For Quick Alerts
  ALLOW NOTIFICATIONS  
  For Daily Alerts

  ಕತ್ತಿ, ಗುರಾಣಿ ಹಿಡಿದ ಕಾಜಲ್ ಅಗರ್‌ವಾಲ್: ಇಂತಹ ಸಾಹಸ ಯಾಕೆ ?

  |

  ನಟಿ ಕಾಜಲ್ ಅಗರ್‌ವಾಲ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗ್ತಿದ್ದಾರೆ. ಈಗಾಗಲೇ ಶಂಕರ್ ನಿರ್ದೇಶನದ 'ಇಂಡಿಯನ್- 2' ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕಾಗಿ ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಮಾರ್ಷಲ್ ಆರ್ಟ್ಸ್ ಕೂಡ ಕಲಿತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

  ಕೆಲ ದಿನಗಳ ಹಿಂದೆಯಷ್ಟೆ ಗಂಡು ಮಗುವಿನ ಜನ್ಮ ನೀಡಿದ್ದ ಕಾಜಲ್‌ ಅಗರ್‌ವಾಲ್ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಮಗನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ನಟಿ ಇತ್ತೀಚೆಗೆ ಮತ್ತೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಜೊತೆಗೆ ತಮ್ಮ ತಾಯಿಯಾದ ಬಳಿಕ ತಮ್ಮ ದೇಹದಲ್ಲಾದ ಬದಲಾವಣೆಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಕೆಯ ಪೋಸ್ಟ್ ಸಖತ್ ವೈರಲ್ ಆಗಿತ್ತು.

  "ತಾಯಿಯಾದ ಬಳಿಕ ನನ್ನ ದೇಹವು ಮೊದಲಿನಂತಿಲ್ಲ" ಎಂದ ನಟಿ ಕಾಜಲ್‌

  ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟನೆಯ 'ಇಂಡಿಯನ್- 2' ಚಿತ್ರದಲ್ಲಿ ಕಾಜಲ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. 2 ವರ್ಷಗಳ ಹಿಂದೆ ಸೆಟ್‌ನಲ್ಲಿ ನಡೆದ ದುರಂತದಿಂದ ಸಿನಿಮಾ ಶೂಟಿಂಗ್ ನಿಂತು ಹೋಗಿತ್ತು. ಇದೀಗ ಮತ್ತೆ ಶುರುವಾಗಿದೆ.

  ಕಳರಿ ಪಯಟ್ಟು ಕಲಿಯುತ್ತಿರುವ ಕಾಜಲ್

  ಕಳರಿ ಪಯಟ್ಟು ಕಲಿಯುತ್ತಿರುವ ಕಾಜಲ್

  ಹೌದು ನಟಿ ಕಾಜಲ್ ಅಗರ್‌ವಾಲ್ 'ಇಂಡಿಯನ್- 2' ಚಿತ್ರದ ಪಾತ್ರಕ್ಕಾಗಿ ಮಾರ್ಷನ್ ಆರ್ಟ್ಸ್ ಕಲಿತ್ತಿದ್ದಾರೆ. ಅತಿ ಪುರಾತನವಾದ ಯುದ್ಧಕ್ರೀಡೆಯಾಗಿರುವ ಕಳರಿ ಪಯಟ್ಟು ತರೆಬೇತಿ ಪಡೆದುಕೊಳ್ಳುತ್ತಿದ್ದಾರೆ. ಕತ್ತಿ ಗುರಾಣಿ ಹಿಡಿದು ನುರಿತ ತರಬೇತುದಾರರ ಬಳಿ ಈ ಯುದ್ಧ ಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಕಾಜಲ್ ಅಗರ್ವಾಲ್

  3 ವರ್ಷಗಳಿಂದ ಬಿಟ್ಟು ಬಿಟ್ಟು ಕಲಿತಿದ್ದೀನಿ

  3 ವರ್ಷಗಳಿಂದ ಬಿಟ್ಟು ಬಿಟ್ಟು ಕಲಿತಿದ್ದೀನಿ

  "ಕಳರಿ ಪಯಟ್ಟು ಭಾರತದ ಬಹಳ ಪುರಾತನ ಮಾರ್ಷಲ್ ಆರ್ಟ್ಸ್. ಷಾವೋಲಿನ್, ಕುಂಗ್‌ಫು, ಕರಾಟೆ, ಥೈಕ್ವಾಂಡೋ ಎಲ್ಲವೂ ಕಳರಿ ಪಯಟ್ಟುನಿಂದಲೇ ಹುಟ್ಟಿದ್ದು. ಈ ಯುದ್ಧಕ್ರೀಡೆಯನ್ನು ಗೆರಿಲ್ಲಾ ಯುದ್ಧದ ಮಾದರಿಯಲ್ಲಿ ಬಳಸುತ್ತಾರೆ. ಇದು ಶಾರೀರಿಕವಾಗಿ ಮಾನಸಿಕವಾಗಿ ದೃಢವಾಗಿರುವಂತೆ ಮಾಡುತ್ತದೆ. 3 ವರ್ಷಗಳಿಂದ ಬಿಟ್ಟು ಬಿಟ್ಟು ಅಭ್ಯಾಸ ಮಾಡುತ್ತಿದ್ದೀನಿ. ಆದರೆ ಬಳ ತಾಳ್ಮೆಯಿಂದ ಕಲಿಸುತ್ತಿರುವ ತರಬೇತುದಾರರಿಗೆ ನನ್ನ ಧನ್ಯವಾದ" ಎಂದು ಕಾಜಲ್ ಇನ್‌ಸ್ಟ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಪವರ್‌ಫುಲ್ ರೋಲ್‌ನಲ್ಲಿ ಮಿತ್ರಾವಿಂದ

  ಪವರ್‌ಫುಲ್ ರೋಲ್‌ನಲ್ಲಿ ಮಿತ್ರಾವಿಂದ

  ಅದ್ಭುತ ಪಾತ್ರಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕ ಶಂಕರ್ ನಿಸ್ಸೀಮರು. ಅವರ ಸಿನಿಮಾಗಳಲ್ಲಿ ನಾಯಕಿಯರು ಬರೀ ಗ್ಲಾಮರ್ ಗೊಂಬೆಯಾಗಿ ಇರುವುದಿಲ್ಲ. ಅವರಿಗೆ ಒಳ್ಳೆ ಪಾತ್ರಗಳನ್ನು ಡಿಸೈನ್ ಮಾಡ್ತಾರೆ. ಇದೀಗ 'ಇಂಡಿಯನ್'- 2 ಚಿತ್ರದಲ್ಲಿ ನಾಯಕಿ ಕಾಜಲ್‌ಗೂ ಅಂತದ್ದೇ ಪಾತ್ರವನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಆಕೆ ಈಗ ಕುದುರೆ ಸವಾರಿ, ಕಳರಿ ಪಯಟ್ಟು ರೀತಿಯ ಕಲೆಗಳನ್ನು ಕಲಿಯುತ್ತಿದ್ದಾರೆ.

  ಸೂಪರ್ ಹಿಟ್ ಸಿನಿಮಾ ಸೀಕ್ವೆಲ್

  ಸೂಪರ್ ಹಿಟ್ ಸಿನಿಮಾ ಸೀಕ್ವೆಲ್

  ಶಂಕರ್ ಹಾಗೂ ಕಮಲ್ ಹಾಸನ್‌ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಇಂಡಿಯನ್' ಸಿನಿಮಾ 90ರ ದಶಕದಲ್ಲಿ ದಾಖಲೆ ಬರೆದಿತ್ತು. ಬಾಲಿವುಡ್ ಮಂದಿ ಕೂಡ ಕಾಲಿವುಡ್‌ನತ್ತ ತಿರುಗಿ ನೋಡುವಂತಾಗಿತ್ತು. ಅದರ ಮುಂದುವರೆದ ಭಾಗ 'ಇಂಡಿಯನ್'- 2. ಕಮಲ್ ಮತ್ತೊಮ್ಮೆ ಸೇನಾಪತಿಯಾಗಿ ಬಣ್ಣ ಹಚ್ಚಿದ್ದು, ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ಸಮುದ್ರ ಖನಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

  English summary
  Kajal Agarwal practices martial art Kalaripayattu Video Goes Viral. Kajal Agarwal is now taking training in Kalaripayattu, an ancient Indian martial art For Indian 2 Movie Role.
  Sunday, September 25, 2022, 18:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X