For Quick Alerts
  ALLOW NOTIFICATIONS  
  For Daily Alerts

  ನುಡಿದಂತೆ ನಡೆದ ಜ್ಯೋತಿಕ, ಸರ್ಕಾರಿ ಆಸ್ಪತ್ರೆಗೆ 25 ಲಕ್ಷ ರು. ದೇಣಿಗೆ

  |

  ಇದೇ ವರ್ಷಾರಂಭದಲ್ಲಿ ತಮಿಳಿನ ಖ್ಯಾತ ನಟಿ ಜ್ಯೋತಿಕಾ ಅವರ ಭಾಷಣದ ತುಣುಕೊಂದು ಭಾರಿ ವಿವಾದ ಎಬ್ಬಿಸಿತ್ತು.

  Unseen “Nightout” Behind the scene video | Filmibeat Kannada

  ತಂಜಾವೂರ್ ದೇವಸ್ಥಾನವನ್ನು ಬಹಳ ಅಚ್ಚುಕಟ್ಟಾಗಿ, ಶುಭ್ರವಾಗಿ ನೋಡಿಕೊಳ್ಳಲಾಗಿದೆ. ಆದರೆ ಅದೇ ತಂಜಾವೂರ್‌ನ ಸರ್ಕಾರಿ ಆಸ್ಪತ್ರೆ ಕೆಟ್ಟದಾಗಿದೆ. ಅಲ್ಲಿ ಶುಭ್ರತೆ ಎಂಬುದಿಲ್ಲ ಎಂದಿದ್ದರು.

  ದೇವಸ್ಥಾನದ ಕುರಿತು ವಿವಾದಾತ್ಮಕ ಹೇಳಿಕೆ: ಪತ್ನಿ ಜ್ಯೋತಿಕಾ ಬೆಂಬಲಕ್ಕೆ ನಿಂತ ಸೂರ್ಯದೇವಸ್ಥಾನದ ಕುರಿತು ವಿವಾದಾತ್ಮಕ ಹೇಳಿಕೆ: ಪತ್ನಿ ಜ್ಯೋತಿಕಾ ಬೆಂಬಲಕ್ಕೆ ನಿಂತ ಸೂರ್ಯ

  ಅವರ ಈ ಭಾಷಣದ ತುಣುಕು ಭಾರಿ ವೈರಲ್ ಆಗಿತ್ತು. ತಂಜಾವೂರ್ ದೇವಸ್ಥಾನವನ್ನು ಜ್ಯೂತಿಕಾ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಕೊನೆಗೆ ನಟ ಸೂರ್ಯ ಈ ಬಗ್ಗೆ ಹೇಳಿಕೆ ನೀಡಬೇಕಾಯಿತು. ಆದರೆ ಈಗ ಜ್ಯೂತಿಕಾ ಅದೇ ಆಸ್ಪತ್ರೆಗೆ ಲಕ್ಷಾಂತರ ಹಣ ದೇಣಿಗೆ ನೀಡಿದ್ದಾರೆ.

  25 ಲಕ್ಷ ರುಪಾಯಿ ದೇಣಿಗೆ ಕೊಟ್ಟ ನಟಿ

  25 ಲಕ್ಷ ರುಪಾಯಿ ದೇಣಿಗೆ ಕೊಟ್ಟ ನಟಿ

  ತಂಜಾವೂರ್‌ನ ಸರ್ಕಾರಿ ಆಸ್ಪತ್ರೆಯನ್ನು ಆಧುನಿಕರಣಗೊಳಿಸಲು ನಟಿ ಜ್ಯೂತಿಕಾ ಬರೋಬ್ಬರಿ 25 ಲಕ್ಷ ರೂಪಾಯಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

  ಆಸ್ಪತ್ರೆಯ ಅಭಿವೃದ್ಧಿಗೆಂದು ಹಣ

  ಆಸ್ಪತ್ರೆಯ ಅಭಿವೃದ್ಧಿಗೆಂದು ಹಣ

  ಸರ್ಕಾರಿ ಆಸ್ಪತ್ರೆಗೆ ಆಧುನಿಕ ಯಂತ್ರೋಪಕರಣಗಳನ್ನು ಕೊಳ್ಳುವ ಜೊತೆಗೆ, ಶುಭ್ರತೆಗೆ, ಪೇಯಿಂಟ್‌, ನೆಲಹಾಸು, ಮಕ್ಕಳಿಗೆ ಕಿರುಪಾರ್ಕ್, ಆಧುನಿಕ ಶೌಚಾಲಯಗಳು, ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ಹೀಗೆ ಹಲವು ಅಗತ್ಯಗಳಿಗೆ ಈ ಹಣವನ್ನು ಬಳಸುವಂತೆ ಸೂಚಿಸಲಾಗಿದೆ.

  ಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿಸರಳವಾಗಿ ಮದುವೆಯಾದ ಸೂರ್ಯ-ಜ್ಯೋತಿಕಾ ಇಂಟರೆಸ್ಟಿಂಗ್ ಲವ್ ಸ್ಟೋರಿ

  ಆರೋಗ್ಯ ಸಚಿವರಿಗೆ ಚೆಕ್ ಹಸ್ತಾಂತರ

  ಆರೋಗ್ಯ ಸಚಿವರಿಗೆ ಚೆಕ್ ಹಸ್ತಾಂತರ

  ನಟ, ಜ್ಯೋತಿಕ ಪತಿ ಸೂರ್ಯ ಅವರ ಅಗರಂ ಫೌಂಡೇಶನ್‌ನ ಮೂಲಕ ಈ 25 ಲಕ್ಷ ಹಣವನ್ನು ತಮಿಳುನಾಡಿನ ಆರೋಗ್ಯ ಮಂತ್ರಿ ವಿಜಯ್ ಭಾಸ್ಕರ್ ಅವರಿಗೆ ಹಸ್ತಾಂತರಿಸಲಾಗಿದ್ದು. ಆಸ್ಪತ್ರೆಯ ಅಭಿವೃದ್ಧಿಗೆ ಮಾತ್ರವೇ ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

  ಯಾಕಾದರೂ ಅಂತಹ ಸಿನಿಮಾಗಳನ್ನು ಮಾಡಿದೆನೋ...: 'ಸಿಂಗಂ' ನಿರ್ದೇಶಕನ ಪಶ್ಚಾತ್ತಾಪಯಾಕಾದರೂ ಅಂತಹ ಸಿನಿಮಾಗಳನ್ನು ಮಾಡಿದೆನೋ...: 'ಸಿಂಗಂ' ನಿರ್ದೇಶಕನ ಪಶ್ಚಾತ್ತಾಪ

  ಕನ್ನಡದ ಎರಡು ಸಿನಿಮಾದಲ್ಲಿ ನಟನೆ

  ಕನ್ನಡದ ಎರಡು ಸಿನಿಮಾದಲ್ಲಿ ನಟನೆ

  ಉಪೇಂದ್ರ ನಟನೆಯ ನಾಗರಹಾವು, ಒನ್‌, ಟು, ತ್ರೀ ಎರಡು ಕನ್ನಡ ಸಿನಿಮಾದಲ್ಲಿ ನಟಿಸಿರುವ ಜ್ಯೋತಿಕ, ಖ್ಯಾತ ನಟಿ ನಗ್ಮಾ ಅವರ ಸಹೋದರಿಯೂ ಹೌದು. ಜ್ಯೋತಿಕ ಕೊನೆಯದಾಗಿ ಪೊನ್ಮಗಳ್ ವಂದಾಳ್ ಸಿನಿಮಾದಲ್ಲಿ ನಟಿಸಿದ್ದರು. ಸಿನಿಮಾವು ಒಟಿಟಿಯಲ್ಲಿ ಬಿಡುಗಡೆ ಆಗಿ ಸಖತ್ ಹಿಟ್ ಎನಿಸಿಕೊಂಡಿತು.

  ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್

  English summary
  Actress Jyothika donate 25 lakh rupees to develop Thanjavur government hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X