ಪಾಸ್‌ವರ್ಡ್ ಕೊಡದೇ ಮೊಂಡಾಟ; ನಟ ಜಯಂ ರವಿಗೆ ಪತ್ನಿಯಿಂದಲೇ ಕಿರುಕುಳ?

ಕಾಲಿವುಡ್ ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಜಯಂ ರವಿ ತಮ್ಮ ಡಿವೋರ್ಸ್ ಬಗ್ಗೆ ಪೋಸ್ಟ್ ಮಾಡಿದ್ದರು. ಆದರೆ ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ನನ್ನ ಅನುಮತಿ ಪಡೆಯದೇ ತಮ್ಮ ಪತಿ ಈ ಘೋಷಣೆ ಮಾಡಿದ್ದಾರೆ ಎಂದು ಪತ್ನಿ ಆರತಿ ಸ್ಪಷ್ಟನೆ ನೀಡಿದ್ದರು.

ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ನಟ ಇಂತಾದೊಂದು ನಿರ್ಧಾರ ಕೈಗೊಳ್ಳಲು ಕಾರಣವೇನು? ಎನ್ನುವ ಇನ್ನುವ ಬಗ್ಗೆಯೂ ಕೆಲವರು ಹುಡುಕಾಟ ನಡೆಸಿದ್ದರು. ಆಗ ಒಬ್ಬ ಗಾಯಕಿಯ ಹೆಸರು ಕೇಳಿಬಂದಿತ್ತು. ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಜಯಂ ರವಿಗೆ ಆತ್ಮೀಯ ಒಡನಾಟವಿದೆ. ಇದೇ ಕಾರಣಕ್ಕೆ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎನ್ನುವ ಗುಸುಗುಸು ಶುರುವಾಗಿತ್ತು.

Jayam Ravi regains his Instagram account which was on hold by his wife Aarti

ತಮ್ಮ ಡಿವೋರ್ಸ್ ವಿಚಾರಕ್ಕೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಹೆಸರು ಎಳೆದು ತಂದ ಬಗ್ಗೆ ನಟ ಜಯಂ ರವಿ ಬೇಸರ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಏನೇನೋ ಸುದ್ದಿ ಹರಡಬೇಡಿ. ಆಕೆಗೂ ನನ್ನ ಡಿವೋರ್ಸ್‌ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಈ ಬಗ್ಗೆ ಮಾತನಾಡಿದ್ದಾರೆ. ಗಾಯಕಿ ಕೆನಿಶಾ ಒಳ್ಳೆ ಗಾಯಕಿ, ಸ್ವಂತ ಪರಿಶ್ರಮದಿಂದ ಬೆಳೆದು ಬಂದವರು. ಆಕೆ ಒಬ್ಬ ಸೈಕಾಲಜಿಸ್ಟ್. ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ನಾವಿಬ್ಬರು ಒಂದು ಹೀಲಿಂಗ್ ಸೆಂಟರ್ ಆರಂಭಿಸಬೇಕು ಎಂದುಕೊಂಡಿದ್ದೇವೆ ಅಷ್ಟೇ ಎಂದಿದ್ದಾರೆ.

ಇನ್ನು ಜಯಂ ರವಿ ಅವರ ಪತ್ನಿ ಆರತಿ ಬಗ್ಗೆ ಖ್ಯಾತ ನಟಿ ಖುಷ್ಬೂ ಬ್ಯಾಟ್ ಬೀಸಿದ್ದಾರೆ ಎನ್ನಲಾಗ್ತಿದೆ. ಖುಷ್ಬು ಹಾಗೂ ಆರತಿ ಸ್ನೇಹಿತರು. ಇತ್ತೀಚೆಗೆ ಸುದೀರ್ಘ ಟ್ವೀಟ್ ಮಾಡಿರುವ ಖುಷ್ಬೂ ಒಬ್ಬ ರಿಯಲ್ ಮ್ಯಾನ್ ಯಾರು ಗೊತ್ತಾ? ಎಂದು ಬರೆದುಕೊಂಡಿದ್ದಾರೆ. ಗಂಡ ಹೆಂಡತಿ ಅನ್ಯೋನ್ಯವಾಗಿ ಬದುಕಬೇಕು, ಹೆಂಡತಿಗೆ ಗೌರವ ಕೊಡಬೇಕು, ಸಣ್ಣ ಪುಟ್ಟ ತಪ್ಪು ಆಗುತ್ತದೆ. ಅದನ್ನೆಲ್ಲಾ ಮೀರಿ ಇಬ್ಬರು ಜೀವನ ನಡೆಸಬೇಕು ಎಂದು ಬರೆದುಕೊಂಡಿದ್ದಾರೆ. ಆದರೆ ಯಾರ ಹೆಸರನ್ನು ಆಕೆ ಉಲ್ಲೇಖಿಸಿಲ್ಲ.

ಇದ್ದಕ್ಕಿದಂತೆ ದಾಂಪತ್ಯದ ಜೀವನದ ಬಗ್ಗೆ ಖುಷ್ಬೂ ಪಾಠ ಮಾಡಿದ್ದು ನೋಡಿ ಆರತಿ ಅವರನ್ನು ವಹಿಸಿಕೊಂಡು ಜಯಂ ರವಿಗೆ ಕಿವಿಮಾತು ಹೇಳಿದ್ದಾರೆ ಎಂದು ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಇದೀಗ ಜಯಂ ರವಿ ಇನ್‌ಸ್ಟಾಗ್ರಾಮ್ ಅಕೌಂಟ್ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ. ಕೆಲ ವರ್ಷಗಳಿಂದ ಜಯಂ ರವಿ ಇನ್‌ಸ್ಟಾಗ್ರಾಮ್ ಅಕೌಂಟ್ ಹೊಂದಿದ್ದಾರೆ. ಆದರೆ ಅದನ್ನು ಪತ್ನಿ ಆರತಿ ಹ್ಯಾಂಡಲ್ ಮಾಡುತ್ತಿದ್ದರು. ಭಿನ್ನಾಭಿಪ್ರಾಯಗಳು ಶುರುವಾದ ಬಳಿಕ ಅಕೌಂಟ್ ಪಾಸ್‌ವರ್ಡ್ ಕೇಳಿದರೆ ಕೊಟ್ಟಿರಲಿಲ್ಲ ಎನ್ನಲಾಗ್ತಿದೆ.

ಜಯಂ ರವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಿತ್ತು. ತಮ್ಮ ಮುಂದಿನ ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದಂತೆ ಫೋಟೊ, ವೀಡಿಯೋ ಹಂಚಿಕೊಳ್ಳಬೇಕು ಇನ್‌ಸ್ಟಾಗ್ರಾಮ್ ಅಕೌಂಟ್ ಪಾಸ್‌ವರ್ಡ್ ಕೇಳಿದರೂ ಪತ್ನಿ ಆರತಿ ಕೊಟ್ಟಿರಲಿಲ್ಲವಂತೆ. ಹರಸಾಹಸ ಪಟ್ಟು ಕೊನೆಗೂ ಜಯಂರವಿ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಆಕ್ಸೆಸ್ ಪಡೆದುಕೊಂಡಿದ್ದಾರೆ. ಇದೀಗ ಹೊಸ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. "ಇದು ನನ್ನ ಹೊಸ ಅಧ್ಯಾಯ" ಎನ್ನುವಂತೆ ಫೋಟೊ ಹಾಕಿ ಬರೆದುಕೊಂಡಿದ್ದಾರೆ.

ಜಯಂ ರವಿಗೆ ಅವರ ಇನ್‌ಸ್ಟಾಗ್ರಾಮ್ ಅಕೌಂಟ್ ಆಕ್ಸೆಸ್ ಕೊಡದೇ ಪತ್ನಿ ಆರತಿ ಮೊಂಡಾಟ ಮಾಡಿದ್ಯಾಕೆ? ಇದ್ಯಾವ ವರಸೆ? ಇದು ಒಂದು ರೀತಿಯಲ್ಲಿ ಕಿರುಕುಳ ಅಲ್ಲವೇ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಟಾಕ್ಸಿಕ್ ಲೈಫ್ ಬೇಡ ಎಂದೇ ಜಯಂ ರವಿ ಡಿವೋರ್ಸ್‌ಗೆ ಮುಂದಾಗಿದ್ದಾರೆ. ಎಷ್ಟು ದಿನ ಸಹಿಸಿಕೊಳ್ಳುವುದು, ಅವಳ ದಾರಿ ಅವಳಿಗೆ, ನನ್ನ ದಾರಿ ನನಗೆ ಎಂದು ಡಿವೋರ್ಸ್ ನಿರ್ಧಾರಕ್ಕೆ ಬಂದಿದ್ದಾರೆ ಅಭಿಮಾನಿಗಳು ಪರವಹಿಸಿ ಮಾತನಾಡುತ್ತಿದ್ದಾರೆ.

ಇನ್‌ಸ್ಟಾ ಅಕೌಂಟ್‌ ಪಾಸ್‌ವರ್ಡ್ ಕೊಡುವಂತೆ ಎಷ್ಟು ಬಾರಿ ಕೇಳಿದರೂ ಪತ್ನಿ ಸ್ಪಂದಿಸದೇ ಇದ್ದಾಗ ಜಯಂ ರವಿ ಮೆಟಾಗೆ ದೂರು ನೀಡಿದ್ದಾರೆ. ಹಳೇ ಖಾತೆ ಬದಲಿಸಿ, ಹೊಸ ಫೋನ್ ನಂಬರ್ ಜೊತೆ ಲಿಂಕ್ ಮಾಡಿ ಮೆಟಾ ಜಯಂ ರವಿಗೆ ಆಕ್ಸೆಸ್ ಕೊಟ್ಟಿದೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್‌ವೊಂದು ವೈರಲ್ ಆಗುತ್ತಿದೆ.

More from Filmibeat

English summary
Jayam Ravi finally recovered his Instagram account, post- The new me
Read more about: jayam ravi tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X