ಚೆನ್ನೈನಲ್ಲಿ 'KGF' ಸಿನಿಮಾ ಕಡೆ ಬೊಟ್ಟು ಮಾಡಿದವರಿಗೆ ಉಪ್ಪಿ ಖಡಕ್‌ ಉತ್ತರ

ಬಹುನಿರೀಕ್ಷಿತ 'ಕಬ್ಜ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಉಪೇಂದ್ರ ಮತ್ತವರ ತಂಡ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಮುಂಬೈ ನಂತರ ಚೆನ್ನೈನಲ್ಲೂ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದೆ. ತಮಿಳುನಾಡಿನಲ್ಲೂ ಈ ಆಕ್ಷನ್‌ ಎಂಟರ್‌ಟೈನರ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ.

ಆರ್‌. ಚಂದ್ರು ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಮುಂದಿನ ವಾರ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈ ಫಿಕ್ಷನ್ ಪೀರಿಯಡ್ ಆಕ್ಷನ್ ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಶ್ರಿಯಾ ಶರಣ್ ಮಿಂಚಿದ್ದು ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Kabzaa Actor Upendra Superb answer to Tamil Media question about KGF movie

ನಿನ್ನೆ(ಮಾರ್ಚ್ 12) ಚೆನ್ನೈನಲ್ಲಿ 'ಕಬ್ಜ' ಸಿನಿಮಾ ಸುದ್ದಿಗೋಷ್ಠಿ ನಡೀತು. ಈ ವೇಳೆ ಪತ್ರಕರ್ತರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಒಬ್ಬರು "ಸಿನಿಮಾ ಅಂದ್ರೆ ಕಲರ್‌ಫುಲ್ ಆಗಿ ತೋರಿಸಬೇಕು. 'KGF' ಸಿನಿಮಾ ಸ್ಕ್ರೀನ್‌ ತುಂಬೆಲ್ಲಾ ಬರೀ ಕತ್ತಲು ಕತ್ತಲು. ಫುಲ್ ಬ್ಲ್ಯಾಕ್ ಬ್ಲ್ಯಾಕ್, ಕೊಂಚ ಬ್ರೌನ್ ಕಲರ್ ಇತ್ತು. ಈಗ 'ಕಬ್ಜ' ನೋಡಿದ್ರೆ ಇದ್ರಲ್ಲೂ ಬ್ಲ್ಯಾಕ್, ಬ್ರೌನ್ ಜಾಸ್ತಿ ಕಾಣಿಸ್ತಿದೆ" ಎಂದಿದ್ದಾರೆ. ಇದಕ್ಕೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿದ ಉಪ್ಪಿ "ಅಂಡರ್‌ವರ್ಲ್ಡ್ ಅಲ್ವಾ? ಯಾವಾಗ್ಲೂ ಡಾರ್ಕ್ ಆಗಿರುತ್ತೆ. ಹೊರ ಪ್ರಪಂಚ ಕಲರ್‌ಫುಲ್ ಆಗಿರುತ್ತದೆ. ಅಂಡರ್‌ವರ್ಲ್ಡ್ ಯಾವಾಗ್ಲೂ ಡಾರ್ಕ್. ಶ್ರಿಯಾ ಸಾಂಗ್‌ ಕಲರ್‌ಪುಲ್ ಆಗಿದೆ" ಎಂದು ಉತ್ತರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸೌತ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ ಎನ್ನುವ ಪ್ರಶ್ನೆಗೆ "ಅಯ್ಯೋ ಬಹಳ ಹಿಂದಿನಿಂದಲೂ ನಮ್ಮವರು ಅದ್ಭುತ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ನಾವು ಮಾಡ್ತಿದ್ದೀವಿ ಎಂದರೆ ತಪ್ಪಾಗುತ್ತದೆ. ಯಾವಾಗಿನಿಂದಲೂ ನಮ್ಮವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. ಮಲ್ಟಿಸ್ಟಾರರ್ ಚಿತ್ರಗಳ ಬಗ್ಗೆ ಮಾತನಾಡಿದ ಉಪ್ಪಿ "ಇದು ಒಳ್ಳೆಯ ಬೆಳವಣಿಗೆ. ಈಗಿನ ಕಾಲದಲ್ಲಿ ಸ್ಟಾರ್‌ ನಟರು ಒಟ್ಟಾಗಿ ನಟಿಸೋದು ನಿಜಕ್ಕೂ ಚೆನ್ನಾಗಿದೆ" ಎಂದಿದ್ದಾರೆ.

Kabzaa Actor Upendra Superb answer to Tamil Media question about KGF movie

ಇನ್ನು ತಮಿಳುನಾಡು, ತಮಿಳು ಚಿತ್ರರಂಗದ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ ಉಪೇಂದ್ರ "ನಾನು ಸಾಕಷ್ಟು ಬಾರಿ ಸಿನಿಮಾ ಚಿತ್ರೀಕರಣಕ್ಕಾಗಿ ಇಲ್ಲಿ ಬಂದಿದ್ದೇನೆ. ನನ್ನ ಮೊದಲ ಸಿನಿಮಾ 'ಎ' ಇಲ್ಲಿ ರಿಲೀಸ್ ಆಗಿತ್ತು. ಆದರೆ ಸರಿಯಾದ ಸಮಯದಲ್ಲಿ ರಿಲೀಸ್ ಆಗಲಿಲ್ಲ. ತೆಲುಗಿನಲ್ಲಿ ಚೆನ್ನಾಗಿ ಆಯಿತು. ರೀಮೆಕ್ ಕೂಡ ಮಾಡಿದರು. ಆದರೆ ಯಾಕೋ ನನ್ 'ಉಪೇಂದ್ರ' ಸಿನಿಮಾವನ್ನು ಯಾರು ರೀಮೆಕ್ ಮಾಡಲಿಲ್ಲ. 'ಸೂಪರ್' ಅಂತ ನಯನತಾರಾ ಜೊತೆ ಒಂದು ಸಿನಿಮಾ ಮಾಡಿದ್ದೆ" ಎಂದರು.

More from Filmibeat

English summary
Kabzaa Actor Upendra Superb answer to Tamil Media question about KGF movie. Kabzaa is scheduled to be released on 17 March 2023. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X