twitter
    For Quick Alerts
    ALLOW NOTIFICATIONS  
    For Daily Alerts

    ಜಸ್ಟಿಸ್ ಕೆ ಚಂದ್ರು: 'ಜೈ ಭೀಮ್' ಚಿತ್ರದ ಅಸಲಿ ಹೀರೋ

    |

    ಕಾಲಿವುಡ್ ನಟ ಸೂರ್ಯ ವಿಭಿನ್ನ ಆಯಾಮದ ಸಿನಿಮಾಗಳನ್ನು ಮಾಡುವುದರಲ್ಲಿ ಸದಾ ಮುಂದಿರುತ್ತಾರೆ. ಕಳೆದ ವರ್ಷ 'ಸೂರರೈ ಪೋಟ್ರು' ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಬಯೋಪಿಕ್ ಮೂಲಕ ಗಮನ ಸೆಳೆದಿದ್ದರು. ಇನ್ನು ಈ ವರ್ಷ 'ಜೈ ಭೀಮ್' ಚಿತ್ರದ ಮೂಲಕ ಮತ್ತೊಮ್ಮೆ ತಾನು ವಿಭಿನ್ನ ಆಯಾಮದ ಚಿತ್ರಗಳ ನಾಯಕ ನಟ ಅಂತ ಸಾಬೀತುಪಡಿಸಿಕೊಂಡಿದ್ದಾರೆ. ನವೆಂಬರ್ 2ರಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿರುವ 'ಜೈ ಭೀಮ್' ಈಗಾಗಲೇ ನೋಡುಗರ ವ್ಯಾಪಕ ಪ್ರಶಂಸೆಗೆ ಒಳಪಟ್ಟಿದೆ. ನ್ಯಾಯವಾದಿಯ ಪಾತ್ರದಲ್ಲಿ ಸೂರ್ಯ ಗಮನ ಸೆಳೆದಿದ್ದಾರೆ. 'ಜೈ ಭೀಮ್' ಚಿತ್ರದ ಬಗ್ಗೆ ಈಗ ಎಲ್ಲೆಡೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.

    ಬುಡಕಟ್ಟು ಸಮುದಾಯದ

    ಕುಟುಂಬಕ್ಕಾದ ಅನ್ಯಾಯದ ವಿರುದ್ಧ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಡುವ ನ್ಯಾಯವಾದಿಯ (ಲಾಯರ್ ಚಂದ್ರು) ಪಾತ್ರದಲ್ಲಿ ಸೂರ್ಯ ಅದ್ಭುತವಾದ ಅಭಿನಯವನ್ನು ನೀಡಿದ್ದಾರೆ. ದೇಶದಲ್ಲಿನ ರಾಜಕೀಯ ವ್ಯವಸ್ಥೆ, ಶ್ರೀಮಂತರು, ಬಡವರ ಮಧ್ಯೆ ನ್ಯಾಯಾಂಗ ವ್ಯವಸ್ಥೆಯ ಪಾತ್ರ ಹೇಗಿರುತ್ತದೆ ಎಂಬುದನ್ನು ಕೂಡ ಕಣ್ಣಿಗೆ ಕಟ್ಟುವಂತೆ ಚಿತ್ರದಲ್ಲಿ ತೋರಿಸಲಾಗಿದೆ. ವಾಸ್ತವದಲ್ಲಿ 'ಜೈಭೀಮ್' ನೈಜ ಘಟನೆಯೊಂದರ ಆಧಾರಿತ ಚಿತ್ರವಾಗಿತ್ತು, ಜಸ್ತಿಸ್ ಕೆ. ಚಂದ್ರು ಅವರು ನಿಜಜೀವನದ 'ಜೈ ಭೀಮ್'ಆಗಿದ್ದಾರೆ.

    ಸಿನಿಮಾ ಕೇವಲ ವ್ಯಾಪಾರದ ಸರಕಲ್ಲ

    ಸಿನಿಮಾ ಕೇವಲ ವ್ಯಾಪಾರದ ಸರಕಲ್ಲ

    ಬಹುತೇಕ ಸಿನಿಮಾಗಳು ಹಣಕ್ಕಾಗಿ ತಯಾರಾಗುತ್ತವೆ. ಹೀಗಾಗಿಯೇ ಸಿನಿಮಾ ಎಂಬುದು ಒಂದು ರೀತಿಯ ಫ್ಯಾಂಟಸಿ ವರ್ಲ್ಡ್. ನಾಲ್ಕು ಹೊಡೆದಾಟದ ಸೀನ್‌ಗಳು, 3 ಅದ್ದೂರಿ ಹಾಡುಗಳು, ದ್ವಂದ್ವಾರ್ಥ ತುಂಬಿದ ಹಾಸ್ಯ ದೃಶ್ಯಗಳು ಹೀಗೆ ಕೆಲವೊಂದು ಸಿದ್ಧಸೂತ್ರಗಳ ಮೇಲೆಯೇ ಇತ್ತೀಚಿನ ಬಹುತೇಕ ಸಿನಿಮಾಗಳು ನಿರ್ಮಾಣವಾಗುತ್ತವೆ. ಆದರೆ ಇದಕ್ಕೆ ವಿಭಿನ್ನವಾಗಿ ಸೃಜನಾತ್ಮಕವಾದ, ಸಮಾಜಕ್ಕೆ ಹತ್ತಿರವೆನಿಸುವ, ವ್ಯವಸ್ಥೆಯಲ್ಲಿ ಕಾಡುವ ಮೂಲಭೂತ ವಿಷಯಗಳ ಆಧಾರಿತ ಚಿತ್ರಗಳು ಕೂಡ ಬೆರಳಣಿಕೆಯಷ್ಟು ಮೂಡಿಬರುತ್ತಿವೆ. ವ್ಯವಸ್ಥೆಯಲ್ಲಿನ ಲೋಪದೋಷಗಳ, ಸಮಾಜದಲ್ಲಿನ ರಾಜಕೀಯದ ಮೇಲಾಟ, ಕೆಳವರ್ಗದ ಮತ್ತು ಶೋಷಿತರ ಧ್ವನಿಯಾಗಿ ಕೂಡ ಗಮನ ಸೆಳೆಯುತ್ತಿವೆ. ಈಗ ಇಂತಹದೇ ಸಾಲಿಗೆ ಸೇರಿದ ಮತ್ತೊಂದು ಚಿತ್ರ 'ಜೈ ಭೀಮ್'.

    ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದ್ದು ನೋಡಿದ ಪ್ರತಿಯೊಬ್ಬರ ಹೃದಯ ಗೆದ್ದಿದೆ. ವಿಮರ್ಶಕರ ಮೆಚ್ಚುಗೆಯನ್ನು ಕೂಡ ಪಡೆದಿರುವ ಈ ಚಿತ್ರದ ಬಗ್ಗೆ ಚಿತ್ರರಂಗದ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೊನೆಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಚಿತ್ರ ನೋಡಿ ಹೀರೋ ಸೂರ್ಯ ಅವರಿಗೆ ಮೆಚ್ಚುಗೆಯ ಪತ್ರ ಬರೆದಿದ್ದಾರೆ.

    'ಜೈ ಭೀಮ್' ಚಿತ್ರದಲ್ಲಿ ಅಂತಹ ಕಥೆ ಏನಿದೆ?

    'ಜೈ ಭೀಮ್' ಚಿತ್ರದಲ್ಲಿ ಅಂತಹ ಕಥೆ ಏನಿದೆ?

    ಜನಸಾಮಾನ್ಯರಿಂದ ಮೊದಲುಗೊಂಡು ವಿಮರ್ಶಕರ ವರೆಗೆ ಮೆಚ್ಚುಗೆ ಗಳಿಸುತ್ತಿರುವ 'ಜೈ ಭೀಮ್' ಚಿತ್ರದ ಕಥೆ ಏನು?

    'ಜೈ ಭೀಮ್' ಎಂಬುದು ಗರ್ಭವತಿಯಾದ ಆದಿವಾಸಿ ಮಹಿಳೆಯೊಬ್ಬಳು ಪೊಲೀಸರಿಂದ ಅನ್ಯಾಯವಾಗಿ ಬಂಧಿಸಲ್ಪಟ್ಟು, ಅಲ್ಲಿಂದ ಪೊಲೀಸ್ ಕಸ್ಟಡಿಯಿಂದ ಕಣ್ಮರೆಯಾಗಿರುವ ತನ್ನ ಪತಿಗಾಗಿ ನಡೆಸುವ ಹೋರಾಟದಲ್ಲಿ ಆಕೆಯ ಬೆಂಬಲಕ್ಕೆ ನಿಂತು ಅವರಿಗೆ ನ್ಯಾಯ ಕೊಡಿಸುತ್ತಾರೆ ಲಾಯರ್ ಚಂದ್ರು.ನೂರಾರು ವರ್ಷಗಳ ಹಿಂದೆ ನಾವು ಜಾತಿ ಭೇದ ನೋಡಿಲ್ಲ ಎನ್ನುವ ಕೆಲವರಿಗೆ ಸಾಂತ್ವನ ಹೇಳುವ ಚಿತ್ರ ಇದಾಗಿದೆ. ಆ ಆದಿವಾಸಿ ಮಹಿಳೆಯ ಪರವಾಗಿ ನಿಂತು ಹೋರಾಡುವ ನ್ಯಾಯವಾದಿ ಚಂದ್ರು ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಇದು ನೈಜ ಘಟನೆಗಳನ್ನು ಆಧಾರಿತ ಚಿತ್ರವಾಗಿದ್ದು, ನ್ಯಾಯಮೂರ್ತಿ ಕೆ.ಚಂದ್ರು, ಅವರು ನ್ಯಾಯವಾದಿಯಾಗಿದ್ದ ಸಮಯದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆದ್ದಿದ್ದ ಒಂದು ಕೇಸ್ ಆಧಾರಿತ ಚಿತ್ರ 'ಜೈಭೀಮ್'. ನ್ಯಾಯವಾದಿಯಾಗಿದ್ದ ಕೆ. ಚಂದ್ರು ಅವರು ಮುಂದೆ ಜಸ್ಟಿಸ್ ಆಗಿ ಕೂಡ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಎಲ್ಲರೂ ಜಸ್ಟೀಸ್ ಕೆ. ಚಂದ್ರು ಅವರ ಬಗ್ಗೆ ವಿಚಾರಿಸತೊಡಗಿದರೆ, ತಿಳಿಯಲು ಉತ್ಸುಕರಾಗಿದ್ದಾರೆ ಹೀಗಾಗಿ ನೆಟಿಜನ್‌ಗಳು ಅವರ ಬಗ್ಗೆ ತಿಳಿಯಲು ಸಾಕಷ್ಟು ಮಾಹಿತಿ ಪಡೆಯಲು ಆಸಕ್ತಿಯನ್ನು ಸಹ ತೋರಿಸುತ್ತಿದ್ದಾರೆ.

    ಯಾರು ಜಸ್ಟಿಸ್ ಕೆ. ಚಂದ್ರು ಅವರು?

    ಯಾರು ಜಸ್ಟಿಸ್ ಕೆ. ಚಂದ್ರು ಅವರು?

    ಮಾಜಿ ನ್ಯಾಯಮೂರ್ತಿ ಕೆ. ಚಂದ್ರು, ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆ ಸಮಯದಲ್ಲಿ ಅವರು ನೀಡಿದ ತೀರ್ಪುಗಳು ಅನೇಕ ಬಡವರ ಜೀವನವನ್ನು ಬದಲಾಯಿಸಿತು. ಅವರು ನ್ಯಾಯಮೂರ್ತಿಯಾಗಿ ಪದೋನ್ನತಿಯನ್ನು ಪಡೆಯುವ ಮೊದಲು ನ್ಯಾಯವಾದಿಯಾಗಿ ಕೂಡ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ತುಳಿತಕ್ಕೊಳಗಾದವರ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟಗಳು ಅವಿಸ್ಮರಣೀಯ. ಮಾನವ ಹಕ್ಕುಗಳಿಗಾಗಿ ಹಣ ತೆಗೆದುಕೊಳ್ಳದೆ ವಾದ ಮಂಡಿಸಿ, ಹಲವು ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ ಕೆ.ಚಂದ್ರು ಅವರು.

    ದಾಖಲೆಯ ತೀರ್ಪುಗಳನ್ನು ನೀಡಿದ ನ್ಯಾಯಾಧೀಶರು

    ದಾಖಲೆಯ ತೀರ್ಪುಗಳನ್ನು ನೀಡಿದ ನ್ಯಾಯಾಧೀಶರು

    2006 ರಲ್ಲಿ, ಮದ್ರಾಸ್ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. 2009ರಲ್ಲಿ ಅವರು ಮದ್ರಾಸ್ ಹೈಕೋರ್ಟಿನ ಪೂರ್ಣಪ್ರಮಾಣದ ನ್ಯಾಯಾಧೀಶರಾಗಿ ಪದೋನ್ನತಿಯನ್ನು ಪಡೆದರು. ಸಾಮಾನ್ಯವಾಗಿ ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚೆಂದರೆ ಒಂದು ಸಾವಿರ ತೀರ್ಪುಗಳನ್ನು ನೀಡಬಹುದು. ಆದರೆ ನ್ಯಾಯಮೂರ್ತಿ ಕೆ.ಚಂದ್ರು ತಮ್ಮ ವೃತ್ತಿ ಜೀವನದಲ್ಲಿ ಗರಿಷ್ಠ 96,000 ತೀರ್ಪುಗಳನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದರು. ಕೆ. ಚಂದ್ರು ಅವರೇ ಹೇಳುವಂತೆ ,ದಿನಕ್ಕೆ 75 ಕೇಸುಗಳನ್ನು, ವಿಚಾರಣೆ ಮಾಡಿ ತೀರ್ಪುಗಳನ್ನು ನೀಡುತ್ತಿದ್ದರು. ದೇವಾಲಯಗಳಲ್ಲಿ ಮಹಿಳಾ ಅರ್ಚಕರ ನೇಮಕ, ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಸಾಮೂಹಿಕ ಸ್ಮಶಾನಗಳ ನಿರ್ಮಾಣ ಅವರ ತೀರ್ಪುಗಳಲ್ಲಿ ನಿರ್ಣಾಯಕವಾಗಿವೆ. ಹೈಕೋರ್ಟ್ ಜಡ್ಜ್ ಆಗಿದ್ದರೂ ಗಾಸಿಪ್, ಅಬ್ಬರದಿಂದ ದೂರ ಉಳಿದಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೆಂಪು ಬಗ್ ತೆಗೆದು ನಾಲ್ವರಿಗೆ ಆದರ್ಶವಾಗುವಂತೆ ಮಾಡಿದರು. ಅಲ್ಲದೆ ಕನಿಷ್ಠ ಭದ್ರತಾ ಸಿಬ್ಬಂದಿಯನ್ನು ಸಹ ಹೊಂದಿದ್ದರು. ಅವರು 2013 ರಲ್ಲಿ ನಿವೃತ್ತರಾದರು, ಪ್ರಸ್ತುತ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.

    ಲೋಕಲ್ ಟ್ರೈನ್ ನಲ್ಲಿ ಮನೆಗೆ ಹೊರಟ ಮಾಜಿ ನ್ಯಾಯಾಧೀಶರು

    ಲೋಕಲ್ ಟ್ರೈನ್ ನಲ್ಲಿ ಮನೆಗೆ ಹೊರಟ ಮಾಜಿ ನ್ಯಾಯಾಧೀಶರು

    ವಾಸ್ತವವಾಗಿ, ನ್ಯಾಯಾಧೀಶರು ನಿವೃತ್ತರಾದರೆ, ಅವರಿಗೆ ಒಂದು ಸ್ಟಾರ್ ಹೋಟೆಲ್‌ನಲ್ಲಿ ಔತಣಕೂಟವನ್ನು ನೀಡಲಾಗುತ್ತದೆ ಮತ್ತು ಹೃತ್ಪೂರ್ವಕವಾಗಿ ಬೀಳ್ಕೊಡಲಾಗುತ್ತದೆ. ಆದರೆ ನ್ಯಾಯಮೂರ್ತಿ ಕೆ.ಚಂದ್ರು ಅವರು ನ್ಯಾಯಾಲಯದ ಆವರಣದಲ್ಲಿ ವಿದಾಯ ಹೇಳಿ ಸರ್ಕಾರ ನೀಡಿದ ಕಾರನ್ನು ಬಿಟ್ಟು ಲೋಕಲ್ ರೈಲಿನಲ್ಲಿ ಮನೆಗೆ ತೆರಳಿದರು. ಅಂತಹ ಸರಳತೆ ಕೆ. ಚಂದ್ರು ಅವರದು. ನ್ಯಾಯಮೂರ್ತಿ ಕೆ.ಚಂದ್ರು ಅವರು ವಕೀಲರು ಮತ್ತು ನ್ಯಾಯಾಧೀಶರಾಗಿ ತಮ್ಮ ಅನುಭವಗಳನ್ನು ಆಧರಿಸಿ 'ಲೆಗಸಿ ಟು ಮೈ ಕೇಸ್' ಎಂಬ ಪುಸ್ತಕವನ್ನು ಬರೆದಿದ್ದಾರೆ. 'ಜೈ ಭೀಮ್' ಸಿನಿಮಾ ಆ ಪುಸ್ತಕದಲ್ಲಿನ ಕಥೆಯೊಂದರ ಆಧಾರಿತವಾಗಿ ತೆರೆ ಕಂಡಿರುವುದು. ಅಂದಹಾಗೆ 'ಜೈ ಭೀಮ್' ಕಥಾ ವಸ್ತುವಾಗಿರುವ ಆ ಕೇಸ್ ತೆಗೆದುಕೊಂಡು ಕೆ. ಚಂದ್ರು ಅವರು ನ್ಯಾಯಕ್ಕಾಗಿ ಹೋರಾಟ ಮಾಡಿದ್ದು ಸುಮಾರು 30 ವರ್ಷಗಳ ಹಿಂದೆ. ಅದರ ನೆನಪುಗಳನ್ನು 'ಜೈ ಭೀಮ್' ಚಿತ್ರ ನೋಡಿದ ನಂತರ ಅವರು ಮತ್ತೊಮ್ಮೆ ಮೆಲಕು ಹಾಕಿಕೊಂಡಿದ್ದಾರೆ. ಇಂದು ಸಂತೃಪ್ತ ನಿವೃತ್ತಿ ಜೀವನ ನಡೆಸುತ್ತಿರುವ ನ್ಯಾಯಮೂರ್ತಿ

    ಕೆ.ಚಂದ್ರು ಅವರು ಇಂದಿಗೂ ಕೂಡ ಸಾಮಾಜಿಕ ಹೋರಾಟಗಳು, ಅದರಲ್ಲೂ ಕೆಳವರ್ಗದವರ ಹೋರಾಟಗಳಿಗೆ ನೈತಿಕ ಬೆಂಬಲವನ್ನು ನೀಡುತ್ತಲೇ ಬಂದಿದ್ದಾರೆ.

    English summary
    Actor Surya starrer Jai Bhim has been widely acclaimed, the plot is based on Justice K Chandru's real life incident.who fought for justice when he was a practicing lawyer.
    Saturday, November 6, 2021, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X