ನಟ ಜಯಂ ರವಿ- ಆರತಿ ವಿಚ್ಛೇದನಕ್ಕೆ ಮುಂದಾದ್ರಾ? ಇದೇನಾ ಸುಳಿವು?

ಬಣ್ಣದಲೋಕದಲ್ಲಿ ಡಿವೋರ್ಸ್ ಸುದ್ದಿ ಹೆಚ್ಚಾಗುತ್ತಿದೆ. ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ತಾರೆಯರು ಭಿನ್ನಾಭಿಪ್ರಾಯಗಳಿಂದ ದೂರಾಗಲು ಮುಂದಾಗಿದ್ದಾರೆ. ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಎಲ್ಲೆಲ್ಲೂ ಇದೇ ಸುದ್ದಿ ಸದ್ದು ಮಾಡುತ್ತಿದೆ.

ಕಾಲಿವುಡ್‌ನಲ್ಲಿ ನಟ ಧನುಷ್ ಹಾಗೂ ಐಶ್ವರ್ಯ ಈಗಾಗಲೇ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕ, ನಟ ಜಿ. ವಿ ಪ್ರಕಾಶ್ ಕೂಡ ತಮ್ಮ ಡಿವೋರ್ಸ್ ಸುದ್ದಿಯನ್ನು ಘೋಷಿಸಿದ್ದರು. ಇದೀಗ ಮತ್ತೊಬ್ಬ ನಟ ಜಯಂ ರವಿ ಹಾಗೂ ಆರತಿ ದಾಂಪತ್ಯದಲ್ಲೀ ಬಿರುಕು ಮೂಡಿದೆ ಎನ್ನುವ ಗುಸುಗುಸು ಶುರುವಾಗಿದೆ. ಆರತಿಯ ಆ ನಡೆ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

Jayam ravi wife arathi Sparks divorce Rumours Deletes All Pics With Husband

ತಮಿಳು ಸಿನಿಮಾ ಸಂಕಲನಕಾರ ಮೋಹನ್ ಪುತ್ರ ರವಿ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ 2003ರಲ್ಲಿ ಬಂದ 'ಜಯಂ' ಚಿತ್ರದಲ್ಲಿ ಹೀರೊ ಆಗಿ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಮುಂದೆ ಜಯಂ ರವಿ ಎಂದೇ ಜನಪ್ರಿಯರಾದರು. ಹಲವು ಹಿಟ್ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಬಂದ ಪೊನ್ನಿಯಿನ್ ಸೆಲ್ವನ್ ಚಿತ್ರದ ಟೈಟಲ್‌ ರೋಲ್‌ನಲ್ಲಿ ರವಿ ಬಣ್ಣ ಹಚ್ಚಿ ಗಮನ ಸೆಳೆದಿದ್ದರು.

2009ರಲ್ಲಿ ಆರತಿ ಎಂಬುವವರ ಜೊತೆ ಜಯಂ ರವಿ ಮದುವೆ ಆಗಿತ್ತು. ಕಿರುತೆರೆ ನಿರ್ಮಾಪಕ ಸುಜಾತಾ ವಿಜಯಕುಮಾರ್ ಮಗಳು ಆಕೆ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. 15 ವರ್ಷಗಳ ಬಳಿಕ ರವಿ- ಆರತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಗುಸುಗುಸು ಶುರುವಾಗಿದೆ. ಇಂತಹ ಸಮಯದಲ್ಲೇ ಆರತಿ ಇನ್‌ಸ್ಟಾಗ್ರಾಮ್‌ನಿಂದ ಪತಿ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.

Jayam ravi wife arathi Sparks divorce Rumours Deletes All Pics With Husband

ಇತ್ತೀಚೆಗೆ ಸೆಲೆಬ್ರೆಟಿಗಳು ಡಿವೋರ್ಸ್‌ಗೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನು ಒಬ್ಬರು ಅನ್‌ಫಾಲೋ ಮಾಡುವುದು, ತಮ್ಮಿಬ್ಬರ ಫೋಟೊಗಳನ್ನು ತೆಗೆದು ಹಾಕುವುದು ಮಾಡುತ್ತಾರೆ. ಹೀಗೆ ಪರೋಕ್ಷವಾಗಿ ಸುಳಿವು ಕೊಟ್ಟು ಬಳಿಕ ವಿಚ್ಚೇದನದ ಸುದ್ದಿ ಘೋಷಿಸುತ್ತಾರೆ. ಇದೀಗ ಆರತಿ ನಡೆ ಕೂಡ ಅಂತದ್ದೇ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಯಾರೊಬ್ಬರು ಪ್ರತಿಕ್ರಿಯಿಸಿಲ್ಲ.

ಸೋಶಿಯಲ್ ಮೀಡಿಯಾದಲ್ಲಂತೂ ಜಯಂ ರವಿ- ಆರತಿ ಜೋಡಿ ದೂರಾಗುತ್ತಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಆರತಿ ಪರೋಕ್ಷವಾಗಿ ಈ ಬಗ್ಗೆ ಸುಳಿವು ಕೊಟ್ಟಿದ್ದಾರೆ ಎಂದು ಚರ್ಚೆ ಆಗುತ್ತಿದೆ. ತಮಿಳು ಮಾಧ್ಯಮಗಳಲ್ಲಿ ಕೂಡ ಇದೇ ಸುದ್ದಿ ವೈರಲ್ ಆಗುತ್ತಿದೆ. ಈ ಬಗ್ಗೆ ಯಾರಾದರೂ ಪ್ರತಿಕ್ರಿಯಿಸುತ್ತಾರಾ ಕಾದು ನೋಡಬೇಕಿದೆ.

ಇನ್ನು ಜಯಂ ರವಿ 'ಪೇರಣ್ಮೈ', 'ಎಂಗೆಯುಂ ಕಾದಲ್', 'ತನಿ ಒರುವನ್', 'ಕೋಮಲಿ', 'ಪೊನ್ನಿಯನ್ ಸೆಲ್ವನ್' ಸರಣಿ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇ ವಿಭಿನ್ನ ಮ್ಯಾನರಿಸಂ, ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಸದ್ಯ 'ಬ್ರದರ್', 'ಜೀನಿ', 'ಕಾದಲಿಕ 'ನೇರಮಿಲೈ' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Amid divorce rumours, Jayam ravi wife arathi deletes husband photos;
Read more about: jayam ravi kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X