ದಳಪತಿ ದಾಂಪತ್ಯದಲ್ಲಿ ಬಿರುಕು ; ತಾಯಿಯ ಹಿಂದೆ ನಿಂತ ಮಗ - ತಂದೆಯನ್ನೇ ಅನ್ ಫಾಲೋ ಮಾಡಿದ ಜೇಸನ್

ನಿಜಾ .. ಸಂಸಾರ ಅಂದ ಮೇಲೆ ಅಲ್ಲಿ ಸರಸ - ವಿರಸ ಇದ್ದೇ ಇರುತ್ತೆ. ಯಾಕೆಂದರೆ ಇವೆರಡು ದಾಂಪತ್ಯ ಜೀವನದ ಒಂದೇ ನಾಣ್ಯದ ಎರಡು ಮುಖಗಳು. ಸರಸ ವಿರಸ ಮತ್ತು ಸಾಮರಸ್ಯ ಇದ್ದರೆನೇ ಅದು ಪರಿಪೂರ್ಣ ಸಂಸಾರ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದೆ ಎಲ್ಲಾ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು.

ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು. ಆದರೆ.. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಉಂಡು ಮಲಗಿದ ನಂತರ ಕೂಡ ಮೂಡಿದ ಬಿರುಕು ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ.

Jason Sanjay UNFOLLOWS Vijay The Silent Signal That Confirms the Thalapathy Family Feud

ಅದರಲ್ಲಿಯೂ ಅಕ್ರಮ ಸಂಬಂಧದ ವಾಸನೆ ಇಬ್ಬರಲ್ಲಿ ಯಾರಾದರೂ ಒಬ್ಬರ ಮೂಗಿಗೆ ಬಡಿದರೂ ಮುಗೀತು. ಆ ಸಂಬಂಧ ಅಂತ್ಯವಾದಂತೆಯೇ. ಇದಕ್ಕೆ ಸದ್ಯ ಜ್ವಲಂತ ಉದಾಹರಣೆಯಂತೆ ಕಣ್ಮುಂದೆ ಇಳಯ ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಇದೆ. ಚಿತ್ರರಂಗದ ಚೆಲುವೆಯ ಮೇಲೆ ವಿಜಯ್ ಅವರಿಗೆ ಇರುವ ಮೋಹ ಮತ್ತು ದಾಹ 26-27 ವರ್ಷದ ಸಂಬಂಧವನ್ನು ಬಲಿ ಪಡೆದಿದೆ.

ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಸಲ್ಲಿಸಲಾದ ವಿಚ್ಚೇದನದ ಅರ್ಜಿಯಲ್ಲಿ ವಿಜಯ್ ವಿರುದ್ಧ ಸಂಗೀತಾ ಹಲವು ಗಂಭೀರ ಆರೋಪ ಮಾಡಿದ್ದಾರೆ. ಈ ವೈಯಕ್ತಿಕ ವಿಚಾರ ಮತ್ತು ವಿವಾದದಿಂದಾಗಿ ವಿಜಯ್ ರಾಜಕೀಯ ಜೀವನದ ಮೇಲೀಗ ಮೋಡ ಕವಿದ ವಾತಾವರಣ ಇದೆ.

ಯಾಕೆಂದರೆ. ಜನರ ಎದುರು ವಿಜಯ್ ತಮ್ಮ "ಫ್ಯಾಮಿಲಿ ಮ್ಯಾನ್" ಇಮೇಜ್‌ನೊಂದಿಗೆ ಹೋಗಲು ಸಾಧ್ಯ ಇಲ್ಲ. ಇನ್ನೂ ಗಂಡ ಹೆಂಡ್ತಿಯ ಈ ಜಗಳದಿಂದಾಗಿ ವಿರೋಧ ಪಕ್ಷದವರ ಪಾಲಿಗೆ ಲಡ್ಡು ಬಂದು ಬಾಯಿಗೆ ಬಂದಂತೆ ಆಗಿದೆ. ಹೀಗಿರುವಾಗ ಇದೀಗ ವಿಜಯ್‌ಗೆ ಅವರ ಮಗನೇ ಶಾಕ್ ನೀಡಿದ್ದಾರೆ.

ಹೌದು, ಪತಿಯ ವಿರುದ್ಧ ಸಂಗೀತಾ ಕಾನೂನು ಸಮರ ಸಾರಿದ ಬೆನ್ನಲ್ಲಿಯೇ ಇಬ್ಬರ ಮಗ ಮತ್ತು ಉದಯೋನ್ಮುಖ ನಿರ್ದೇಶಕ ಜೇಸನ್ ಸಂಜಯ್, ತಮ್ಮ ತಂದೆ ವಿಜಯ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ''ಅನ್‌ ಫಾಲೋ'' ಮಾಡಿದ್ದಾರೆ. ಈ ಮೂಲಕ ತಮ್ಮ ಬೆಂಬಲ ತಮ್ಮ ತಾಯಿಗೆ ಎಂಬ ಸಂದೇಶವನ್ನು ಜೇಸನ್ ರವಾನೆ ಮಾಡಿದ್ದಾರೆ.

jason-sanjay-unfollows-vijay-the-silent-signal-that-confirms-the-thalapathy-family-feud

ಹಾಗೇ ನೋಡಿದರೆ ಜೇಸನ್ ಸಂಜಯ್ ಅವರ ಈ ನಡೆ ನಿರೀಕ್ಷಿತವಾದದ್ದೇ. ಸಂಸಾರ ಹಳಿ ತಪ್ಪಿರುವ ಸುದ್ದಿ ಕೆಲ ವರ್ಷಗಳ ಹಿಂದೆ ಹೊರ ಬಿದ್ದಾಗಲೇ ಮಗ ಜೇಸನ್ ಮತ್ತು ಮಗಳು ದಿವ್ಯಾ ತಮ್ಮ ತಾಯಿಯ ಪರವಾಗಿಯೇ ನಿಲ್ಲುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಮಾತು ಇದೀಗ ನಿಜವಾಗಿದ್ದು, ಈ ಮೂಲಕ ಪತಿ ಮತ್ತು ಪತ್ನಿಯ ಸಂಬಂಧ ಮಾತ್ರವಲ್ಲ ತಂದೆ ಮತ್ತು ಮಗನ ಸಂಬಂಧ ಕೂಡ ಹಳಸಿದೆ ಎನ್ನುವುದು ಜಗಜ್ಜಾಹೀರಾಗಿದೆ. ಕುಟುಂಬದಲ್ಲಿನ ಬಿರುಕು ಎಲ್ಲರ ಕಣ್ಣಿಗೀಗ ಕಂಡಿದೆ.

ಸದ್ಯ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಗೀತಾ ಲಂಡನ್‌ನಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಸಂಗೀತಾ ಅವರ ಜೊತೆ ಅವರ ಮಗಳು ದಿವ್ಯಾ ಸಾಶಾ ಕೂಡ ಇದ್ದು ತಂದೆಯಿಂದ ಈಗ ಜೇಸನ್ ಸಂಜಯ್ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಜೇಸನ್ ಸಂಜಯ್ ಅವರ ಈ ನಡೆಯಿಂದ ವಿಜಯ್ ಅವರ ಅಸಂಖ್ಯಾತ ಅಭಿಮಾನಿಗಳು ಸದ್ಯ ಕಕ್ಕಾಬಿಕ್ಕಿಯಾಗಿದ್ದು, ಈ ಇಡೀ ವಿವಾದ ಮತ್ತು ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಇನ್ನೂ ಪ್ರತಿಕ್ರಿಯೆಯನ್ನು ನೀಡಬೇಕಿದೆ.

More from Filmibeat

English summary
A house divided: Jason Sanjay’s silent protest against father Vijay goes viral. As Sangeetha moves the court to end their 26-year marriage, the heir to the Thalapathy throne signals his stance. Is this the end of the iconic father-son bond? Read the latest updates here.
Read more about: vijay divorce kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X