ವಯಸ್ಸು 41 ಆದರೂ ಮದ್ವೆಯಾಗದ ಖ್ಯಾತ ನಾಯಕಿ, ಅಪರಿಚಿತ ವ್ಯಕ್ತಿಯ ಜೊತೆ ಹೇಗೆ ಬಾಳ್ವೆ ನಡೆಸಲಿ ಎಂದ ಚೆಲುವೆ..!
ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಕೇವಲ ಮದುವೆಯ ಕುರಿತು ಪ್ರಶ್ನೆಗಳನ್ನೇ ಕೇಳಿ ಕೊಡಬಾರದ ಟಾರ್ಚರ್ ಕೊಡಲು ಶುರು ಮಾಡ್ತಾರೆ.ಅದರಲ್ಲಿಯೂ ವಯಸ್ಸು 35 ದಾಟಿದರೆ ಮುಗೀತು.
ಮದುವೆಯ ವಿಚಾರವನ್ನೇ ದೊಡ್ಡದಾಗಿ ಮಾಡುತ್ತಾರೆ. ಇಲ್ಲ ಸಲ್ಲದ ಮಾತುಗಳನ್ನಾಡಲು ಶುರುಮಾಡುತ್ತಾರೆ. ಇದಕ್ಕೆ ಸದಾ ಸದ್ಯದ ಉದಾಹರಣೆ. ಹೌದು, ಸದಾ.. ದಕ್ಷಿಣ ಭಾರತೀಯ ಚಿತ್ರರಂಗದ ಸಪೂರ ಸುಂದರಿ.

'ಜಯಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸದಾ ಆ ನಂತರ ಹತ್ತು ಹಲವು ಚಿತ್ರಗಳನ್ನು ಮಾಡಿದರು. ತಮಿಳಿನ ಜೊತೆ ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೂಡ ಕಾಣಿಸಿಕೊಂಡರು. ಆ ಪೈಕಿ ಅನ್ನಿಯನ್.. ತಿರುಪತಿ.. ಶಂಕರ್ ದಾದಾ ಜಿಂದಾಬಾದ್.. ಪ್ರಮುಖವಾದವು.
ಇನ್ನು.. 2004ರಲ್ಲಿ ಮೊನಾಲಿಸಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದ ಸದಾ 'ಮೋಹಿನಿ 9886788888'.. 'ಹುಡುಗ ಹುಡುಗಿ'.. 'ಮೈಲಾರಿ'.. 'ಮಲ್ಲಿಕಾರ್ಜುನ'.. ಹಾಗೂ 'ಆರಕ್ಷಕ' ಚಿತ್ರಗಳಲ್ಲಿ ಮಿಂಚಿದರು. ಕನ್ನಡಿಗರ ಹೃದಯವನ್ನು ಕೂಡ ಗೆದ್ದರು.
ಆದರೆ ಆ ನಂತರ ಅದೇನಾಯ್ತೋ.. 2018ರಿಂದ ಅವಕಾಶಗಳಿಂದ ವಂಚಿತರಾದ ಸದಾ ಸದ್ಯ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ವೈಲ್ಡ್ ಲೈಫ್ ಫೋಟೊಗ್ರಫಿಯತ್ತ ವಾಲಿದ್ದಾರೆ. ಕ್ಯಾಮರಾನ ಹೆಗಲಿಗೇರಿಸಿಕೊಂಡು ಕಾಡು ಮೇಡು ಅಲೆದಾಡುತ್ತಿರುತ್ತಾರೆ. ವನ್ಯಜೀವಿಗಳ ಸೊಗಸಾದ ಫೋಟೊಗಳನ್ನು ಕ್ಲಿಕ್ಕಿಸುತ್ತಿರುತ್ತಾರೆ.
ಇಂಥಾ ಸದಾಗೆ ಈಗ 41ರ ಹರೆಯ. ಆದರೆ ಇನ್ನೂ ಮದುವೆಯಾಗಿಲ್ಲ. ಹೀಗಾಗಿಯೇ ಇವರು ಹೋದಲ್ಲಿ ಬಂದಲ್ಲಿ ಅನೇಕರು ಇವರಿಗೆ ಮದುವೆಯ ಕುರಿತು ಪ್ರಶ್ನೆಗಳನ್ನು ಹಲವರು ಕೇಳುತ್ತಲೇ ಇರುತ್ತಾರೆ.

ಇದರಿಂದ ಹಲವು ಬಾರಿ ಸದಾಗೆ ಕಿರಿಕಿರಿಯಾಗಿದ್ದು ಇದೆ. ಆದರೂ ಕೂಡ ಈ ಪ್ರಶ್ನೆಯನ್ನು ಕೇಳುವುದನ್ನು ಜನ ಬಿಡುತ್ತಿಲ್ಲ. ಸದಾ ಮದುವೆಯ ವಿಚಾರವನ್ನು ತಮ್ಮ ತಲೆಯಿಂದ ತೆಗೆದು ಹಾಕುತ್ತಿಲ್ಲ. ಇದಕ್ಕೆ ಮತ್ತೊಂದು ಪುರಾವೆ ಎನ್ನುವಂತೆ ಸದ್ಯ ಸದಾಗೆ ಸಂದರ್ಶನವೊಂದರಲ್ಲಿ ಮತ್ತೊಮ್ಮೆ ಮದುವೆಯ ಕುರಿತು ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಗೆ ಸದಾ ಉತ್ತರವನ್ನು ಕೂಡ ನೀಡಿದ್ಧಾರೆ.
ಈ ಕುರಿತು ಮಾತನಾಡಿರುವ ಸದಾ ನಾನು ಮದುವೆಯ ವಿರೋಧಿ ಅಲ್ಲ ಆದರೆ ನನಗೆ ಈಗ ನನ್ನ ಮದುವೆಯ ವಯಸ್ಸು ಮೀರಿ ಹೋಗಿದೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಮದುವೆಯಾಗಲು ಬಯಸುವುದಿಲ್ಲ ಎಂದು ಹೇಳಿರುವ ಸದಾ ಸಮಾಜದ ಒತ್ತಡಕ್ಕೆ ಮಣಿದು ಮದುವೆಯಾಗಲು ನನಗೆ ಇಷ್ಟ ಇಲ್ಲ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ನನಗೆ ಅರೆಂಜ್ ಮ್ಯಾರೇಜ್‌ನಲ್ಲಿ ನಂಬಿಕೆ ಇಲ್ಲ ಯಾಕೆಂದರೆ ನನ್ನ ತಂದೆ ತಾಯಿ ಅವರದ್ದು ಲವ್ ಮ್ಯಾರೇಜ್ ಆಗಿತ್ತು ಎಂದಿರುವ ಸದಾ ಅಪರಿಚಿತ ವ್ಯಕ್ತಿಯ ಜೊತೆ ಮದುವೆಯಾಗುವ ಯೋಚನೆ ಮಾಡಿದರೆ ನನಗೆ ಭಯ ಆಗುತ್ತೆ ಎಂದು ಹೇಳಿದ್ಧಾರೆ.
ಹಾಗಂಥ ಎಲ್ಲರಿಗೆ ನನ್ನಂತೆ ಭಯ ಆಗಬೇಕು ಎಂದೇನು ಇಲ್ಲ ಕೆಲವರು ಅರೆಂಜ್ ಮ್ಯಾರೇಜ್ ಮಾಡಿಕೊಂಡು ಕೂಡ ಖುಷಿಯಾಗಿದ್ದಾರೆ ಆದರೆ ನನ್ನಿಂದ ಅದು ಸಾಧ್ಯ ಇಲ್ಲ ಎಂದು ಹೇಳಿರುವ ಸದಾ ನಾನು ನನ್ನ ಮನಸ್ಸು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾರೆ. ನಾನು ಖುಷಿಯಾಗಿದ್ದೇನೆ ನನಗೆ ಹೀಗೆ ಇರಲು ಇಷ್ಟ ಎಂದು ಕೂಡ ಹೇಳಿದ್ಧಾರೆ. ಮದುವೆಯಾದರೆ ಈ ಸಂತೋಷ ನನಗೆ ಸಿಗುತ್ತದೆ ಎಂಬ ಭರವಸೆ ನನಗಿಲ್ಲ ಎಂದು ಕೂಡ ನಟಿ ಸದಾ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications











