ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ
ಇದೇ ವರ್ಷಾರಂಭದಲ್ಲಿ ತಮಿಳಿನ ಖ್ಯಾತ ನಟಿ ಜ್ಯೋತಿಕಾ ಅವರ ಭಾಷಣದ ತುಣುಕೊಂದು ಭಾರಿ ವಿವಾದ ಎಬ್ಬಿಸಿತ್ತು.
Recommended Video
ತಂಜಾವೂರ್ ದೇವಸ್ಥಾನವನ್ನು ಬಹಳ ಅಚ್ಚುಕಟ್ಟಾಗಿ, ಶುಭ್ರವಾಗಿ ನೋಡಿಕೊಳ್ಳಲಾಗಿದೆ. ಆದರೆ ಅದೇ ತಂಜಾವೂರ್‌ನ ಸರ್ಕಾರಿ ಆಸ್ಪತ್ರೆ ಕೆಟ್ಟದಾಗಿದೆ. ಅಲ್ಲಿ ಶುಭ್ರತೆ ಎಂಬುದಿಲ್ಲ ಎಂದಿದ್ದರು.
ಅವರ ಈ ಭಾಷಣದ ತುಣುಕು ಭಾರಿ ವೈರಲ್ ಆಗಿತ್ತು. ತಂಜಾವೂರ್ ದೇವಸ್ಥಾನವನ್ನು ಜ್ಯೂತಿಕಾ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಕೊನೆಗೆ ನಟ ಸೂರ್ಯ ಈ ಬಗ್ಗೆ ಹೇಳಿಕೆ ನೀಡಬೇಕಾಯಿತು. ಆದರೆ ಈಗ ಜ್ಯೂತಿಕಾ ಅದೇ ಆಸ್ಪತ್ರೆಗೆ ಲಕ್ಷಾಂತರ ಹಣ ದೇಣಿಗೆ ನೀಡಿದ್ದಾರೆ.

25 ಲಕ್ಷ ರುಪಾಯಿ ದೇಣಿಗೆ ಕೊಟ್ಟ ನಟಿ
ತಂಜಾವೂರ್‌ನ ಸರ್ಕಾರಿ ಆಸ್ಪತ್ರೆಯನ್ನು ಆಧುನಿಕರಣಗೊಳಿಸಲು ನಟಿ ಜ್ಯೂತಿಕಾ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ಆಸ್ಪತ್ರೆಯ ಅಭಿವೃದ್ಧಿಗೆಂದು ಹಣ
ಸರ್ಕಾರಿ ಆಸ್ಪತ್ರೆಗೆ ಆಧುನಿಕ ಯಂತ್ರೋಪಕರಣಗಳನ್ನು ಕೊಳ್ಳುವ ಜೊತೆಗೆ, ಶುಭ್ರತೆಗೆ, ಪೇಯಿಂಟ್, ನೆಲಹಾಸು, ಮಕ್ಕಳಿಗೆ ಕಿರುಪಾರ್ಕ್, ಆಧುನಿಕ ಶೌಚಾಲಯಗಳು, ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಹೀಗೆ ಹಲವು ಅಗತ್ಯಗಳಿಗೆ ಈ ಹಣವನ್ನು ಬಳಸುವಂತೆ ಸೂಚಿಸಲಾಗಿದೆ.

ಆರೋಗ್ಯ ಸಚಿವರಿಗೆ ಚೆಕ್ ಹಸ್ತಾಂತರ
ನಟ, ಜ್ಯೋತಿಕ ಪತಿ ಸೂರ್ಯ ಅವರ ಅಗರಂ ಫೌಂಡೇಶನ್‌ನ ಮೂಲಕ ಈ 25 ಲಕ್ಷ ಹಣವನ್ನು ತಮಿಳುನಾಡಿನ ಆರೋಗ್ಯ ಮಂತ್ರಿ ವಿಜಯ್ ಭಾಸ್ಕರ್ ಅವರಿಗೆ ಹಸ್ತಾಂತರಿಸಲಾಗಿದ್ದು. ಆಸ್ಪತ್ರೆಯ ಅಭಿವೃದ್ಧಿಗೆ ಮಾತ್ರವೇ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಕನ್ನಡದ ಎರಡು ಸಿನಿಮಾದಲ್ಲಿ ನಟನೆ
ಉಪೇಂದ್ರ ನಟನೆಯ ನಾಗರಹಾವು, ಒನ್, ಟು, ತ್ರೀ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿರುವ ಜ್ಯೋತಿಕ, ಖ್ಯಾತ ನಟಿ ನಗ್ಮಾ ಅವರ ಸಹೋದರಿಯೂ ಹೌದು. ಜ್ಯೋತಿಕ ಕೊನೆಯದಾಗಿ ಪೊನ್ಮಗಳ್ ವಂದಾಳ್ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗಿ ಸಖತ್ ಹಿಟ್ ಎನಿಸಿಕೊಂಡಿತು.


Click it and Unblock the Notifications











