For Quick Alerts
  ALLOW NOTIFICATIONS  
  For Daily Alerts

  ನಟ ವಿಷ್ಣು ವಿಶಾಲ್ ಬರ್ಥಡೇಗಾಗಿ 600 ಕಿ.ಮೀ. ಪ್ರಯಾಣಿಸಿದ ಪ್ರೇಯಸಿ ಜ್ವಾಲಾ ಗುಟ್ಟಾ

  |

  ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ಪ್ರೇಮ ಪ್ರಸಂಗ ಗುಟ್ಟಾಗೇನೂ ಉಳಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಬ್ಬರ ಫೋಟೊಗಳನ್ನು ಮುಚ್ಚುಮರೆಯಿಲ್ಲದೆ ಶೇರ್ ಮಾಡುತ್ತಿರುವ ಇಬ್ಬರೂ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಮದುವೆಯಾಗುವುದಾಗಿ ಜ್ವಾಲಾ ತಿಳಿಸಿದ್ದರು. ಆದರೆ ಅಷ್ಟರಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ಬಂದಿದ್ದರಿಂದ ಮದುವೆ ಸುದ್ದಿ ತಣ್ಣಗಾಗಿತ್ತು.

  Jogi Prem : ಅಮ್ಮನನ್ನು ನೆನೆದು ಭಾವುಕರಾದ ಪ್ರೇಮ್ | Filmibeat Kannada

  ಆದರೆ ಈ ಸಂಕಷ್ಟದ ನಡುವೆಯೂ ಪ್ರೇಮಿಗಾಗಿ ಜ್ವಾಲಾ ಗುಟ್ಟಾ ಮಾಡಿರುವ ಕಾರ್ಯ ಅಚ್ಚರಿ ಮೂಡಿಸುತ್ತದೆ. ಕೆಲವು ದಿನಗಳ ಹಿಂದಷ್ಟೇ ಜನ್ಮದಿನ ಆಚರಿಸಿಕೊಂಡ ಗೆಳೆಯ ವಿಷ್ಣು ವಿಶಾಲ್ ಅವರಿಗೆ ಶುಭಾಶಯ ಕೋರುವ ಸಲುವಾಗಿಯೇ ಜ್ವಾಲಾ, ಹೈದರಾಬಾದ್‌ನಿಂದ ಚೆನ್ನೈಗೆ ಪ್ರಯಾಣಿಸಿದ್ದಾರಂತೆ. ಮುಂದೆ ಓದಿ..

  ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?

  ವಿಷ್ಣು ಬರ್ಥಡೇಗಾಗಿ ಚೆನ್ನೈಗೆ

  ವಿಷ್ಣು ಬರ್ಥಡೇಗಾಗಿ ಚೆನ್ನೈಗೆ

  ಜುಲೈ 17ರಂದು ವಿಷ್ಣು ವಿಶಾಲ್ 36ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಒಂದು ವರ್ಷದಿಂದಲೂ ಹೆಚ್ಚು ಸಮಯದಿಂದ ಡೇಟಿಂಗ್ ನಡೆಸುತ್ತಿರುವ ಜ್ವಾಲಾ, ತಮ್ಮ ಪ್ರಿಯಕರನ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಲು ಸುಮಾರು 600 ಕಿ.ಮೀ. ದೂರ ಪ್ರಯಾಣಿಸಿ ತೆರಳಿದ್ದಾರೆ.

  ವಿಷ್ಣು ಜತೆ ಸಮಯ ಕಳೆದ ಜ್ವಾಲಾ

  ವಿಷ್ಣು ಜತೆ ಸಮಯ ಕಳೆದ ಜ್ವಾಲಾ

  ಒಂದು ವಾರದ ಹಿಂದೆಯೇ ಚೆನ್ನೈಗೆ ತೆರಳಿದ್ದ ಜ್ವಾಲಾ, ವಿಷ್ಣು ಜೊತೆ ಸಮಯ ಕಳೆದಿದ್ದಾರೆ. ಈ ವಿಶೇಷ ಸಂದರ್ಭದ ಫೋಟೊಗಳನ್ನು ವಿಷ್ಣು ಹಂಚಿಕೊಂಡಿದ್ದು, ನನ್ನ ಜನ್ಮದಿನದ ಸರ್ಪ್ರೈಸ್ ಎಂದು ಹೇಳಿಕೊಂಡಿದ್ದಾರೆ. ವಿಷ್ಣು ಕುಟುಂಬದವರ ಜತೆಯಲ್ಲಿ ಜನ್ಮದಿನ ಆಚರಿಸಿದ್ದಾರೆ. ಜ್ವಾಲಾ, ಸೆಲ್ಫಿಯೊಂದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಹ್ಯಾಪಿ ಬರ್ಥಡೇ ಬೇಬಿ ಎಂದು ಬರೆದುಕೊಂಡಿದ್ದಾರೆ.

  ಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾಮಹೇಶ್ ಬಾಬು ಮೇಲೆ ಪ್ರೀತಿ ಮೊಳೆತ ಸಂದರ್ಭ ವರ್ಣಿಸಿದ ನಮ್ರತಾ

  ಇಬ್ಬರೂ ವಿಚ್ಛೇದಿತರು

  ಇಬ್ಬರೂ ವಿಚ್ಛೇದಿತರು

  ಕಳೆದ ವರ್ಷ ತಾವಿಬ್ಬರೂ ಡೇಟಿಂಗ್ ನಡೆಸುತ್ತಿರುವುದನ್ನು ಈ ಜೋಡಿ ಬಹಿರಂಗಪಡಿಸಿತ್ತು. ಮೊದಲ ಮದುವೆಗಳಿಂದ ವಿಚ್ಛೇದನ ಪಡೆದಿರುವ ಇಬ್ಬರೂ ಹೊಸ ಸಾಂಸಾರಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ. ಆದರೆ ಮದುವೆಯ ದಿನಾಂಕ ಇನ್ನೂ ಬಹಿರಂಗಪಡಿಸಿಲ್ಲ.

  ಪ್ರೀತಿಸಿ ಮದುವೆಯಾಗಿದ್ದ ವಿಷ್ಣು

  ಪ್ರೀತಿಸಿ ಮದುವೆಯಾಗಿದ್ದ ವಿಷ್ಣು

  ವಿಷ್ಣು ಕ್ರಿಕೆಟ್ ಆಟಗಾರನಾಗಿದ್ದು, ಗಾಯದ ಕಾರಣದಿಂದ ಕ್ರೀಡಾ ಬದುಕು ತೊರೆದು ನಟನೆಗೆ ಬಂದಿದ್ದರು. ಕಾಲೇಜಿನಲ್ಲಿ ರಜಿನಿ ನಟರಾಜ್ ಜತೆ ಪ್ರೀತಿಯಲ್ಲಿ ಬಿದ್ದಿದ್ದ ವಿಷ್ಣು, 2011ರಲ್ಲಿ ಮದುವೆಯಾಗಿದ್ದರು. ನಟ ಕೆ. ನಟರಾಜ್ ಅವರ ಮಗಳು ರಜಿನಿ, ವಸ್ತ್ರವಿನ್ಯಾಸಕಿಯಾಗಿದ್ದಾರೆ. ಇಬ್ಬರಿಗೂ ಆರ್ಯ ಎಂಬ ಮೂರು ವರ್ಷದ ಮಗನಿದ್ದಾನೆ. 2018ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು.

  ಚೇತನ್ ಆನಂದ್ ಜತೆ ಮದುವೆ

  ಚೇತನ್ ಆನಂದ್ ಜತೆ ಮದುವೆ

  ಜ್ವಾಲಾ ಗುಟ್ಟಾ ಕೂಡ ಮೊದಲ ಮದುವೆಯ ಬಂಧನವನ್ನು ಕಡಿದುಕೊಂಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು 2005ರಲ್ಲಿ ಮದುವೆಯಾಗಿದ್ದ ಇಬ್ಬರೂ 2011ರಲ್ಲಿ ದೂರವಾಗಿದ್ದರು. ಆಗ ಜ್ವಾಲಾ ಹೆಸರು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜತೆ ಕೇಳಿಬಂದಿತ್ತು. ಇಬ್ಬರೂ ಅದನ್ನು ನಿರಾಕರಿಸಿದ್ದರು.

  ಕ್ರಶ್ ಯಾರು? ಗುಟ್ಟು ಬಿಟ್ಟುಕೊಟ್ಟ ಕ್ಯೂಟ್ ನಟಿ ಅದಿತಿ ಪ್ರಭುದೇವಕ್ರಶ್ ಯಾರು? ಗುಟ್ಟು ಬಿಟ್ಟುಕೊಟ್ಟ ಕ್ಯೂಟ್ ನಟಿ ಅದಿತಿ ಪ್ರಭುದೇವ

  English summary
  Badminton player Jwala Gutta has travelled Chennai from Hyderabad to wish her boyfriend Vishnu Vishal on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X