ಮದುವೆ ಕುರಿತು ಖಚಿತ ಪಡಿಸಿದ ಕಾಜಲ್ ಅಗರ್ ವಾಲ್!
30 ವರ್ಷ ವಯಸ್ಸು ದಾಟುತ್ತಿದ್ದಂತೆ ಸಿನಿಮಾ ಇಂಡಸ್ಟ್ರಿಯಲ್ಲಿ ಮದುವೆ ಕುರಿತು ಚರ್ಚೆಗಳು ಹುಟ್ಟಿಕೊಳ್ಳುತ್ತೆ. ಹೀಗೆ ಬಣ್ಣದ ಜಗತ್ತಿನಲ್ಲಿ ಮದುವೆ ವಿಷಯಕ್ಕೆ ಪದೇ ಪದೇ ಸುದ್ದಿಯಾಗುತ್ತಿರುವ ನಟಿಯರ ಪೈಕಿ ಕಾಜಲ್ ಅಗರ್ ವಾಲ್ ಕೂಡ ಒಬ್ಬರು.
ಕಾಜಲ್ ಅಗರ್ ವಾಲ್ ಮದುವೆ ಯಾವಾಗ ಎಂಬ ಪ್ರಶ್ನೆ ಮತ್ತೆ ಎದುರಾಗಿದ್ದು, ಈ ಸಲ ಪಕ್ಕಾ ಎನ್ನುತ್ತಿದ್ದಾರೆ ಕಾಜಲ್. ಟಿವಿ ಶೋವೊಂದರದಲ್ಲಿ ನಿಮ್ಮ ಮದುವೆ ಯಾವಾಗ ಎಂದಿದ್ದಕ್ಕೆ ''ಖಂಡಿತಾ ಆಗುತ್ತೇನೆ. ಪ್ಲಾನ್ ಮಾಡುತ್ತಿದ್ದೇನೆ'' ಎಂದಿದ್ದಾರೆ.
ಇನ್ನು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿದ ಕಾಜಲ್ ''ಕಾಳಜಿವುಳ್ಳವನಾಗಿರಬೇಕು, ಆಧ್ಯಾತ್ಮಿಕವಾಗಿರಬೇಕು ಇನ್ನು ಬಹಳ ಇದೆ '' ಎಂದು ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಸುದ್ದಿಯಾದಂತೆ ಉದ್ಯಮಿಯೊಬ್ಬರ ಜೊತೆ ವೈವಾಹಿಕ ಜೀವನ ಆರಂಭಿಸಲು ಕಾಜಲ್ ಸಜ್ಜಾಗಿದ್ದಾರೆ ಎನ್ನಲಾಗಿತ್ತು. ಮನೆಯವರೇ ಹುಡುಗನನ್ನು ನೋಡಿ ನಿಶ್ಚಿಯ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು.
ಸದ್ಯ, ಬಾಲಿವುಡ್ 'ಕ್ವೀನ್' ಚಿತ್ರದ ತಮಿಳು ರೀಮೇಕ್ 'ಪ್ಯಾರೀಸ್ ಪ್ಯಾರೀಸ್' ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದೆ. ಅದಾದ ಬಳಿಕ 'ಕವಚಂ', ಜಯಂ ರವಿ ಅವರ ಜೊತೆ ಒಂದು ಸಿನಿಮಾ ಹಾಗೂ ಕಮಲ್ ಹಾಸನ್ ಅವರ 'ಇಂಡಿಯನ್ 2' ಚಿತ್ರದಲ್ಲಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











