3ನೇ ವ್ಯಕ್ತಿಯಿಂದ ಡಿವೋರ್ಸ್; ತಿಂಗಳಿಗೆ ಜಯಂ ರವಿ ಪತ್ನಿ ಕೇಳಿದ ಜೀವನಾಂಶ ಎಷ್ಟು?
ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ವಿವಾದ ಭಾರೀ ಚರ್ಚೆ ಹುಟ್ಟಾಕ್ಕಿದೆ. ಗಂಡ- ಹೆಂಡತಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯುತ್ತಿದೆ. ರವಿ ದೂರಾಗಲು ಬಿಗಿಪಟ್ಟು ಹಿಡಿದಿದ್ದಾರೆ.
15 ವರ್ಷಗಳ ಹಿಂದೆ ರವಿ ಮೋಹನ್ ಹಾಗೂ ಆರತಿ ಮದುವೆ ನಡೆದಿತ್ತು. ದಂಪತಿಗೆ ಇಬ್ಬರೂ ಗಂಡು ಮಕ್ಕಳು ಇದ್ದಾರೆ. ಕೆಲ ಭಿನ್ನಾಭಿಪ್ರಾಯಗಳಿಂದ ಪತ್ನಿಯಿಂದ ದೂರಾಗಲು ರವಿ ಮುಂದಾಗಿದ್ದಾರೆ. ಆದರೆ ಆರತಿ ಮಕ್ಕಳಿಗಾಗಿ ಒಟ್ಟಿಗೆ ಇರೋಣ ಎನ್ನುತ್ತಿದ್ದಾರೆ. ಜಯಂ ರವಿ ಮಾತ್ರ ಮಾನಸಿಕ ಕಿರುಕುಳದಿಂದ ಬೇಸತ್ತಿದ್ದೇನೆ. ಇನ್ನು ನನಗೆ ಆರತಿ ಜೊತೆ ಬದುಕುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಗಂಡ- ಹೆಂಡತಿ ಇಬ್ಬರೂ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಮತ್ತೊಂದು ಕಡೆ ಗಾಯಕಿ ಕನೀಶಾ ಫ್ರಾನ್ಸಿಸ್ ಅವರಿಗೆ ರವಿ ಹತ್ತಿರವಾಗಿದ್ದಾರೆ. ನಾವಿಬ್ಬರು ದೂರಾಗಲು 3ನೇ ವ್ಯಕ್ತಿ ಕಾರಣ ಎನ್ನುವ ಅರ್ಥದಲ್ಲಿ ಇದೀಗ ಆರತಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ. ಇದೆಲ್ಲದರ ನಡುವೆ ಆರತಿ ತಿಂಗಳಿಗೆ ಲಕ್ಷ ಲಕ್ಷ ಜೀವನಾಂಶ ಕೇಳಿದ್ದಾರೆ ಎಂದು ವರದಿಯಾಗಿದೆ.
ಬುಧವಾರ(ಮೇ 21) ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ರವಿ ಹಾಗೂ ಆರತಿ ಡಿವೋರ್ಸ್ ಅರ್ಜಿ ವಿಚಾರಣೆ ನಡೆಯಿತು. ಇದೇ ವೇಳೆ ಆರತಿ ಜೀವನಾಂಶ ಕೋರಿ ಪಿಟಿಷನ್ ಹಾಕಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಇಬ್ಬರ ವಾದ ಆಲಿಸಿದ ಕೋರ್ಟ್ ರಾಜಿ ಮಾಡಿಕೊಳ್ಳಲು ಕೌನ್ಸಲಿಂಗ್‌ಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ರವಿ ಮಾತ್ರ ಯಾವುದೇ ಕಾರಣಕ್ಕೂ ಆರತಿ ಜೊತೆ ಬದುಕುವುದಿಲ್ಲ. ಡಿವೋರ್ಸ್ ಬೇಕು ಎಂದು ತಮ್ಮ ಲೀಗಲ್ ತಂಡದ ಮೂಲದ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಹಾಗಾಗಿ ಆರತಿ ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಕೇಳಿ ಪಿಟಿಷನ್ ಹಾಕಿದ್ದಾರೆ ಎನ್ನಲಾಗ್ತಿದೆ.
ಅರ್ಜಿನ ಮುಂದಿನ ವಿಚಾರಣೆಯನ್ನು ಕೋರ್ಟ್ ಜೂನ್ 12ಕ್ಕೆ ಮುಂದೂಡಿದೆ. ಜೀವನ ಸಾಗಿಸಲು ಆರತಿ ತಿಂಗಳಿಗೆ 40 ಲಕ್ಷ ರೂ. ಕೊಡಬೇಕು ಎಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ರವಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೊ ಪೋಸ್ಟ್ ಮಾಡಿದ್ದಾರೆ. ಫೋನ್‌ನಲ್ಲಿ ಮಾತನಾಡುತ್ತಿರುವಂತೆ ಕ್ಲಿಕ್ಕಿಸಿರುವ ಫೋಟೊ ಹಾಕಿ "ಸುದ್ದಿ ಬರ್ತಿದೆ" ಎಂದು ಬರೆದುಕೊಂಡಿದ್ದಾರೆ. ಡಿವೋರ್ಸ್ ಸಿಗುವ ಬಗ್ಗೆ ಈ ರೀತಿ ಗೂಡಾರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ಜಯಂ ರವಿ ಆರೋಪಗಳಿಗೆಲ್ಲಾ ಆರತಿ ಸುದೀರ್ಘ ಪತ್ರ ಬರೆದು ತಿರುಗೇಟು ನೀಡಿದ್ದರು. 3ನೇ ವ್ಯಕ್ತಿಯಿಂದ ಇದೆಲ್ಲಾ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಪರೋಕ್ಷವಾಗಿ ಕನೀಶಾ ಫ್ರಾನ್ಸಿಸ್ ಇದಕ್ಕೆಲ್ಲಾ ಕಾರಣ ಎಂದು ಆರತಿ ಹೇಳುತ್ತಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. "ನಾವು ಬೇರೆಯಾಗಲು ಹಣ ಅಥವಾ ಅಧಿಕಾರ ಕಾರಣವಲ್ಲ. ಅದು ಮೂರನೇ ವ್ಯಕ್ತಿ. ಈ ಬಗ್ಗೆ ನಾನು ಊಹಾಪೋಹ ಹರಡುತ್ತಿಲ್ಲ. ನನ್ನ ಬಳಿ ಎಲ್ಲದಕ್ಕೂ ಸಾಕ್ಷಿ ಇದೆ" ಎಂದು ಆಕೆ ಬರೆದುಕೊಂಡಿದ್ದಾರೆ.
ಡಿವೋರ್ಸ್ ಕೋರಿ ಜಯಂ ರವಿ ಕೋರ್ಟ್ ಮೆಟ್ಟಿಲೇರಿದ್ದಾಗಲೇ ಕೆನಿಶಾ ಫ್ರಾನ್ಸಿಸ್ ಹೆಸರು ಕೇಳಿಬಂದಿತ್ತು. ರವಿ ಹಾಗೂ ಕೆನಿಶಾ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ರವಿ, ನಿಮ್ಮ ಊಹೆ ಸುಳ್ಳು. ಯಾವುದಕ್ಕೋ ಯಾವುದನ್ನು ಲಿಂಕ್ ಮಾಡಿ ಏನು ಹೇಳಬೇಡಿ. ನಾನು- ಕೆನಿಶಾ ಸ್ನೇಹಿತರು ಅಷ್ಟೇ ಎಂದಿದ್ದರು.
ವಾರದ ಹಿಂದೆ ರವಿ ಹಾಗೂ ಕೆನೀಶಾ ಮದುವೆ ಸಮಾರಂಭದಲ್ಲಿ ಪತಿ- ಪತ್ನಿ ರೀತಿ ಒಂದೇ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕೈ ಕೈ ಹಿಡಿದು ದರ್ಶನ ಕೊಟ್ಟಿದ್ದರು. ಇದನ್ನು ನೋಡಿ ಇಬ್ಬರು ಡೇಟಿಂಗ್ ನಡೆಸುತ್ತಿರುವುದು ನಿಜ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಇತ್ತೀಚೆಗೆ 4 ಪುಟಗಳ ಪತ್ರ ಬರೆದಿದ್ದ ರವಿ, ಕೆನೀಶಾ ನನಗೆ ಸ್ನೇಹಿತೆಗಿಂತ ಹೆಚ್ಚು, ಆಕೆ ನನ್ನ ಲೈಫ್‌ಲೈನ್" ಎಂದು ಬರೆದುಕೊಂಡಿದ್ದರು.


Click it and Unblock the Notifications











