For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 22ಕ್ಕೆ ಸರಳವಾಗಿ ವಿವಾಹವಾಗಲಿದ್ದಾರೆ ನಟ ವಿಷ್ಣು ವಿಶಾಲ್-ಜ್ವಾಲಾ ಗುಟ್ಟ

  |

  ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟ ಮತ್ತು ತಮಿಳು ನಟ, ನಿರ್ಮಾಪಕ ವಿಷ್ಣು ವಿಶಾಲ್ ಅವರು ಏಪ್ರಿಲ್ 22 ರಂದು ಹೈದರಾಬಾದ್‌ನಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ.

  ಕೆಲವು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದರು. ಜ್ವಾಲಾ ಗುಟ್ಟ ಅವರ ಕಳೆದ ಹುಟ್ಟುಹಬ್ಬದಂದು ನಟ ವಿಷ್ಣು ವಿಶಾಲ್, ಜ್ವಾಲಾಗೆ ಉಂಗುರ ನೀಡಿ ಪ್ರೊಪೋಸ್ ಮಾಡಿದ್ದರು. ಆ ಚಿತ್ರವನ್ನು ಜ್ವಾಲಾ ಗುಟ್ಟ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗುತ್ತಿದೆ.

  ತಮ್ಮ ವಿವಾಹದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ವಿಷ್ಣು ವಿಶಾಲ್, 'ನಮ್ಮದು ಸರಳ ವಿವಾಹವಾಗಿರಲಿದೆ. ನಾವು ರಿಜಿಸ್ಟರ್ ಮದುವೆ ಆಗಲಿದ್ದೇವೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಾವು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಹಾಗಾಗಿ ಕೆಲವೇ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಮ್ಮ ವಿವಾಹ ಜರುಗಲಿದೆ' ಎಂದಿದ್ದಾರೆ.

  'ರಿಸೆಪ್ಷನ್ ಆಯೋಜಿಸುವ ಯೋಜನೆ ಇತ್ತು ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲ ಹಾಗಾಗಿ ರಿಸೆಪ್ಷನ್ ಅನ್ನು ಮುಂದೂಡಿದ್ದೇವೆ ಎಂದಿದ್ದಾರೆ ವಿಷ್ಣು. ಸದ್ಯಕ್ಕೆ 'ಮೋಹನ್‌ದಾಸ್' ಸಿನಿಮಾದ ಚಿತ್ರೀಕರಣದಲ್ಲಿರುವ ವಿಷ್ಣು, ಶೂಟಿಂಗ್ ಶೆಡ್ಯೂಲ್ ಮುಗಿಸಿ ಏಪ್ರಿಲ್ 20 ರಂದು ಹೈದರಾಬಾದ್‌ಗೆ ತೆರಳಿದ್ದಾರೆ.

  'ಮದುವೆಯ ಎಲ್ಲ ಅರೇಂಜ್‌ಮೆಂಟ್ಸ್‌ಗಳನ್ನು ಜ್ವಾಲಾ ನೋಡಿಕೊಳ್ಳುತ್ತಿದ್ದಾಳೆ. ಮದುವೆಯ ದಿನ ನಿಗದಿತ ಸ್ಥಳಕ್ಕೆ ಹೋಗಿ ಮದುವೆ ಆಗುವುದಷ್ಟೆ ನನ್ನ ಕೆಲಸ ಎಂದಿದ್ದಾರೆ ವಿಷ್ಣು. 'ಅದ್ಧೂರಿಯಾಗಿ ಮದುವೆ ಆಗುವ ಆಸೆ ಆಕೆಗಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಿಲ್ಲ' ಎಂದಿದ್ದಾರೆ.

  Drishyam 2 ಸಿನಿಮಾಗೆ ರೆಡಿ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada

  'ಹನಿಮೂನ್‌ ಪ್ಲಾನ್ಸ್ ಇವೆಯೇ?' ಎಂಬ ಪ್ರಶ್ನೆಗೆ. 'ಸದ್ಯಕ್ಕೆ ಖಂಡಿತ ಇಲ್ಲ. ಹೊರಗೆ ಹೋಗಲು ಇದು ಸೂಕ್ತ ಸಮಯವಲ್ಲ. ಮದುವೆಯ ನಂತರ ಕೆಲ ದಿನ ನಾವು ನಮ್ಮ ಕುಟುಂಬ ಮತ್ತು ಗೆಳೆಯರೊಟ್ಟಿಗೆ ಕಳೆಯಲಿದ್ದೇವೆ ಆ ನಂತರ ಇಬ್ಬರೂ ನಮ್ಮ-ನಮ್ಮ ಕೆಲಸಕ್ಕೆ ಮರಳಲಿದ್ದೇವೆ ಎಂದಿದ್ದಾರೆ ವಿಷ್ಣು.

  English summary
  Badminton player Jwala Gutta and actor Vishnu Vishal getting marry on April 22.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X