್ ಹಿಟ್ ಹಂತವನ್ನು ತಲುಪಿಬಿಟ್ಟಿದೆ.

ನಾಲ್ಕನೇ ದಿನವೂ ಸಹ ಶೇ. 80 ಪ್ರದರ್ಶನಗಳು ತುಂಬು ಮಂದಿರಗಳ ಪ್ರದರ್ಶನವನ್ನು ಜೈಲರ್ ಕಾಣುತ್ತಿದ್ದು, ಮೊದಲ 3 ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಅಬ್ಬರಿಸುತ್ತಿದೆ. ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 91 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಜೈಲರ್ ಚಿತ್ರ ಎರಡನೇ ದಿನ 53 ಕೋಟಿ ಕಲೆಕ್ಷನ್ ಮಾಡಿದೆ ಹಾಗೂ ಮೂರನೇ ದಿನ 60 ಕೋಟಿ ರೂಪಾಯಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ವರದಿ ಮಾಡಿದ್ದಾರೆ. ಈ ಮೂಲಕ ಜೈಲರ್ ಮೊದಲ 3 ದಿನಗಳಲ್ಲಿ 204 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಮೂರೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ.

ಹೀಗೆ ಜೈಲರ್ ಚಿತ್ರ ಮೂರನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ್ದರೆ, ಅತ್ತ ಮೊದಲ ದಿನವೇ ಫ್ಲಾಪ್ ಟಾಕ್ ಪಡೆದುಕೊಂಡಿದ್ದ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಎರಡನೇ ದಿನ ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಹೌದು, ಜೈಲರ್ ಚಿತ್ರ ಆಗಸ್ಟ್ 12ರಂದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 60+ ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದರೆ, ಭೋಳ ಶಂಕರ್ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಆಗಸ್ಟ್ 12ರಂದು ಕೇವಲ 6 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಹೀಗೆ ಇಬ್ಬರು ದೊಡ್ಡ ಸ್ಟಾರ್‌ಗಳ ಚಿತ್ರಗಳೆರಡರ ಬಾಕ್ಸ್ ಆಫೀಸ್ ಸಂಘರ್ಷದಲ್ಲಿ ಜೈಲರ್ ಚಿತ್ರದ ಎದುರು ಭೋಳ ಶಂಕರ್ ಹೀನಾಯವಾಗಿ ಸೋಲುಂಡಿದೆ. ಪರಿಣಾಮ ಚಿರಂಜೀವಿ ಸಿನಿಮಾ ತನ್ನದೇ ರಾಜ್ಯಗಳಲ್ಲಿ ಥಿಯೇಟರ್ ಕಳೆದುಕೊಂಡಿದೆ. ಹೌದು, ತೆಲುಗು ರಾಜ್ಯಗಳ ಕೆಲ ಚಿತ್ರಮಂದಿರಗಳಲ್ಲಿ ಭೋಳ ಶಂಕರ್ ಬದಲು ಜೈಲರ್ ಬಿಡುಗಡೆ ಮಾಡಿ ಪ್ರದರ್ಶಿಸಲಾಗುತ್ತಿದೆ.

More from Filmibeat

English summary
Jailer vs Bhola Shankar: Jailer 3rd day gross is 10 times more than Bhola Shankar 2nd day collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X