ಹಸೆಮಣೆ ಏರಲು ಸಜ್ಜಾದ 'ಹೆಬ್ಬುಲಿ' ವಿಲನ್ ಕಬೀರ್ ದುಹಾನ್ ಸಿಂಗ್

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಖಳ ನಟ ಕಬೀರ್ ದುಹಾನ್ ಸಿಂಗ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳತಿ ಡಾಲಿ ಸಿಧು ಕಬೀರ್ ಸಪ್ತಪದಿ ತುಳಿಯುತ್ತಿದ್ದಾರೆ.

Recommended Video

ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

ಕಬೀರ್ ದುಹಾನ್ ಸಿಂಗ್, ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆ ನಂತರ ಅತಿರಥ ಮತ್ತು ಉದ್ಘರ್ಷ ಸಿನಿಮಾದಲ್ಲಿಯೂ ಮಿಂಚಿರುವ ಕಬೀರ್ ಕಳೆದ ವರ್ಷ ರಿಲೀಸ್ ಆದ ಪೈಲ್ವಾನ್ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಿದ್ದಾರೆ.

ಟೋನಿ ಪಾತ್ರದ ಮೂಲಕ ಖ್ಯಾತಿಗಳಿಸಿರುವ ಕಬೀರ್, ಸುದೀಪ್ ಅವರ ಆಪ್ತ ಗೆಳೆಯ ಕೂಡ ಹೌದು. ಇದೀಗ ಕಬೀರ್ ಮದುವೆಯಾಗಲು ತಯಾರಿ ನಡೆಯುತ್ತಿದ್ದಾರೆ. ಈಗಾಗಲೆ ಕಬೀರ್ ಗೆ ಸ್ನೇಹಿತರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸುತ್ತಿದ್ದಾರೆ. ಮುಂದೆ ಓದಿ...

ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿರುವ ಕಬೀರ್

ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿರುವ ಕಬೀರ್

ಕಬೀರ್ ದುಹಾನ್ ಸಿಂಗ್, ಪ್ರೇಯಸಿ ಡಾಲಿ ಸಿಧು ಜೊತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಎಂಗೇಜ್ ಆಗಿರುವ ಈ ಜೋಡಿ, ಈ ವರ್ಷ ಮದುವೆ ಆಗಲು ನಿರ್ಧರಿಸಿದ್ದಾರೆ. ಅಂದ್ಹಾಗೆ ಇಬ್ಬರ ಮದುವೆ 2020 ಡಿಸೆಂಬರ್ ನಲ್ಲಿ ನಡೆಯಲಿದೆ.

ಸರಳವಾಗಿ ಹಸೆಮಣೆ ಏರಲಿದ್ದಾರೆ ಕಬೀರ್-ಡಾಲಿ ಸಿಧು

ಸರಳವಾಗಿ ಹಸೆಮಣೆ ಏರಲಿದ್ದಾರೆ ಕಬೀರ್-ಡಾಲಿ ಸಿಧು

ಈ ವರ್ಷದ ಆರಂಭದಲ್ಲಿಯೆ ಇಬ್ಬರು ಮದುವೆ ಆಗಲು ಸಿದ್ಧತೆ ನೆಡಸಿದ್ದರು. ಆದರೆ ಕೊರೊನಾ ವೈರಸ್ ಹಾವಳಿಯ ಪರಿಣಾಮ ಇಬ್ಬರು ಮದುವೆ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ಸದ್ಯ ಡಿಸೆಂಬರ್ ನಲ್ಲಿ ಮದುವೆ ಆಗಲು ನಿರ್ಧರಿಸಿರುವ ಕಬೀರ್ ಅದ್ದೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ತೀರ ಸರಳವಾಗಿ ಇಬ್ಬರು ಹಸೆಮಣೆ ಏರುವ ಪ್ಲಾನ್ ಮಾಡಿದ್ದಾರೆ. ಕುಟುಂಬದರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ.

ಪಂಜಾಬಿ ಮೂಲದ ಗಾಯಕಿ ಡಾಲಿ ಸಿಧು

ಪಂಜಾಬಿ ಮೂಲದ ಗಾಯಕಿ ಡಾಲಿ ಸಿಧು

ಕಬೀರ್ ಕೈ ಹಿಡಿಯುತ್ತಿರುವ ಜಾಲಿ ಸಿಧು ಪಂಜಾಬಿ ಮೂಲಕ ಖ್ಯಾತ ಗಾಯಕಿ ಇಬ್ಬರು ಸಮಾರು 5 ವರ್ಷದಿಂದ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಮದುವೆಯಾಗಲು ನಿರ್ಧರಿಸಿದ್ದಾರೆ. ಇಬ್ಬರ ಮದುವೆ ಮುಂಬೈನಲ್ಲಿ ನಡೆಯಲಿದ್ದು, ದೆಹಲಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಸಲು ಪ್ಲಾನ್ ಮಾಡಿದ್ದಾರೆ.

ಹರಿಯಾಣ ಮೂಲದ ನಟ ಕಬೀರ್

ಹರಿಯಾಣ ಮೂಲದ ನಟ ಕಬೀರ್

ಹರಿಯಾಣ ಮೂಲದ ಕಬೀರ್ ದುಹಾನ್ ಸಿಂಗ್ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ತಮಿಳು ನಟ ಅಜಿತ್ ಅಭಿನಯದ ವೇದಾಲಂ ಸಿನಿಮಾದ ಯಶಸ್ಸಿನ ನಂತರ ಕಬೀರ್ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಗಟ್ಟಿಯಾಗಿ ಬೇರುರಿದ್ದಾರೆ. ಅಪಾರ ಸಂಖ್ಯೆ ಅಭಿಮಾನಿ ಬಳಗ ಹೊಂದಿರುವ ಕಬೀರ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Hebbuli fame Actor Kabir Duhan Singh Will tie the knot with Dolly Sidhu in December 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X